Toxic ಸಿನಿಮಾ ಬಿಡುಗಡೆ ಮುಂದಿನ ತಿಂಗಳು ಆಗಲಿದ್ದು, ಸಿನಿಮಾಕ್ಕೆ ಅದ್ಯಾವ ಪರಿ ಬೇಡಿಕೆ ಇದೆಯೆಂದರೆ ಸಿನಿಮಾ ಬಿಡುಗಡೆಗೆ ಮುಂಚೆಯೇ ದಾಖಲೆಗಳನ್ನು ಬರೆಯುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್: ಎಫೇರಿಟೇಲ್ಫಾರ್ಗ್ರೋನ್-ಅಪ್ಸ್ ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ.
ಈ ಸಿನಿಮಾ ಬಿಡುಗಡೆ ಮುಂದಿನ ತಿಂಗಳು ಆಗಲಿದ್ದು, ಸಿನಿಮಾಕ್ಕೆ ಅದ್ಯಾವ ಪರಿ ಬೇಡಿಕೆ ಇದೆಯೆಂದರೆ ಸಿನಿಮಾ ಬಿಡುಗಡೆಗೆ ಮುಂಚೆಯೇ ದಾಖಲೆಗಳನ್ನು ಬರೆಯುತ್ತಿದೆ, ಪ್ಯಾನ್-ಇಂಡಿಯಾ ಸಿನಿಮಾಗಳ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.

ವಿತರಣೆ ಹಕ್ಕು ಮಾರಾಟದಲ್ಲಿ ದಾಖಲೆ
ಚಿತ್ರತಂಡ ಇದೀಗ ವಿತರಣೆ ಹಕ್ಕು ಮಾರಾಟದಲ್ಲಿ ತೊಡಗಿಕೊಂಡಿದ್ದು, ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ತೆ
ಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಮತ್ತು ವಿತರಕ ದಿಲ್ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಸಂಸ್ಥೆ Toxic ಚಿತ್ರದ ಆಂಧ್ರ-ತೆಲಂಗಾಣ ವಿತರಣಾ ಹಕ್ಕನ್ನು ₹120 ಕೋಟಿ Advance ನೀಡಿ ಖರೀದಿ ಮಾಡಿದೆ. ಇದು ತೆಲುಗು ಅಲ್ಲದ ಚಿತ್ರಕ್ಕಾಗಿ ಆಂಧ್ರ-ತೆಲಂಗಾಣದಲ್ಲಿ ಪಡೆದ ಅತಿ ದೊಡ್ಡ ಮೊತ್ತವಾಗಿದೆ.

ಇದನ್ನು ಓದಿ : ಬೆಂಗಳೂರಲ್ಲಿ ಮಾಜಿ ರೌಡಿಶೀಟರ್ Yashaswini Gowda ಅರೆಸ್ಟ್
ವಿತರಣೆ ಹಕ್ಕು ಪಡೆದುಕೊಂಡ ಪೈಪೋಟಿ
‘ಟಾಕ್ಸಿಕ್’ ಸಿನಿಮಾದ ವಿತರಣೆ ಹಕ್ಕು ಪಡೆಯಲು ತೆಲುಗಿನ ಕೆಲವು ದೊಡ್ಡ ವಿತರಣಾ ಸಂಸ್ಥೆಗಳ ನಡುವೆ ಪೈಪೋಟಿ ನಡೆದು ಅಂತಿಮವಾಗಿ ದಿಲ್ ರಾಜು ಅವರ ಸಂಸ್ಥೆಯು ಈ ಹಕ್ಕನ್ನು ತನ್ನದಾಗಿಸಿಕೊಂಡಿದೆ.
ಈ ಬಗ್ಗೆ ಮಾತನಾಡಿರುವ ದಿಲ್ ರಾಜು, KGF 2 ಬಳಿಕ ಯಶ್ ಅವರ ಮಾರುಕಟ್ಟೆ ಜಾಗತಿಕ ಮಟ್ಟದಲ್ಲಿ ಬೆಳೆದಿದೆ. ಈ ಚಿತ್ರಕ್ಕಾಗಿ ಪ್ರೇಕ್ಷಕರು ನಾಲ್ಕು ವರ್ಷಗಳಿಂದ ಕಾಯುತ್ತಿದ್ದಾರೆ.
‘ಟಾಕ್ಸಿಕ್’ ಮೇಲಿರುವ ನಿರೀಕ್ಷೆಗಳು ಅಪಾರ. ‘ಟಾಕ್ಸಿಕ್’ ಸಿನಿಮಾವನ್ನು ವಿತರಣೆ ಮಾಡಲು ನಾವು ಉತ್ಸುಕರಾಗಿದ್ದೇವೆ’ ಎಂದಿದ್ದಾರೆ.

ನಾಯಕಿಯರ ಲೈನ್-ಅಪ್
ಇನ್ನು ಟಾಕ್ಸಿಕ್ನಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಪ್ರಮುಖ ನಾಯಕಿಯರಾಗಿ ನಟಿಸಿದ್ದಾರೆ.
ಕೆಲವು ಜನಪ್ರಿಯ ವಿದೇಶಿ ನಟ-ನಟಿಯರೂ ಚಿತ್ರದಲ್ಲಿ ಭಾಗವಹಿಸಿದ್ದಾರೆ. ಸಿನಿಮಾವನ್ನು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ವಿಶೇಷವಾಗಿ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣ ನಡೆದಿದೆ.

Toxic ಸಿನಿಮಾ KVN ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್ಸ್ಟರ್ಮೈಂಡ್ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ ನಾರಾಯಣ ಮತ್ತು ಯಶ್ ನಿರ್ಮಿಸುತ್ತಿದ್ದಾರೆ.
ಇನ್ನು ಈ ಸಿನಿಮಾ ಮಾರ್ಚ್19 ರಂದು ತೆರೆಗೆ ಬರಲಿದೆ.
ಇದನ್ನು ನೋಡಿ : VIRAL AUDIO | ಶಿಕ್ಷಕನಿಗೆ ಕೈ ಮುಖಂಡನಿಂದ ಧಮ್ಕಿನಾಗೇಶ್ ರೆಡ್ಡಿ AUDIO VIRAL




