OTT ಗೆ ಬಂತು ಆಶಿಕಾ, ದುಷ್ಯಂತ್, ಸಿಂಪಲ್ ಸುನಿ ಸಿನಿಮಾ ‘ಗತವೈಭವ’.

ತೆಳು ಹಾಸ್ಯದ ಜೊತೆಗೆ ಗಾಢವಾದ ಕಥೆಯನ್ನು ನಿರೂಪಿಸುವಲ್ಲಿ ನಿರ್ದೇಶಕ ಸಿಂಪಲ್ ಸುನಿ ತಮ್ಮದೇ ಆದ ಶೈಲಿಯನ್ನು ರೂಪಿಸಿಕೊಂಡಿದ್ದಾರೆ. ಕಳೆದ ವರ್ಷ ಅವರು ನಿರ್ದೇಶಿಸಿದ್ದ ‘ಗತವೈಭವ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಹಾಗೂ ಉತ್ತಮ ವಿಮರ್ಶೆಗಳನ್ನು ಗಳಿಸಿತ್ತು.

OTT ಗೆ ಸಿಂಪಲ್ ಸುನಿ ಸಿನಿಮಾ ‘ಗತವೈಭವ’
ಇದೀಗ ಈ ಸಿನಿಮಾ ಒಟಿಟಿಗೆ ಕಾಲಿಟ್ಟಿದ್ದು, ಚಿತ್ರಮಂದಿರಗಳಲ್ಲಿ ಮಿಸ್ ಮಾಡಿಕೊಂಡವರು ಮನೆಯಲ್ಲೇ ಕುಳಿತು ವೀಕ್ಷಿಸಲು ಅವಕಾಶ ದೊರೆತಿದೆ. ಇನ್ನು ‘ಗತವೈಭವ’ ಸಿನಿಮಾ ಈಗ ಅಮೇಜಾನ್ ಪ್ರೈಮ್ ವಿಡಿಯೋನಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದು, OTT ಪ್ರೇಕ್ಷಕರಿಂದಲೂ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದನ್ನು ಓದಿ : ಮಹಿಳೆಯ ಅತ್ಯಾಚಾರವೆಸಗಿ ಕೊಲೆಗೈದು ತಾನೂ ಸತ್ತ ವ್ಯಕ್ತಿ!

ವಿಭಿನ್ನ ಗೆಟಪ್ಗಳಲ್ಲಿ ಅಭಿನಯ
ಯುವ ನಟ ದುಷ್ಯಂತ್ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು, ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಕಥೆ ನಾಲ್ಕು ವಿಭಿನ್ನ ಕಾಲಘಟ್ಟಗಳಲ್ಲಿ ಸಾಗುತ್ತದೆ. ಈ ನಾಲ್ಕು ಕಾಲಘಟ್ಟಗಳಿಗೆ ತಕ್ಕಂತೆ ದುಷ್ಯಂತ್ ಮತ್ತು ಆಶಿಕಾ ರಂಗನಾಥ್ ನಾಲ್ಕು ವಿಭಿನ್ನ ಗೆಟಪ್ಗಳಲ್ಲಿ ಅಭಿನಯಿಸಿರುವುದು ಸಿನಿಮಾದ ವಿಶೇಷತೆ.

ದುಷ್ಯಂತ್ ಅವರ ಚೊಚ್ಚಲ ಸಿನಿಮಾ
2025ರ ನವೆಂಬರ್ 14ರಂದು ‘ಗತವೈಭವ’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ನಾಲ್ಕು ವಿಭಿನ್ನ ಕಥಾಹಂದರಗಳನ್ನು ಪ್ರೇಕ್ಷಕರು ಎಂಜಾಯ್ ಮಾಡಿದ್ದರು. ಈ ಚಿತ್ರವು ನಟ ದುಷ್ಯಂತ್ ಅವರ ಚೊಚ್ಚಲ ಸಿನಿಮಾ. ಮೊದಲ ಚಿತ್ರವಾಗಿದ್ದರೂ ಸಾಕಷ್ಟು ತಯಾರಿಯೊಂದಿಗೆ ಅವರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಫೈಟ್, ಡ್ಯಾನ್ಸ್ ಹಾಗೂ ಅಭಿನಯದಲ್ಲಿ ಅನುಭವಿ ನಟನಂತೆ ಕಾಣಿಸಿಕೊಂಡಿರುವ ದುಷ್ಯಂತ್, ನಾಲ್ಕು ವಿಭಿನ್ನ ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎನ್ಮಲಾಗಿಗ್ತಿದೆ.
ಇದನ್ನು ನೋಡಿ : Union Budget|7 ಹೊಸ ಹೈಸ್ಪೀಡ್ ರೈಲು ಕಾರಿಡಾರ್ : ದೆಹಲಿ-ವಾರಾಣಸಿ ಬುಲೆಟ್ ವೇಗದ ಪ್ರಯಾಣ..!




