ಬೆಂಗಳೂರಿನ ಬರೋಬ್ಬರಿ 7,020 ಆಸ್ತಿಗಳ ಹರಾಜಿಗೆ GBA ತೀರ್ಮಾನ!

ಬೆಂಗಳೂರು ನಗರದಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿದಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಭಾರೀ ಶಾಕ್ ನೀಡಿದೆ. ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಸುಮಾರು 7,000 ಆಸ್ತಿ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಆಸ್ತಿ ಕಳೆದುಕೊಳ್ಳುವ ಆತಂಕ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ಮಾಹಿತಿಯಂತೆ, ಈ ಆಸ್ತಿದಾರರು ಒಟ್ಟಾರೆ 437 ಕೋಟಿ ರೂಪಾಯಿಗೂ ಅಧಿಕ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಬಂಧಿತ ಆಸ್ತಿ ಮಾಲೀಕರಿಗೆ ಈಗಾಗಲೇ ಬೇಡಿಕೆ ನೋಟಿಸ್ಗಳನ್ನು ಕಳುಹಿಸಲಾಗಿತ್ತು. ಆದರೂ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಮುಂದಿನ ಕ್ರಮವಾಗಿ ಜಪ್ತಿ ಆದೇಶಗಳನ್ನು ಹೊರಡಿಸಲಾಗಿದೆ. ಸಾವಿರಾರು ಜನ ತಮ್ಮ ಆಸ್ತಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಫೆಬ್ರವರಿ 17ರಂದು ಆಸ್ತಿಗಳ ಹರಾಜು
ಜಪ್ತಿ ಆದೇಶಗಳ ಬಳಿಕವೂ ತೆರಿಗೆ ಪಾವತಿ ಆಗದಿರುವುದರಿಂದ, ಅಂತಿಮ ಕ್ರಮವಾಗಿ ಈ ಆಸ್ತಿಗಳನ್ನು 17-02-2026ರಂದು ಆಯಾ ವಲಯಗಳ ಜಂಟಿ ಆಯುಕ್ತರ ಕಚೇರಿಗಳಲ್ಲಿ ಹರಾಜು ಮಾರಾಟಕ್ಕೆ ನಿಗದಿಪಡಿಸಲಾಗಿದೆ.
ಹರಾಜಿಗೆ ಸಂಬಂಧಿಸಿದ ಆಸ್ತಿಗಳ ಪಟ್ಟಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕೃತ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಪ್ರಕಟಿಸಲಾಗಿದೆ.
ಆಸ್ತಿ ಮಾಲೀಕರು ತಕ್ಷಣವೇ https://BBMPTax.karnataka.gov.in ವೆಬ್ಸೈಟ್ ಮೂಲಕ ಬಾಕಿ ಇರುವ ಆಸ್ತಿ ತೆರಿಗೆಯನ್ನು ಆನ್ಲೈನ್ನಲ್ಲಿ ಪಾವತಿಸಿದಲ್ಲಿ, ಹರಾಜು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ : ಚಾರ್ಮಾಡಿ ಘಾಟ್ ಅರಣ್ಯ ವ್ಯಾಪ್ತಿಯಲ್ಲಿ ಭಾರೀ ಕಾಡ್ಗಿಚ್ಚು.!
ಹಿಂದೆಯೂ ಇದೇ ರೀತಿಯ ಕ್ರಮ
ಇದು ಮೊದಲ ಬಾರಿಗೆ ಅಲ್ಲ. 2024–25ನೇ ಸಾಲಿನಲ್ಲಿ ಆಗಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕೂಡ ಆಸ್ತಿ ತೆರಿಗೆ ಬಾಕಿದಾರರ ವಿರುದ್ಧ ಇದೇ ಮಾದರಿಯ ಕ್ರಮ ಕೈಗೊಂಡಿತ್ತು.
ಎಂಟು ವಲಯಗಳಲ್ಲಿ ಬಾಕಿದಾರರ ಪಟ್ಟಿ ಬಿಡುಗಡೆ ಮಾಡಿ ಹರಾಜು ಎಚ್ಚರಿಕೆ ನೀಡಲಾಗಿತ್ತು. ಈ ಕ್ರಮದ ಪರಿಣಾಮ ಹಲವರು ನಿಗದಿತ ಅವಧಿಯೊಳಗೆ ತೆರಿಗೆ ಪಾವತಿಸಿದ್ದರು.
ಈ ಬಾರಿ GBA ಹೊಸ ಮಾದರಿಯಲ್ಲಿ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿನ ಬಾಕಿದಾರರ ಆಸ್ತಿಗಳ ಪಟ್ಟಿಯನ್ನು ಪ್ರತ್ಯೇಕವಾಗಿ ಪ್ರಕಟಿಸಿದೆ. ಆಸ್ತಿದಾರರು ತಮ್ಮ ಆಸ್ತಿಗಳನ್ನು ಉಳಿಸಿಕೊಳ್ಳಬೇಕಾದರೆ, ಕೂಡಲೇ ಬಾಕಿ ಇರುವ ಆಸ್ತಿ ತೆರಿಗೆಯನ್ನು ಪಾವತಿಸುವುದು ಅನಿವಾರ್ಯವಾಗಿದೆ.

ಇದನ್ನು ನೋಡಿ : TUMAKURU | ಸಿದ್ದಗಂಗಾ ಮಠದ ಜಾತ್ರೆಗೆ ದಿನಗಣನೆ ಭಿಕ್ಷಾಟನೆ ಮಾಡಿದ ಸಿದ್ದಲಿಂಗ




