ಬಂಗಾರ ಪ್ರಿಯರಿಗೆ ಬಂಪರ್ ನ್ಯೂಸ್! Gold Rate ನಲ್ಲಿ ಭಾರೀ ಕುಸಿತ..!

ಕಳೆದ ಕೆಲ ದಿನಗಳಿಂದ ಗಗನಕ್ಕೇರುತ್ತಿದ್ದ ಚಿನ್ನದ ದರದಲ್ಲಿ ಇಂದು ಭಾರೀ ಕುಸಿತ ಕಂಡುಬಂದಿದ್ದು, ಚಿನ್ನ ಪ್ರಿಯರ ಮುಖದಲ್ಲಿ ಮಂದಹಾಸ ಮೂಡಿದೆ.
ಒಂದೇ ದಿನದಲ್ಲಿ ಶೇ.6ರಷ್ಟು ಇಳಿಕೆ
ಇಂದು ಚಿನ್ನದ ಮಾರುಕಟ್ಟೆಯಲ್ಲಿ ಅಚ್ಚರಿಯ ಬೆಳವಣಿಗೆ ಕಂಡುಬಂದಿದೆ. ಪ್ರತಿ 10 ಗ್ರಾಂ Gold Rate ನಲ್ಲಿ ಬರೋಬ್ಬರಿ ₹9,140 ಇಳಿಕೆಯಾಗಿದ್ದು, ಒಂದೇ ದಿನದಲ್ಲಿ ಬಂಗಾರದ ಬೆಲೆ ಶೇಕಡಾ 6ರಷ್ಟು ಕುಸಿದಂತಾಗಿದೆ. ಇತ್ತೀಚಿನ ದಿನಗಳಲ್ಲಿ ಕಂಡ ಅತಿದೊಡ್ಡ ಏಕದಿನ ಕುಸಿತಗಳಲ್ಲಿ ಇದೂ ಒಂದಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ OTT ಗೆ ಬಂದಾಯ್ತು!
Gold Rate ಇಳಿಕೆಗೆ ಪ್ರಮುಖ ಕಾರಣಗಳು
- ಜಾಗತಿಕ ಮಾರುಕಟ್ಟೆಯಲ್ಲಿನ ಹಠಾತ್ ಬದಲಾವಣೆ
- ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಯನ್ನು ಹಿಂಪಡೆಯುತ್ತಿರುವುದು
- ಷೇರು ಮಾರುಕಟ್ಟೆಯಲ್ಲಿನ ಏರಿಳಿತದ ಪ್ರಭಾವ
ಬೆಳ್ಳಿಯ ಬೆಲೆಯಲ್ಲೂ ದಾಖಲೆ ಮಟ್ಟದ ಇಳಿಕೆ
ಚಿನ್ನದ ಜೊತೆಗೆ ಬೆಳ್ಳಿಯ ದರದಲ್ಲೂ ಭಾರೀ ಕುಸಿತ ಕಂಡುಬಂದಿದೆ. ಬೆಳ್ಳಿ ಬೆಲೆಯಲ್ಲಿ ಸುಮಾರು ₹27,000ರಷ್ಟು ಇಳಿಕೆಯಾಗಿದ್ದು, ಬೆಳ್ಳಿ ವಸ್ತುಗಳನ್ನು ಖರೀದಿಸಲು ಇದು ಗ್ರಾಹಕರಿಗೆ ಉತ್ತಮ ಅವಕಾಶವಾಗಿ ಪರಿಣಮಿಸಿದೆ.

ಗ್ರಾಹಕರಿಗೆ ದೊಡ್ಡ ರಿಲೀಫ್
ಮದುವೆ ಹಾಗೂ ಶುಭ ಸಮಾರಂಭಗಳ ಸೀಸನ್ ಆರಂಭವಾಗುತ್ತಿರುವ ಈ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಇಳಿಕೆಯಾಗಿರುವುದು ಗ್ರಾಹಕರಿಗೆ ದೊಡ್ಡ ರಿಲೀಫ್ ನೀಡಿದೆ. ಕಳೆದ ಕೆಲವು ತಿಂಗಳಿಂದ ಲಕ್ಷದ ಗಡಿ ತಲುಪಿದ್ದ ಚಿನ್ನದ ದರ ಇದೀಗ ಸಾಮಾನ್ಯ ಜನರ ಕೈಗೆಟುಕುವ ಮಟ್ಟಕ್ಕೆ ಇಳಿಯುವ ಮುನ್ಸೂಚನೆ ನೀಡುತ್ತಿದೆ.
ಇದನ್ನು ನೋಡಿ : LPG GAS | ಜನರಿಗೆ ಮತ್ತೆ ಶಾಕ್ ಕೊಟ್ಟ ಸರ್ಕಾರ ವಾಣಿಜ್ಯ ಸಿಲಿಂಡರ್ ದರ ದಿಢೀರ್ ಏರಿಕೆ




