Sira : ಮಾಗೋಡು ಗೊಲ್ಲರಹಟ್ಟಿಯಲ್ಲಿರುವ ಶ್ರೀ ಕಂಬದ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವದ ಮೂರನೇ ದಿನವಾದ ಸೋಮವಾರ ಅದ್ಧೂರಿ ಹೂವಿನ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

Sira : ಶಿರಾ ತಾಲೂಕು ಮಾಗೋಡು ಗೊಲ್ಲರಹಟ್ಟಿಯಲ್ಲಿರುವ ಐತಿಹಾಸಿಕ ಶ್ರೀ ಕಂಬದ ರಂಗನಾಥ ಸ್ವಾಮಿಯ ಹೂವಿನ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಪುಟ್ಟ ಗ್ರಾಮವಾದ ಮಾಗೋಡು ಕ್ಷೇತ್ರಕ್ಕೆ ರಾಜ್ಯ ಮಾತ್ರವಲ್ಲದೆ ಆಂಧ್ರಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಆದಿದೈವ ರಂಗನಾಥ ಸ್ವಾಮಿಯ ಮೇಲಿನ ಅಪಾರ ನಂಬಿಕೆ ಮತ್ತು ಭಕ್ತಿಯಿಂದ ಪ್ರತಿವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಶ್ರೀ ಕಂಬದ ರಂಗನಾಥ ಸ್ವಾಮಿ ಹೂವಿನ ಆರಾಧನೆಗೆ ಪ್ರಸಿದ್ಧಿಯಾಗಿದ್ದು, ತಮ್ಮ ಇಷ್ಟಾರ್ಥಗಳು ಈಡೇರಿದ ಭಕ್ತರು ಹೂವಿನ ತುಲಾಭಾರ ಸೇರಿದಂತೆ ಸಾವಿರಾರು ರೂಪಾಯಿ ಮೌಲ್ಯದ ಹೂಗಳನ್ನು ತಂದು ದೇವರಿಗೆ ಅರ್ಪಿಸುತ್ತಾರೆ.
ಹೂವಿನ ರಥೋತ್ಸವದ ವೇಳೆ ರಥವು ಸಂಪೂರ್ಣವಾಗಿ ಹೂವಿನಿಂದ ಆವೃತಗೊಂಡು ಅತ್ಯಂತ ಮನಮೋಹಕವಾಗಿ ಕಾಣಿಸುತ್ತೆ. ರಂಗನಾಥ ಸ್ವಾಮಿಯು ಕಂಬದಲ್ಲಿ ಪ್ರಾಕಟ್ಯಗೊಂಡಿರುವ ಕಾರಣದಿಂದ “ಕಂಬದ ರಂಗನಾಥ” ಎಂದು ಭಕ್ತರು ಆರಾಧಿಸುತ್ತಾರೆ.

ಇದನ್ನೂ ಓದಿ : ಚಾರ್ಮಾಡಿ ಘಾಟ್ ಅರಣ್ಯ ವ್ಯಾಪ್ತಿಯಲ್ಲಿ ಭಾರೀ ಕಾಡ್ಗಿಚ್ಚು.!
ಇಲ್ಲಿ ಹೂವೇ ದೇವರಿಗೆ ಅತ್ಯಂತ ಪ್ರಿಯವಾದ ವಸ್ತುವೆಂಬ ನಂಬಿಕೆ ಇದ್ದು, ಹರಕೆಯ ರೂಪದಲ್ಲಿ ಹೂವನ್ನು ತೇರಿಗೆ ಅರ್ಪಿಸುವುದು ಶತಮಾನಗಳಿಂದ ನಡೆದು ಬಂದ ಸಂಪ್ರದಾಯವಾಗಿದೆ.
ವೈಕುಂಠದಿಂದ ಧರೆಗೆ ಇಳಿದು ಬಂದು ಭಕ್ತರ ಕಷ್ಟ ನಿವಾರಿಸುತ್ತಾನೆಂಬ ದೃಢ ನಂಬಿಕೆಯಿಂದ ಭಕ್ತರು ಭಕ್ತಿಭಾವದಿಂದ ಹೂ ಅರ್ಪಿಸುತ್ತಾರೆ. ಪ್ರತಿವರ್ಷ ಮಾಘ ಮಾಸದಲ್ಲಿ ಒಂದು ವಾರದ ಕಾಲ ನಡೆಯುವ ಈ ಬೃಹತ್ ಜಾತ್ರೆಯಲ್ಲಿ ಜಲಧಿ ಸೇವೆ, ಪಂಜಿನ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ನೆರವೇರುತ್ತವೆ.
ವಿಶೇಷವಾಗಿ ಹೂವಿನ ತೇರು ರಾಜ್ಯದಲ್ಲಿಯೇ ಅಪಾರ ಖ್ಯಾತಿ ಪಡೆದಿದ್ದು, ಲಕ್ಷಾಂತರ ಭಕ್ತರು ತೇರಿನ ದರ್ಶನ ಪಡೆಯುತ್ತಾರೆ. ಮಾಗೋಡು ಕಂಬದ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವವು ಭಕ್ತಿ, ಸಂಪ್ರದಾಯ ಹಾಗೂ ಸಂಸ್ಕೃತಿಯ ಅದ್ಭುತ ಸಂಗಮವಾಗಿದೆ.
MUST WATCH : ಸಿದ್ದಗಂಗಾ ಮಠದ ಜಾತ್ರೆಗೆ ದಿನಗಣನೆ ಭಿಕ್ಷಾಟನೆ ಮಾಡಿದ ಸಿದ್ದಲಿಂಗ ಶ್ರೀಗಳು




