Mysore ನಲ್ಲಿಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಮೈಸೂರಿನಲ್ಲಿ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. Mysore ಪಾಲಿಕೆ ಹಾಗೂ ಟಿ. ನರಸೀಪುರ ತಾಲೂಕು ಕಚೇರಿಯಲ್ಲಿ ಜೆಇ (ಜೂನಿಯರ್ ಇಂಜಿನಿಯರ್) ಆಗಿ ಕಾರ್ಯನಿರ್ವಹಿಸುತ್ತಿರುವ ಕೆ.ಆರ್. ಚಂದ್ರಶೇಖರ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಇದನ್ನು ಓದಿ : Metro ಟಿಕೆಟ್ ದರ ಸೋಮವಾರದಿಂದ ಮತ್ತೆ ಏರಿಕೆ – ಎಷ್ಟು ಹೆಚ್ಚಳ?
60 ಲಕ್ಷ ನಗದು ಹಣ ಪತ್ತೆ..!
ಚಂದ್ರಶೇಖರ್ ಅವರಿಗೆ ಸೇರಿದ ವಿಜಯನಗರ ಹಾಗೂ ಕೆ.ಜಿ. ಕೊಪ್ಪಲು ನಿವಾಸಗಳ ಮೇಲೆ ದಾಳಿ ನಡೆಸಲಾಗಿದ್ದು, ಟಿ. ನರಸೀಪುರ ತಾಲೂಕು ಕಚೇರಿ ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಏಕಕಾಲಕ್ಕೆ ಪರಿಶೀಲನೆ ನಡೆಸಲಾಗಿದೆ.
ದಾಳಿ ವೇಳೆ 60 ಲಕ್ಷ ರೂ. ನಗದು ಹಣ ಪತ್ತೆಯಾಗಿದ್ದು, ಸಂಬಂಧಿತ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಚೇರಿಯಲ್ಲಿ ಪರಿಶೀಲನೆ
ಇನ್ನು ಇದೇ ವೇಳೆ ಬೆಸ್ಕಾಂನಲ್ಲಿ ಡೆಪ್ಯೂಟಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿರುವ ಅಲ್ತಾಫ್ ಹುಸೇನ್ ಜಕಾರ್ತಿ ಅವರ ಮನೆ ಹಾಗೂ ಕಚೇರಿಗಳ ಮೇಲೂ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಅಲ್ತಾಫ್ ಹುಸೇನ್ ಅವರಿಗೆ ಸೇರಿದ ಎರಡು ನಿವಾಸಗಳು ಹಾಗೂ ಕಚೇರಿಯಲ್ಲಿ ಪರಿಶೀಲನೆ ನಡೆಯುತ್ತಿದ್ದು, ದಾಖಲೆಗಳ ತಪಾಸಣೆ ಮುಂದುವರಿದಿದೆ.
ಇದನ್ನು ನೋಡಿ : ಏ RSS ಥೂ ನಿಮ್ಮ ಯೋಗ್ಯತೆಗೆ ಬೆಂಕಿ ಹಾಕಾ- ಅಸೆಂಬ್ಲಿಯಲ್ಲಿ ಡ್ಯಾನ್ಸ್ ಮಾಡ್ತೀರಾ ಎಂದು ಕಿಡಿ




