Tumakuru : ಕಲ್ಟ್ಗೆ ಭರ್ಜರಿ ರೆಸ್ಪಾನ್ಸ್ – ಅಭಿಮಾನಿಗಳ ಜೊತೆ ಝೈದ್ ಖಾನ್ ಸೆಲೆಬ್ರೇಷನ್.

ಸಚಿವ ಜಮೀರ್ ಅಹಮ್ಮದ್ ಮಗ ಝೈದ್ ಖಾನ್ ಅವರ ಎರಡನೇ ಸಿನಿಮಾ ಕಲ್ಟ್ ಕಳೆದ ವಾರ ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. ಕಲ್ಟ್ ಸಿನಿಮಾಗೆ ಸಿನಿ ಪ್ರೇಕ್ಷಕರು ಭರ್ಜರಿ ರೆಸ್ಪಾನ್ಸ್ ನೀಡ್ತಿದ್ದು, ಸಿನಿಮಾ ಸಕ್ಸಸ್ ಬೆನ್ನಲ್ಲೇ ನಟ Zaid Khan ರಾಜ್ಯಾದ್ಯಂತ ಸಕ್ಸಸ್ ಜರ್ನಿ ಮಾಡ್ತಾ ಇದ್ದಾರೆ. ಇಂದು ತುಮಕೂರಿಗೆ ಝೈದ್ ಖಾನ್ ಆಗಮಿಸಿದ್ದು, ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.

ಇದನ್ನು ಓದಿ : ವಾಹನ ಸವಾರರಿಗೆ ಗುಡ್ ನ್ಯೂಸ್ – FASTag ನಿಯಮ ಸಡಿಲಿಕೆ
ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ Zaid Khan
ತುಮಕೂರಿನ ಗಾಯತ್ರಿ ಥಿಯೇಟರ್ ಬಳಿ ಆಗಮಿಸಿದ ನಟ ಝೈದ್ ಖಾನ್ಗೆ ಬೃಹತ್ ಹಾರ ಹಾಕಿ, ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತಿಸಿದ್ರು. ಈ ವೇಳೆ ಝೈದ್ ಖಾನ್ ಜೊತೆ ಅಭಿಮಾನಿಗಳ ಜೊತೆ ಸೆಲ್ಫಿ ತೆಗೆದುಕೊಂಡಲು. ಅಲ್ದೇ ನಟ ಝೈದ್ ಖಾನ್ ಅಭಿಮಾನಿಗಳ ಒಟ್ಟಿಗೆ ಸಿನಿಮಾ ವೀಕ್ಷಣೆ ಮಾಡಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಇತ್ತ ಅಭಿಮಾನಿಗಳ ಪ್ರೀತಿ ಕಂಡು ಝೈದ್ ಖಾನ್ ಭಾವುಕರಾಗಿದ್ದು, ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆ ಮಾಡಿದರು.

ರಾಜ್ಯಾದ್ಯಂತ ನಮ್ಮ ಸಿನಿಮಾಗೆ ಒಳ್ಳೆ ರೆಸ್ಪಾನ್ ಬರ್ತಿದೆ
ಈ ವೇಳೆ ಮಾತನಾಡಿದ ನಟ ಝೈದ್ ಖಾನ್, ನಮ್ಮ ಸಿನಿಮಾಗೆ ಜನರು ಇಷ್ಟು ಪ್ರೀತಿ ತೋರುತ್ತಿರುವುದು ಖುಷಿ ಆಗುತ್ತಿದೆ. ಮೊದಲನೇ ವಾರದಲ್ಲೇ ಸಿನಿಮಾ 5ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಇದೀಗ 2ನೇ ವಾರಕ್ಕೆ ಕಾಲಿಟ್ಟಿದೆ. ರಾಜ್ಯಾದ್ಯಂತ ನಮ್ಮ ಸಿನಿಮಾಗೆ ಒಳ್ಳೆ ರೆಸ್ಪಾನ್ ಬರ್ತಿದೆ, ನಾನು ಕಂಡಿದ್ದ ಕನಸು ನನ್ನ ಎರಡನೇ ಸಿನಿಮಾ ದ ಮೂಲಕ ನನಸಾಗಿದೆ ಎಂದ್ರು.
ಇನ್ನು ಕಲ್ಟ್ ಸಿನಿಮಾ ಸಕ್ಸಸ್ ಜರ್ನಿಯಲ್ಲಿ ನಿರ್ದೇಶಕ ಮಹೇಶ್ ಕೂಡ ಆಗಮಿಸಿದ್ದು, ಅಭಿಮಾನಿಗಳ ಪ್ರೀತಿಗೆ ಫಿದಾ ಆದ್ರು.

ಇದನ್ನು ನೋಡಿ : BUDGET 2026 | ದಾಖಲೆಯ BUDGET ಮಂಡಿಸಿದ ನಿರ್ಮಲಾ ಸೀತಾರಾಮನ್




