Sira : ಉಪನೋಂದಣಿ ಕಚೇರಿಯಲ್ಲಿ ಪ್ರೇಮಿಗಳ ಮದುವೆ – ನಮಗೆ ರಕ್ಷಣೆ ಕೊಡಿ ಎಂದು ಪೊಲೀಸರ ಮೊರೆ ಹೋದ ಜೋಡಿ.

ಪ್ರೇಮಿಗಳಿಬ್ಬರು ಪರಸ್ಪರ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು.ಸುಮಾರು 6 ವರ್ಷಗಳ ಕಾಲ ಪ್ರೀತಿಸಿ, ಇದೀಗ ಉಪನೋಂದಣಿ ಕಚೇರಿಯಲ್ಲಿ ಕಾನೂನಿನಡಿಯಲ್ಲಿ, ಕೆಲ ಮುಖಂಡರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಆದ್ರೆ ಈ ಪ್ರೇಮಿಗಳಿಗೆ ಇದೀಗ ಜೀವ ಬೆದರಿಕೆ ಎದುರಾಗಿದ್ದು, ನಮಗೆ ರಕ್ಷಣೆ ಕೊಡಿ ಎಂದುಪೊಲೀಸರ ಮೊರೆ ಹೋಗಿದ್ದಾರೆ.
ಕುಟುಂಬಸ್ಥರಿಂದಲೇ ಬೆದರಿಕೆ
ಹೌದು Sira ತಾಲ್ಲೂಕು ಹುಲಿಕುಂಟೆ ಹೋಬಳಿಯ ತಿಮ್ಮನಹಳ್ಳಿ ಗ್ರಾಮದ ಮೋಹನ್ ಕುಮಾರ್ ಅವರು ಲೆಕ್ಕನಹಳ್ಳಿ ಗ್ರಾಮದ ಸಂಗೀತಾ ಇಬ್ಬರು ಸುಮಾರು ಆರು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದ್ರೆ ಇವರಿಗೆ ಕುಟುಂಬಸ್ಥರಿಂದಲೇ ಬೆದರಿಕೆ ಇದೆಯಂತೆ. ಹೀಗಾಗಿ ನಮಗೆ ರಕ್ಷಣೆ ಬೇಕು ಎಂದು ಪೊಲೀಸರ ಮೊರೆ ಹೋಗಿದ್ದಾರೆ.
ನಮಗೆ ರಕ್ಷಣೆ ಬೇಕೆಂದು ಮನವಿ
ಈ ವೇಳೆ ಮಾಧ್ಯಮದ ಮುಂದೆ ಸಂಗೀತಾ ಮಾತನಾಡಿ, ನಾವಿಬ್ಬರು ಮದುವೆಯಾಗಿದ್ದೇವೆ. ನಮಗೇ ಇಲ್ಲಿಯವರೆಗೆ ಯಾವುದೇ ತೊಂದರೆ ಆಗಿಲ್ಲ, ಮುಂದೆಯೂ ತೊಂದರೆ ಆಗಬಾರದು. ನಾವು ಇವತ್ತು ಮದುವೆಯಾಗಿ ನಮ್ಮ ಊರಿಗೆ ಹೋಗುತ್ತಿದ್ದೇವೆ.
ಈ ವೇಳೆ ತನಗೆ ಹಾಗೂ ತನ್ನ ಗಂಡ ಹಾಗೂ ಅವರ ಕುಟುಂಬಕ್ಕೆ ನನ್ನ ತಂದೆಯವರ ಕುಟುಂಬದಿಂದ ಬೆದರಿಕೆ ಇದ್ದು, ತಮ್ಮ ಜೀವಕ್ಕಾಗಲಿ, ತನ್ನ ಪತಿ ಮನೆಯವರ ಜೀವಕ್ಕಾಗಲಿ ಅಥವಾ ನಮಗೆ ಮದುವೆ ಮಾಡಿಸಿದವರಿಗಾಗಲಿ ಯಾವುದೇ ಹಾನಿ ಆದರೆ, ಅದಕ್ಕೆ ನನ್ನ ತಂದೆ ಹಾಗೂ ಕುಟುಂಬದವರೇ ಕಾರಣ ಆಗಿರುತ್ತಾರೆ. ಅವರಿಂದ ನಮಗೆ ರಕ್ಷಣೆ ಬೇಕು ಎಂದು ಯುವತಿ ವೀಡಿಯೋ ಮೂಲಕ ಮನವಿ ಮಾಡಿದ್ದಾರೆ.
ಇದನ್ನು ಓದಿ : Davanagere| ಸಚಿವ S.S Mallikarjun ಆಪ್ತನ ಮಗ ಅರೆಸ್ಟ್!
ಹುಡುಗಿಯ ತಂದೆ ನಮಗೆ ಜೀವ ಬೆದರಿಕೆ ಹಾಕಿದ್ದಾರೆ
ಯುವಕ ಮೋಹನ್ ಕುಮಾರ್ ಮಾತನಾಡಿ, ನಾನು ಲಟ್ಟನಹಳ್ಳಿ ರಂಗಸ್ವಾಮಿ ಅವರ ಮಗಳನ್ನು ಆರು ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆ ಮಾಡಿ ಕೊಡಿ ಎಂದು ಅವರನ್ನು ಹಿಂದೊಮ್ಮೆ ಕೇಳಿದ್ದೆ. ಆದರೆ, ಅವರು ಆಗ ಮದುವೆ ಮಾಡಿ ಕೊಡುವುದಾಗಿ ಹೇಳಿ ನಂತರ ಆಗುವುದಿಲ್ಲ ಎಂದು ಹೇಳಿದ್ರು. ಹೀಗಾಗಿ ನಾವು ಅನಿವಾರ್ಯವಾಗಿ ರಿಜಿಸ್ಟ್ರಾರ್ ಮದುವೆ ಆಗಿದ್ದೇವೆ. ಮದುವೆ ಆದ ನಂತರ ಹುಡುಗಿಯ ತಂದೆ ನಮಗೆ ಜೀವ ಬೆದರಿಕೆ ಹಾಕಿದ್ದಾರೆ.
ನಮಗೂ ಹಾಗೂ ನಮಗೆ ಮದುವೆ ಮಾಡಿಸಿದವರಿಗೂ ಕಡಿತಿನಿ, ಇರಿತಿನಿ ಎಂದು ಜೀವ ಬೆದರಿಕೆ ಹಾಕಿದ್ದು, ನನ್ನ ಸಹೋದರನಿಗೂ ಬೆದರಿಕೆ ಹಾಕಿದ್ದಾರೆ. ಊರಿಗೆ ಬಂದ ಮೇಲೆ ನೋಡಿಕೊಳ್ಳುವೆ ಎಂದಿದ್ದಾರೆ. ಹೀಗಾಗಿ ಅವರಿಂದ ನಮಗೆ ಯಾವುದೇ ತೊಂದರೆ ಆಗದಂತೆ ಕಾಪಾಡಬೇಕು ಎಂದು ಮೋಹನ್ ಕುಮಾರ್ ಅವರು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ಈ ನವ ಜೋಡಿಗಳು ತಮಗೆ ಪೊಲೀಸರು ಸೂಕ್ತವಾದ ರಕ್ಷಣೆ ನೀಡಬೇಕು ಎಂದು
ಇದನ್ನು ನೋಡಿ : TUMAKURU |ಹತ್ತಾರು ಕಾಯಿಲೆಗಳಿಗೆ ಒಂದೇ ರಾಮಬಾಣ- ನೈಸರ್ಗಿಕವಾಗಿ ಆರೋಗ್ಯ ಹೆಚ್ಚಿಸಲು ಇಲ್ಲಿದೆ ಉಪಾಯ




