ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಭಾರತದಲ್ಲಿ FASTag ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸಲು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.

ಫೆ.1 ರಿಂದ ದೇಶದ ಆರ್ಥಿಕ ವಲಯದಲ್ಲಿ ಮತ್ತು ಸಾಮಾನ್ಯ ಜನರ ದೈನಂದಿನ ಬದುಕಿನಲ್ಲಿ ಹಲವು ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. ನಿರ್ಮಲಾ ಸೀತಾರಾಮನ್ ಅವರ ದಾಖಲೆ ಕೂಡ ಬಜೆಟ್ ಮಂಡನೆಯಾಗಿದೆ. ಇದಕ್ಕೂ ಮುನ್ನವೇ ಫಾಸ್ಟ್ಟ್ಯಾಗ್ ನಿಯಮಗಳು, ತಂಬಾಕು ಉತ್ಪನ್ನಗಳ ಬೆಲೆಯಲ್ಲಿ ಬದಲಾವಣೆ, ಎಲ್ಪಿಜಿ ಗ್ಯಾಸ್ ದರದಲ್ಲಿ ಬದಲಾವಣೆ ಕಂಡಿವೆ.
ಇದನ್ನು ಓದಿ : ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಖಾಸಗಿ ಬಸ್ – ಹಲವು ಮಹಿಳೆಯರು ಗಂಭೀರ

FASTag ನಿಯಮ ಸಡಿಲಿಕೆ
ಈ ನಡುವೆ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ರಿಲೀಫ್ ನೀಡಿದೆ. ಫಾಸ್ಟ್ಟ್ಯಾಗ್ಗೆ ಸಂಬಂಧಿಸಿದ ಕೆವೈಸಿ (KYC) ಪರಿಶೀಲನಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತೆಗೆದುಹಾಕಿರುವುದಾಗಿ ಘೋಷಿಸಿದೆ.
ಫೆಬ್ರವರಿ 1 ರಿಂದ, ಫಾಸ್ಟ್ಟ್ಯಾಗ್ ಅನ್ನು ಒಮ್ಮೆ ಸಕ್ರಿಯಗೊಳಿಸಿದ ನಂತ್ರ ಅಂದ್ರೆ ಆಕ್ಟಿವೇಟ್ ಮಾಡಿದ ನಂತರ, ಯಾವುದೇ ಹೆಚ್ಚುವರಿ ಕೆವೈಸಿ ಪರಿಶೀಲನೆಯ ಅಗತ್ಯವಿರುವುದಿಲ್ಲ.
ಸಂಚಾರ ಇನ್ನಷ್ಟು ಸುಗಮ
ವಾಹನದ ದಾಖಲೆಗಳ ಪರಿಶೀಲನೆಯ ಸಂಪೂರ್ಣ ಜವಾಬ್ದಾರಿಯನ್ನು ಇನ್ನು ಮುಂದೆ ಫಾಸ್ಟ್ಟ್ಯಾಗ್ ವಿತರಿಸುವ ಬ್ಯಾಂಕ್ಗಳೇ ವಹಿಸಿಕೊಳ್ಳಲಿವೆ. ಈ ಮೂಲಕ ಗ್ರಾಹಕರಿಗೆ ಅನಗತ್ಯ ತೊಂದರೆ ಕಡಿಮೆಯಾಗುವ ಜೊತೆಗೆ ಟೋಲ್ ಪ್ಲಾಜಾಗಳಲ್ಲಿ ಸಂಚಾರ ಇನ್ನಷ್ಟು ಸುಗಮವಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಇದನ್ನು ನೋಡಿ : 6 ವರ್ಷ ಪ್ರೀತಿಸಿ ಮದುವೆಯಾದರು ಫ್ಯಾಮಿಲಿ ಕಾಟಕ್ಕೆ ಠಾಣೆ ಮೆಟ್ಟಿಲೇರಿದ್ರು




