ಫೆಬ್ರವರಿ ಒಂದರಂದು ಮೋದಿ ಸರ್ಕಾರದ ಬಹು ನಿರೀಕ್ಷಿತ Budget ನನ್ನು ಮಂಡಿಸಿದೆ.

ಇಂದು ಭಾನುವಾರ ಆಗಿದ್ರು ಕೂಡ, ಅಂದುಕೊಡಂತೆ ಫೆಬ್ರವರಿ ಒಂದರಂದು ಮೋದಿ ಸರ್ಕಾರದ ಬಹು ನಿರೀಕ್ಷಿತ Budget ನನ್ನು ಮಂಡಿಸಿದೆ. ಕೇಂದ್ರ ಸರ್ಕಾರ ಭಾನುವಾರ ಮಂಡಿಸಿದ ಎರಡನೇ ಬಜೆಟ್ ಇದಾಗಿದೆ.1999ರಲ್ಲಿಯೂ ಫೆ.28ರ ಭಾನುವಾರದಂದು ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಲಾಗಿದ್ದು ವಿಶೇಷವಾಗಿದೆ. ಮೋದಿ ಸರ್ಕಾರದಲ್ಲಿ ಹಣಕಾಸು ಸಚಿವೆ ಆಗಿರೋ ನಿರ್ಮಲಾ ಸೀತರಾಮನ್ ಸತತ 9ನೇ ಬಾರಿ ದಾಖಲೆಯ ಬಜೆಟ್ನನ್ನು ಮಂಡಿಸಿದ್ರು..

ಒಂದು ಗಂಟೆ 26 ನಿಮಿಷಗಳ ಕಾಲ ಮಂಡಿಸಿದ ಬಜೆಟ್ನಲ್ಲಿ ಹಲವು ಘೋಷಣೆಗಳನ್ನು ನೀಡಲಾಗಿದ್ದು, ಕೇಂದ್ರ ಸರ್ಕಾರದ ಬಜೆಟ್ನಿಂದಾಗಿ ಕೆಲ ಬಂಫರ್ ಘೋಷಣೆಯನ್ನು ಮಾಡಲಾಗಿದೆ. ಬಜೆಟ್ ಆರಂಭಕ್ಕೂ ಮುನ್ನ ನಿರ್ಮಲಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮೊಸರು- ಸಕ್ಕರೆ ತಿನ್ನಿಸುವ ಮೂಲಕ ಶುಭಕೋರಿದ್ರು. ನಿರ್ಮಲಾ ಬಜೆಟ್ನಲ್ಲಿ ತೆರಿಗೆದಾರರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

ಆದಾಯ ತೆರಿಗೆದಾರರಿಗೆ ಗುಡ್ನ್ಯೂಸ್ ಕೊಟ್ಟ ನಮೋ..!
ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ನೀತಿ ಜಾರಿ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಘೋಷಣೆ ಮಾಡಿದ್ರು. ಜುಲೈ 31ರವರೆಗೆ ತೆರಿಗೆ ಪಾವತಿ ಮಾಡಲು ಅವಕಾಶ ನೀಡಲಾಗಿದ್ದು, ತೆರಿಗೆ ಪಾವತಿ ವಿಳಂಬಕ್ಕೆ ಶೇ.10 ರಷ್ಟು ದಂಡ ವಿಧಿಸಲಾಗಿದೆ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಅಲ್ದೇ ಕಳೆದ ವರ್ಷ ಘೋಷಣೆಯಾಗಿದ್ದ 12.75 ಲಕ್ಷ ರೂಪಾಯಿವರೆಗಿನ ಆದಾಯ ತೆರಿಗೆ ವಿನಾಯ್ತಿಯನ್ನೇ ಮುಂದುವರೆಸಲಾಗಿದೆ. ಕಳೆದ ವರ್ಷದ ಆದಾಯ ತೆರಿಗೆ ವಿನಾಯ್ತಿಯನ್ನೇ ಈ ಬಾರಿಯೂ ಮುಂದುವರೆಸಲಾಗಿದೆ.
ಜೊತೆಗೆ ಈ ಬಾರಿಯ ಬಜೆಟ್ನಲ್ಲಿ ವೈಯಕ್ತಿಕ ತೆರಿಗೆ ಆದಾಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ… ಅಲ್ದೇ ತೆರಿಗೆ ಮಿತಿಯನ್ನು 4 ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ.

ರಾಜ್ಯಗಳಿಗೆ ಅನುದಾನ ಘೋಷಣೆ ಮಾಡಿದ ಕೇಂದ್ರ ವಿತ್ತ ಸಚಿವೆ
ಇನ್ನು ಈ ಬಾರಿಯ ಬಜೆಟ್ನಲ್ಲಿ 16ನೇ ಹಣಕಾಸು ಆಯೋಗವನ್ನು ಕೇಂದ್ರ ಸರ್ಕಾರ ಒಪ್ಪಿದ್ದು, ರಾಜ್ಯಗಳಿಗೆ ಕೇಂದ್ರದ ಆದಾಯದ ಶೇಕಡಾ 41ರಷ್ಟು ನೀಡ್ತಾ ಇದ್ದು, ರಾಜ್ಯಗಳಿಗೆ 1.4 ಲಕ್ಷ ಕೋಟಿಯನ್ನು ನೀಡಲು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

ಮಹಿಳಾ ಉದ್ಯಮಿಗಳಿಗಾಗಿ ʼShe Mart’ ಘೋಷಿಸಿದ ನಿರ್ಮಲಾ ಸೀತಾರಾಮನ್
ಮಹಿಳೆಯರು ತಮ್ಮದೇ ಉದ್ಯಮಗಳ ಮಾಲೀಕರಾಗಲು ನೆರವಾಗುವ ಉದ್ದೇಶದಿಂದ ಕೇಂದ್ರ ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಅವರು ‘She Mart’ ಯೋಜನೆಯನ್ನು ಘೋಷಿಸಿದ್ದಾರೆ. ‘ಲಖ್ಪತಿ ದೀದಿ’ ಯಶಸ್ಸಿನ ಹಿನ್ನೆಲೆಯಲ್ಲಿ ಸ್ವ-ಸಹಾಯ ಗುಂಪುಗಳು ನಡೆಸುವ ಸಮುದಾಯದ ಚಿಲ್ಲರೆ ಮಳಿಗೆಗಳಾಗಿ ಇವು ಕಾರ್ಯನಿರ್ವಹಿಸಲಿವೆ. ಜೊತೆಗೆ, ಪ್ರತಿ ಜಿಲ್ಲೆಯಲ್ಲಿ ಬಾಲಕಿಯರಿಗಾಗಿ ಮೀಸಲಾದ ಹಾಸ್ಟೆಲ್ಗಳನ್ನು ಸ್ಥಾಪಿಸುವುದಾಗಿ ಕೂಡ ಘೋಷಿಸಲಾಗಿದೆ.

ಜಿಎಸ್ಟಿ ಆದಾಯ ಶೇ. 6.2ರಷ್ಟು ಹೆಚ್ಚಳ
ದೇಶದ ಜಿಎಸ್ಟಿ ಆದಾಯದಲ್ಲಿ ಶೇ.6.2ರಷ್ಟು ಹೆಚ್ಚಳವಾಗಿದ್ದು, ಆರ್ಥಿಕ ಚಟುವಟಿಕೆ ಸ್ಥಿರವಾಗಿರುವುದನ್ನು ತೋರಿಸಿದೆ. ಜನವರಿ ತಿಂಗಳಲ್ಲಿ ಮಾತ್ರ ಜಿಎಸ್ಟಿ ಸಂಗ್ರಹ ಶೇ.7.6ರಷ್ಟು ಏರಿಕೆಯಾಗಿ ಸುಮಾರು 1.93 ಲಕ್ಷ ಕೋಟಿ ರೂ. ತಲುಪಿದೆ. ಬೇಡಿಕೆ ಮತ್ತು ಆಮದು ಚಟುವಟಿಕೆಗಳು ಹೆಚ್ಚಿದ ಪರಿಣಾಮವಾಗಿ ಏಪ್ರಿಲ್ನಿಂದ ಜನವರಿವರೆಗೆ ಒಟ್ಟು ಜಿಎಸ್ಟಿ ಆದಾಯವು ಗಮನಾರ್ಹವಾಗಿ ಹೆಚ್ಚಾಗಿದೆ.

ಮದ್ಯ ಪ್ರಿಯರಿಗೆ ಮತ್ತೆ ಶಾಕ್..??
ಬಜೆಟ್ 2026ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವು ವಸ್ತುಗಳ ಮೇಲಿನ ಸುಂಕ ಕಡಿಮೆ ಮಾಡಿ ಜನಸಾಮಾನ್ಯರಿಗೆ ಗುಡ್ನ್ಯೂಸ್ ನೀಡಿದ್ದಾರೆ. ಸ್ಮಾರ್ಟ್ಫೋನ್, ಟ್ಯಾಬ್ಲೆಟ್, ಆರೋಗ್ಯ ವಿಮೆ, ವಿದ್ಯುತ್ ವಾಹನಗಳು, ಕ್ಯಾನ್ಸರ್ ಔಷಧಗಳು, ಕ್ರೀಡಾ ಉಪಕರಣಗಳು ಹಾಗೂ ಕೆಲ ಗೃಹೋಪಯೋಗಿ ವಸ್ತುಗಳು ಅಗ್ಗವಾಗಲಿವೆ. ಆದರೆ ಮದ್ಯ, ಸಿಗರೇಟ್, ಪಾನ್ ಮಸಾಲಾ, ವಿದೇಶಿ ಐಷಾರಾಮಿ ಗಡಿಯಾರಗಳು, ಬಟ್ಟೆ, ಪಾದರಕ್ಷೆಗಳು ಮತ್ತು ವಿಮಾನ ಬಿಡಿ ಭಾಗಗಳು ದುಬಾರಿಯಾಗುವ ಸಾಧ್ಯತೆ ಇದೆ.

ಖೇಲೋ ಇಂಡಿಯಾ ಮಿಷನ್ ಘೋಷಣೆ
ಬಜೆಟ್ 2026ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಖೇಲೋ ಇಂಡಿಯಾ ಮಿಷನ್ ಘೋಷಿಸಿ, ಕ್ರೀಡಾ ಸಾಮಗ್ರಿಗಳ ಉತ್ಪಾದನೆ, ಸಂಶೋಧನೆ ಮತ್ತು ನಾವೀನ್ಯತೆಗೆ ಹೆಚ್ಚಿನ ಉತ್ತೇಜನ ನೀಡುವುದಾಗಿ ತಿಳಿಸಿದ್ದಾರೆ. ಭಾರತವನ್ನು ಉತ್ತಮ ಗುಣಮಟ್ಟದ ಹಾಗೂ ಕೈಗೆಟುಕುವ ಕ್ರೀಡಾ ಸಲಕರಣೆಗಳ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ಗುರಿಯೊಂದಿಗೆ, ಸಲಕರಣೆಗಳ ವಿನ್ಯಾಸ ಮತ್ತು ವಸ್ತು ವಿಜ್ಞಾನದಲ್ಲಿ ನವೀನತೆ ಹೆಚ್ಚಿಸುವ ವಿಶೇಷ ಉಪಕ್ರಮವನ್ನು ಆರಂಭಿಸಲಾಗುತ್ತದೆ ಎಂದು ಅವರು ಹೇಳಿದರು.
ಇದನ್ನು ಓದಿ : SIT ಅಧಿಕಾರಿಗಳ ಕೈ ಸೇರಲಿದೆ ಮಹತ್ವದ ರಿಪೋರ್ಟ್! ಇಂದು ರಾಯ್ ಸಾವಿನ ಸುಳಿವು ಸಿಗಬಹುದಾ?

ತೆಂಗಿನಕಾಯಿ, ಗೋಡಂಬಿ, ಶ್ರೀಗಂಧ ಕೃಷಿಕರಿಗೆ ಹೊಸ ಯೋಜನೆ
ಬಜೆಟ್ 2026ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೆಂಗಿನಕಾಯಿ, ಗೋಡಂಬಿ, ಕೋಕೋ ಮತ್ತು ಶ್ರೀಗಂಧದಂತಹ ಹೆಚ್ಚಿನ ಮೌಲ್ಯದ ಬೆಳೆಗಳಿಗೆ ಹೊಸ ಉತ್ತೇಜನ ಯೋಜನೆಗಳನ್ನು ಘೋಷಿಸಿದ್ದಾರೆ. ತೆಂಗಿನಕಾಯಿ ಉತ್ಪಾದಕತೆ ಹೆಚ್ಚಿಸಲು ‘ತೆಂಗಿನಕಾಯಿ ಉತ್ತೇಜನ ಯೋಜನೆ’, ಗೋಡಂಬಿ–ಕೋಕೋ ಉತ್ಪಾದನೆಯಲ್ಲಿ ಸ್ವಾವಲಂಬನೆ ಮತ್ತು ರಫ್ತು ಸ್ಪರ್ಧಾತ್ಮಕತೆ ಹೆಚ್ಚಿಸುವ ಕಾರ್ಯಕ್ರಮಗಳು, ಜೊತೆಗೆ ಶ್ರೀಗಂಧದ ಕೃಷಿ ಹಾಗೂ ಕೊಯ್ಲಿನ ನಂತರದ ಸಂಸ್ಕರಣೆಗೆ ರಾಜ್ಯಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಪ್ರಸ್ತಾಪವಿದೆ. ಇದರಿಂದ ಕರ್ನಾಟಕ ಕರಾವಳಿ ಹಾಗೂ ರಾಜ್ಯದ ರೈತರಿಗೆ ವಿಶೇಷ ಲಾಭವಾಗಲಿದೆ.

ಕೃಷಿ ವಲಯಕ್ಕೆ AI ಸ್ಪರ್ಶ
ಬಜೆಟ್ 2026ರಲ್ಲಿ ಕೃಷಿ ವಲಯಕ್ಕೆ ಉತ್ತೇಜನ ನೀಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ ಸಾಮಗ್ರಿಗಳ ಸಂಯೋಜನೆಗಾಗಿ ಬಹುಭಾಷಾ ಎಐ ವೇದಿಕೆ ‘ಭಾರತ್ ವಿಸ್ತಾರ್’ ಆರಂಭಿಸುವುದಾಗಿ ಘೋಷಿಸಿದ್ದಾರೆ. ರೈತರ ಆದಾಯ ಹೆಚ್ಚಿಸಲು ಪಶುಸಂಗೋಪನೆಗೆ ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ, ಕರಾವಳಿ ಪ್ರದೇಶಗಳಲ್ಲಿ ತೆಂಗಿನಕಾಯಿ, ಗೋಡಂಬಿ, ಕೋಕೋ ಸೇರಿದಂತೆ ಹೆಚ್ಚಿನ ಮೌಲ್ಯದ ಬೆಳೆಗಳಿಗೆ ಬೆಂಬಲ, ಜೊತೆಗೆ ಶ್ರೀಗಂಧ, ವಾಲ್ನಟ್, ಬಾದಾಮಿ ಮತ್ತು ಪೈನ್ನಟ್ ಕೃಷಿಗೆ ರಾಜ್ಯಗಳೊಂದಿಗೆ ಪಾಲುದಾರಿಕೆ ಮಾಡುವ ಯೋಜನೆಗಳನ್ನು ಪ್ರಕಟಿಸಿದ್ದಾರೆ.
ಇದನ್ನು ನೋಡಿ : GUBBI | ಕೇಂದ್ರ ಮಲತಾಯಿ ಧೋರಣೆ ಮಾಡ್ತಿದೆ ಕೇಂದ್ರದ ವಿರುದ್ಧ ಗುಬ್ಬಿ ವಾಸಣ್ಣ ಕಿಡಿ !





