Davanagere ಜಿಲ್ಲೆಯ ಮಾಯಕೊಂಡದಲ್ಲಿ ಗಲಾಟೆಯಲ್ಲಿ ಅಣ್ಣ ತನ್ನ ತಮ್ಮನ ತಲೆಗೆ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ನಡೆದಿದೆ.

Davanagere : ಜಮೀನು ಒತ್ತುವರಿ ವಿಚಾರಕ್ಕೆ ಸಂಬಂಧಿಸಿದ ಗಲಾಟೆಯಲ್ಲಿ ಅಣ್ಣನೇ ತಮ್ಮನನ್ನು ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡದಲ್ಲಿ ನಡೆದಿದೆ.
ಮೃತನನ್ನು ಸಿ.ಕೆ ನೀಲಪ್ಪ (62) ಎಂದು ಗುರುತಿಸಲಾಗಿದ್ದು, ಆರೋಪಿ ಅಣ್ಣನ ಹೆಸರು ಸಿ.ಕೆ ಚಂದ್ರಪ್ಪ. ಜಮೀನು ಒತ್ತುವರಿ (Property Dispute) ವಿಷಯಕ್ಕೆ ಸಂಬಂಧಿಸಿ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಮಾತಿಗೆ ಮಾತು ಬೆಳೆದು ಹಿಂಸಾಚಾರ
ಇಂದು ನಡೆದ ವಾಗ್ವಾದವು ತೀವ್ರ ಸ್ವರೂಪ ಪಡೆದು, ಮಾತಿನ ಜಗಳ ಘರ್ಷಣೆಯಾಗಿ ಮಾರ್ಪಟ್ಟಿದೆ. ಈ ವೇಳೆ ಚಂದ್ರಪ್ಪ ತನ್ನ ತಮ್ಮ ನೀಲಪ್ಪನ ತಲೆಗೆ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ನೀಲಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇದನ್ನು ಓದಿ : ಬೆಂಗಳೂರಿನ ಈ ಆಸ್ತಿಗಳ ಹರಾಜಿಗೆ ಮುಂದಾದ Greater Bengaluru ಪ್ರಾಧಿಕಾರ!
ಘಟನೆಯ ಮಾಹಿತಿ ಪಡೆದ ತಕ್ಷಣ ಮಾಯಕೊಂಡ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಚಂದ್ರಪ್ಪ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇತರ ಕುಟುಂಬ ಸದಸ್ಯರ ಮೇಲೂ ಆರೋಪಕ್ಕೆ ಒತ್ತಾಯ
ಇನ್ನೊಂದೆಡೆ, ಮೃತ ನೀಲಪ್ಪನ ಕುಟುಂಬಸ್ಥರು, ಈ ಕೊಲೆಯಲ್ಲಿ ಚಂದ್ರಪ್ಪನ ಕುಟುಂಬದ ಇತರ ಸದಸ್ಯರು ಸಹಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದ್ದರಿಂದ, ಎಲ್ಲರನ್ನೂ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಸೇರಿಸಬೇಕು ಎಂದು ಅವರು ಪೊಲೀಸರ ಮುಂದೆ ಪಟ್ಟು ಹಿಡಿದಿದ್ದಾರೆ.
ಇದನ್ನು ನೋಡಿ : ಮತ್ತೊಂದು ಚಿನ್ನದ ಗಣಿಗಾಗಿ ಪತ್ತೆ ಹೆಲಿಕಾಫ್ಟರ್ ಮೂಲಕ ಸಮೀಕ್ಷೆ




