ರಾಮನಗರದಲ್ಲಿ ಮಹಿಳೆಯ ಶವ ಪತ್ತೆ – ಪತಿಯಿಂದಲೇ ಪತ್ನಿಯ Murder ಶಂಕೆ.

ರಾಮನಗರ ಜಿಲ್ಲೆಯಲ್ಲಿ ಈಜುಕೊಳದಲ್ಲೇ ಮಹಿಳೆಯೊಬ್ಬರು ಅನುಮಾನಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಹಿಳೆಯನ್ನು ಪತಿಯೇ Murder ಮಾಡಿರುವಂತ ಆರೋಪ ಕೇಳಿ ಬಂದಿದೆ.
ಕೌಟುಂಬಿಕ ಕಲಹ
ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಬಚ್ಚೇಗೌಡಪಾಳ್ಯದಲ್ಲಿ, 29 ವರ್ಷದಪ್ರತಿಭಾ ಎಂಬ ಮಹಿಳೆಯನ್ನು ಈಜುಕೊಳದಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಇದನ್ನು ನೋಡಿ : ಟಿವಿಕೆ ಬಾವುಟ ತೋರಿಸಿದ ವಿಜಯ್ ಅಭಿಮಾನಿಗೆ ಥಳಿಸಿದ ಅಜಿತ್ ಫ್ಯಾನ್ಸ್
Murder ಶಂಕೆ
ಮೃತ ಪತ್ನಿ ಪ್ರತಿಮಾ ಬಾಬು ಅವರಿಗೆ ಎರಡನೇ ಪತ್ನಿಯಾಗಿದ್ದರು. ಇಬ್ಬರು ಮಕ್ಕಳಿದ್ದಾರೆ. ಕೌಟುಂಬಿಕ ಕಲಹದಿಂದ ಜಗಳ ಉಂಟಾಗಿ, ಪತಿ ಬಾಬುವೇ ಪತ್ನಿ ಪ್ರತಿಮಾ ಕೊಲೆ ಮಾಡಿ ಈಜುಕೊಳದಲ್ಲಿ ಶವ ಎಸೆದಿರೋದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಪ್ರಕರಣ ದಾಖಲು
ಇನ್ನು ವಿಷಯ ತಿಳಿದ ಕೋಡಿಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಬಾಬು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೃತದೇಹವನ್ನು ಹೆಚ್ಚಿನ ಪರಿಶೀಲನೆಗಾಗಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ : LPG ಸಿಲಿಂಡರ್ ಗ್ರಾಹಕರೇ ಜ.31ರೊಳಗೆ ಈ ಕೆಲಸ ಮಾಡದಿದ್ದರೆ ಸಿಗಲ್ಲ ಸಬ್ಸಿಡಿ !




