ರಣ್ವೀರ್ ಸಿಂಗ್ ನಟನೆಯ Dhurandhar ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ.

ರಣ್ವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೂಳೆಬ್ಬಿಸುತ್ತಿದೆ. ಈ ಸಿನಿಮಾ ಈಗಾಗಲೇ ಹಲವು ದೊಡ್ಡ ಹಿಂದಿ ಮತ್ತು ದಕ್ಷಿಣ ಭಾರತೀಯ ಸಿನಿಮಾಗಳ ದಾಖಲೆಗಳನ್ನು ಮುರಿದು ಹಾಕಿದ್ದು, ‘ಕೆಜಿಎಫ್ 2’, ‘ಆರ್ಆರ್ಆರ್’ ಹಾಗೂ ‘ಪುಷ್ಪ 2’ ಕಲೆಕ್ಷನ್ಗಳನ್ನೂ ಹಿಂದಿಕ್ಕುತ್ತಿದೆ.
ಹೊಸ ದಾಖಲೆ ನಿರ್ಮಾಣ
‘ಧುರಂಧರ್’ ತನ್ನ ಪ್ರಥಮ ವಾರದ ಬಳಿಕ ಎರಡರಿಂದ ಎಂಟನೇ ವಾರದವರೆಗೆ ಪ್ರತಿ ವಾರವೂ ಅತ್ಯಧಿಕ ಗಳಿಕೆ ಮಾಡಿದೆ. ವಿಶೇಷವಾಗಿ, ಎಂಟನೇ ವಾರದಲ್ಲಿ ಅತ್ಯಧಿಕ ಹಣ ಗಳಿಸಿದ ಹಿಂದಿ ಸಿನಿಮಾ ಹಳೆಯ 25 ವರ್ಷ ಹಳೆಯ ‘ಗದರ್: ಏಕ್ ಪ್ರೇಮ್ ಕಥ’ ಚಿತ್ರದ ದಾಖಲೆಯನ್ನು ಮುರಿಸಿದೆ. ‘ಗದರ್’ ಸಿನಿಮಾದ ಎಂಟನೇ ವಾರದಲ್ಲಿ ಸುಮಾರು 1 ಕೋಟಿ ರೂಪಾಯಿ ಗಳಿಕೆಯಿತ್ತು; ಆದರೆ Dhurandhar ಅಷ್ಟೇ ವಾರದಲ್ಲಿ ಸುಮಾರು 4 ಕೋಟಿ ರೂಪಾಯಿ ಗಳಿಸಿ ಹೊಸ ದಾಖಲೆ ನಿರ್ಮಿಸಿದೆ.

ಇದನ್ನು ಓದಿ : ಅಕ್ರಮ ಮದ್ಯ ಮಾರಾಟ ದಂಧೆ – ಯುವಕರೇ ಟಾರ್ಗೆಟ್..!?
ಅತಿ ಹೆಚ್ಚು ಹಣ ಗಳಿಸಿದ ನಾಲ್ಕನೇ ಸಿನಿಮಾ – Dhurandhar
ವಿಶ್ವ ಬಾಕ್ಸ್ ಆಫೀಸ್ನಲ್ಲಿ ‘ಧುರಂಧರ್’ ಈಗಾಗಲೇ 1340 ಕೋಟಿ ರೂಪಾಯಿ ಗಳಿಸಿದ್ದು, ಇದರಿಂದ ವಿಶ್ವದಲ್ಲಿ ಅತಿ ಹೆಚ್ಚು ಹಣ ಗಳಿಸಿದ ನಾಲ್ಕನೇ ಸಿನಿಮಾ ಸ್ಥಾನವನ್ನು ಗಳಿಸಿದೆ.
ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಮೂರು ಸಿನಿಮಾಗಳು :
- ‘ದಂಗಲ್’ – ಸುಮಾರು 2000 ಕೋಟಿ
- ‘ಬಾಹುಬಲಿ 2’ – 1800 ಕೋಟಿ
- ‘ಪುಷ್ಪ 2’ – 1700 ಕೋಟಿ

Dhurandhar – ಆದಿತ್ಯ ಧರ್ ನಿರ್ದೇಶನ
‘ಧುರಂಧರ್’ ಸಿನಿಮಾ ಭಾರತೀಯ ಗೂಢಚಾರಿಯೊಬ್ಬ ಪಾಕಿಸ್ತಾನದಲ್ಲಿ ಮಾಡುವ ಸಾಹಸಗಳ ಕಥೆಯನ್ನು ತೋರಿಸುತ್ತದೆ. ರಣ್ವೀರ್ ಸಿಂಗ್ ಜೊತೆಗೆ ಅಕ್ಷಯ್ ಖನ್ನ, ಸಂಜಯ್ ದತ್, ಆರ್ ಮಾಧವನ್ ಸೇರಿದಂತೆ ಹಲವು ಪ್ರಮುಖ ನಟರು ನಟಿಸಿದ್ದಾರೆ. ಚಿತ್ರದ ನಿರ್ದೇಶನ ಆದಿತ್ಯ ಧರ್ ಅವರು ಮಾಡಿದ್ದಾರೆ.
ಇದನ್ನು ನೋಡಿ : CN HALLI | CET, NEET ಗೆ ಉಚಿತ ತರಬೇತಿ ಎಸ್.ಬಿ.ಟ್ರಸ್ಟ್ ನ ಕಾರ್ಯಕ್ಕೆ ಮೆಚ್ಚುಗೆ




