ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ – ಸಚಿವ S.S Mallikarjun ಆಪ್ತನ ಮಗ ಅರೆಸ್ಟ್, ಮತ್ತೊಬ್ಬನಿಗಾಗಿ ತಲಾಶ್.

ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ (S.S Mallikarjun) ಅವರ ಆಪ್ತ ಅಯೂಬ್ ಪೈಲ್ವಾನ್ ಎಂಬವರ ಪುತ್ರ ಹಸೇನ್ ಹಾಗೂ ಆತನ ಸ್ನೇಹಿತನನ್ನು ದಾವಣಗೆರೆ ಪೊಲೀಸರು (Police) ಬಂಧಿಸಿದ್ದಾರೆ.

ಇದನ್ನು ಓದಿ : ಬಜೆಟ್ ದಿನವೇ ಚಿನ್ನ, ಬೆಳ್ಳಿ ದರ ದಾಖಲೆ ಕುಸಿತ..!
ಅಯೂಬ್ ಪೈಲ್ವಾನ್ ಅವರ ಇನ್ನೊಂಬ್ಬ ಪುತ್ರನ ಹುಡುಕಾಟ
ಅಯೂಬ್ ಪೈಲ್ವಾನ್ ಅವರ ಇನ್ನೊಬ್ಬ ಪುತ್ರ ಹುಸೇನ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಒಂದೇ ಕೋಮಿನ ಎರಡು ಯುವಕರ ಗುಂಪಿನ ನಡುವೆ ಘರ್ಷಣೆ ನಡೆಯುತ್ತಿತ್ತು. ಈ ವೇಳೆ ನಿಯಂತ್ರಣಕ್ಕೆ ಮುಂದಾದ ಕಾನ್ಸ್ಟೇಬಲ್ ಹರೀಶ್ ಹಾಗೂ ಕೆಂಚಪ್ಪ ಎಂಬವರ ಮೇಲೆ ಕಿಡಿಗೇಡಿಗಳು ಏಕಾಏಕಿ ಹಲ್ಲೆ ಮಾಡಿದ್ದರು. ಹಲ್ಲೆಯಿಂದ ಪೊಲೀಸ್ ಸಿಬ್ಬಂದಿ ತಲೆ ಹಾಗೂ ಮುಖಕ್ಕೆ ಗಾಯಗಳಾಗಿದೆ.

10 ಯುವಕರ ವಿರುದ್ಧ ಪ್ರಕರಣ ದಾಖಲು
ಇನ್ನು ಹಲ್ಲೆಗೆ ಸಂಬಂಧಿಸಿ 10 ಜನ ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಇದನ್ನು ನೋಡಿ : ಪುಷ್ಪ ಸಿನೆಮಾ ಸ್ಟೈಲಲ್ಲಿ ಮದ್ಯ ಸಾಗಿಸುತ್ತಿದ್ದ ಗ್ಯಾಂಗ್ ಅಂದರ್!




