Murder : ಬರ್ಬರ ಕೃತ್ಯ, ಸಾಲ ಮಾಡಿದ್ದನ್ನು ಆಕ್ಷೇಪಿಸಿದ್ದಕ್ಕೆ ಹೆಂಡತಿಯ ಕತ್ತು ಸೀಳಿ ಕೊಂದ ಗಂಡ, ಇಬ್ಬರು ಮಕ್ಕಳು ಅನಾಥ.

ಮೈತುಂಬ ಸಾಲ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪತಿಯೇ ಪತ್ನಿಯ ಕತ್ತು ಸೀಳಿ ಕೊಂದ ಅಮಾನುಷ ಘಟನೆ ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದಲ್ಲಿ ನಡೆದಿದೆ. ಗಾರೆ ಕೆಲಸ ಮಾಡಿಕೊಂಡಿದ್ದ ಇರ್ಫಾನ್ ಎಂಬಾತ ಪತ್ನಿ ಮಾಸಬ್ಬಿಯನ್ನು ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ Murder ಮಾಡಿದ್ದಾನೆ. ಈ ಭೀಕರ ಕೃತ್ಯದಿಂದ ಇಡೀ ಏರಿಯಾವೇ ಬೆಚ್ಚಿಬಿದ್ದಿದೆ.
ದಂಪತಿಯ ನಡುವೆ ನಿತ್ಯ ಗಲಾಟೆ
ಮಾಸಬ್ಬಿ ಮತ್ತು ಇರ್ಫಾನ್ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ. ಆದರೂ, ಮನೆಯೊಳಗಿನ ಸಾಲದ ಸಂಕಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು.
ಗಾರೆ ಕೆಲಸ ಮಾಡಿಕೊಂಡಿದ್ದ ಇರ್ಫಾನ್ ಸಾಲದ ಸುಳಿಯಲ್ಲಿ ಸಿಲುಕಿದ್ದು, ಪತ್ನಿಯ ಚಿನ್ನಾಭರಣಗಳನ್ನು ಅಡವಿಟ್ಟಿದ್ದ. ಇದೇ ವಿಚಾರಕ್ಕೆ ದಂಪತಿಯ ನಡುವೆ ನಿತ್ಯ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.

ಇದನ್ನು ಓದಿ : ಬೆಂಗಳೂರಿನ ಈ ಆಸ್ತಿಗಳ ಹರಾಜಿಗೆ ಮುಂದಾದ Greater Bengaluru ಪ್ರಾಧಿಕಾರ!
ಎಲ್ಲಿಂದಾದರೂ ಹಣ ತರಬೇಕು
ಎಲ್ಲಿಂದಾದರೂ ಹಣ ತರಬೇಕು ಎಂದು ಪತ್ನಿಗೆ ಒತ್ತಡ ಹೇರುತ್ತಿದ್ದ ಇರ್ಫಾನ್, ಸೋಮವಾರ ಮತ್ತೆ ಜಗಳಕ್ಕೆ ಇಳಿದಿದ್ದಾನೆ.
ಮಾಸಬ್ಬಿಯ ಸಹೋದರ ಇತ್ತೀಚೆಗೆ 20 ಸಾವಿರ ರೂಪಾಯಿ ಹಣ ನೀಡಿ ಹೋಗಿದ್ದರೂ ಸಹ ತೃಪ್ತನಾಗದೆ ಮತ್ತಷ್ಟು ಹಣಕ್ಕೆ ಪೀಡಿಸಿದ್ದಾನೆ. ಇನ್ನು ಈ ಜಗಳ ತಾರಕಕ್ಕೇರಿದ್ದು, ಆಕ್ರೋಶಗೊಂಡ ಇರ್ಫಾನ್ ಚಾಕುವಿನಿಂದ ಪತ್ನಿಯ ಕತ್ತಿಗೆ ಇರಿದಿದ್ದಾನೆ.
ಹೆಂಡತಿ ಕತ್ತು ಸೀಳಿ ಕೊಂದ ಗಂಡ
ಗಂಭೀರವಾಗಿ ಗಾಯಗೊಂಡ ಮಾಸಬ್ಬಿ ಪ್ರಾಣ ಉಳಿಸಿಕೊಳ್ಳಲು ಮನೆಯ ಹೊರಗೆ ಓಡಿ ಬಂದಿದ್ದಾಳೆ. ಆದರೆ ಆಕೆಯನ್ನು ಹಿಂಬಾಲಿಸಿದ ಆರೋಪಿ, ಮನೆಯ ಎದುರಲ್ಲೇ ಮತ್ತೆ ಕತ್ತಿಗೆ ಚಾಕು ಇರಿದು ಸ್ಥಳದಲ್ಲೇ ಕೊಂದಿದ್ದಾನೆ. ಈ ದೃಶ್ಯವನ್ನು ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಪೊಲೀಸ್ ಠಾಣೆಗೆ ಬಂದು ಶರಣಾದ ಆರೋಪಿ
ಇನ್ನು ಪತ್ನಿಯನ್ನು ಕೊಂದ ಬಳಿಕ ಆರೋಪಿ ಇರ್ಫಾನ್ ಹುಬ್ಬಳ್ಳಿ ನಗರದ ಕೇಶ್ವಾಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಬಳಿಕ ಆತನನ್ನು ಗೋಕುಲ್ ರೋಡ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನು ನೋಡಿ : ಮತ್ತೊಂದು ಚಿನ್ನದ ಗಣಿಗಾಗಿ ಪತ್ತೆ ಹೆಲಿಕಾಫ್ಟರ್ ಮೂಲಕ ಸಮೀಕ್ಷೆ




