ಖ್ಯಾತ ಉದ್ಯಮಿ CJ Roy ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಾನ್ಫಿಡೆಂಟ್ ಗ್ರೂಪ್ಸ್ನ ಚೇರ್ಮನ್ ಹಾಗೂ ಖ್ಯಾತ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದ CJ Roy, ಬೆಂಗಳೂರಿನ ಆನೇಪಾಳ್ಯದಲ್ಲಿರುವ ತಮ್ಮ ಕಚೇರಿಯಲ್ಲಿ ಗನ್ನಿಂದ ಶೂಟ್ ಮಾಡಿಕೊಂಡು Suicide ಮಾಡಿಕೊಂಡಿದ್ದಾರೆ.
SIT ಅಧಿಕಾರಿಗಳ ಕೈ ಸೇರಲಿದೆ ಮಹತ್ವದ ರಿಪೋರ್ಟ್
ಇನ್ನು ಘಟನೆ ಮಾಹಿತಿ ದೊರಕುತ್ತಿದ್ದಂತೆ ಅಶೋಕನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ, ತನಿಖೆಯನ್ನು ವಿಶೇಷ ತನಿಖಾ ತಂಡ (SIT) ಕೈಗೆತ್ತಿಕೊಂಡಿದೆ.
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ
ಸಿಜೆ ರಾಯ್ ಬಳಕೆ ಮಾಡುತ್ತಿದ್ದ ಎರಡು ಮೊಬೈಲ್ ಸಿಮ್ಗಳ ಕಾಲ್ ಡಿಟೇಲ್ ರಿಪೋರ್ಟ್ (CDR) ಇಂದು SIT ಅಧಿಕಾರಿಗಳಿಗೆ ಲಭ್ಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸಂಬಂಧ ಈಗಾಗಲೇ ಸಂಬಂಧಿತ ಸರ್ವಿಸ್ ಪ್ರೊವೈಡರ್ಗಳಿಗೆ ಪೊಲೀಸರು ಪತ್ರ ಬರೆದಿದ್ದಾರೆ.
ಸಿಡಿಆರ್ ವರದಿ ಲಭ್ಯವಾದರೆ, ಸಿಜೆ ರಾಯ್ ಕೊನೆಯ ಕ್ಷಣದಲ್ಲಿ ಯಾರೊಂದಿಗೆ ಮಾತನಾಡಿದ್ದರು, ಯಾವ ನಂಬರ್ಗೆ ಎಷ್ಟು ಸಮಯ ಕರೆ ನಡೆಸಿದ್ದರು ಎಂಬ ಮಾಹಿತಿ ಲಭ್ಯವಾಗಲಿದೆ. Normal Call ಆಗಿದ್ದರೆ ಮಾತ್ರ ಕರೆ ಮಾಡಿದ ಸಂಖ್ಯೆ ಹಾಗೂ ಅವಧಿಯ ವಿವರಗಳು ಗೊತ್ತಾಗಲಿದ್ದು, ತನಿಖೆಗೆ ಇದು ಮಹತ್ವದ ಸುಳಿವು ನೀಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ : ನಾಳೆ ಕೇಂದ್ರದ ಬಜೆಟ್ನಲ್ಲಿ ಏನೇನು ಗಿಫ್ಟ್ ಸಿಗುತ್ತೆ ಗೊತ್ತಾ?
ಕಾನ್ಫಿಡೆಂಟ್ ಗ್ರೂಪ್ ವ್ಯವಹಾರಗಳ ಮೇಲೂ ತನಿಖೆ
ಇತ್ತ, ಸಿಜೆ ರಾಯ್ ಅವರ ಎಲ್ಲಾ ವ್ಯವಹಾರಗಳ ಕುರಿತು ತನಿಖೆ ನಡೆಸಲು ಇಬ್ಬರು ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಎಸ್ಐಟಿ ರಚಿಸಲಾಗಿದೆ. Confident Group ಗೆ ಸಂಬಂಧಿಸಿದ ಎಲ್ಲಾ ಬ್ಯಾಂಕ್ ಖಾತೆಗಳ ಮಾಹಿತಿ ಸಂಗ್ರಹಕ್ಕೆ ಎಸ್ಐಟಿ ಮುಂದಾಗಿದೆ.
ಯಾವ ವ್ಯವಹಾರ, ಯಾರ ಜೊತೆ, ಎಷ್ಟು ಮೊತ್ತದ ಹಣಕಾಸು ವ್ಯವಹಾರ ನಡೆದಿದೆ ಎಂಬುದರ ಬಗ್ಗೆ ತನಿಖೆ ನಡೆಸಲು ACP ನೇತೃತ್ವದ ವಿಶೇಷ ತಂಡ ರೆಡಿಯಾಗಿದ್ದು, ಈಗಾಗಲೇ ಐದಕ್ಕೂ ಹೆಚ್ಚು ಬ್ಯಾಂಕ್ಗಳಿಗೆ ಮಾಹಿತಿ ಕೇಳಿ ಪತ್ರಗಳನ್ನು ಕಳುಹಿಸಲಾಗಿದೆ ಎನ್ನಲಾಗಿದೆ.
ಸಿಜೆ ರಾಯ್ ಆತ್ಮಹತ್ಯೆಯ ಹಿಂದಿನ ಕಾರಣಗಳ ಬಗ್ಗೆ ತನಿಖೆ ಮುಂದುವರಿದಿದ್ದು, ಸಿಡಿಆರ್ ವರದಿ ಹಾಗೂ Bank ವ್ಯವಹಾರಗಳ ಪರಿಶೀಲನೆಯ ನಂತರ ಪ್ರಕರಣದ ಹಲವು ಅಂಶಗಳು ಬೆಳಕಿಗೆ ಬರುವ ನಿರೀಕ್ಷೆಯಿದೆ.

ಇದನ್ನು ನೋಡಿ : GUBBI | ಕೇಂದ್ರ ಮಲತಾಯಿ ಧೋರಣೆ ಮಾಡ್ತಿದೆ ಕೇಂದ್ರದ ವಿರುದ್ಧ ಗುಬ್ಬಿ ವಾಸಣ್ಣ ಕಿಡಿ !




