Chitradurga : ಅಕ್ರಮ ಸಂಬಂಧ ಹಿನ್ನೆಲೆ ಪತಿಯಿಂದಲೇ ಪತ್ನಿಯ ಹತ್ಯೆ.

ಆ ಕುಟುಂಬಕ್ಕೆ ಪತ್ನಿಯೇ ಆಧಾರ ಸ್ತಂಭವಾಗಿದ್ದರು. ಕ್ಯಾನ್ಸರ್ ಪೀಡಿತ ಪತಿಯ ಆರೈಕೆ ಜತೆಗೆ ಮನೆಯ ಸಂಪೂರ್ಣ ಜವಾಬ್ದಾರಿಯನ್ನೂ ಹೊತ್ತಿದ್ದ ಮಹಿಳೆ ಕೊನೆಗೆ ಪತಿಯ ಕೈಯಲ್ಲೇ ಬಲಿಯಾಗಿರುವ ಘಟನೆ Chitradurga ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹಿರೇ ಎಮ್ಮಿಗನೂರು ಗ್ರಾಮದಲ್ಲಿ ನಡೆದಿದೆ.
ಕೋಲಿನಿಂದ ತಲೆಗೆ ಹೊಡೆದು ಹತ್ಯೆ
ಮಮತಾ (45) ಎಂಬ ಮಹಿಳೆಯನ್ನು ಪತಿರವಿಕುಮಾರ್ (52) ಕೋಲಿನಿಂದ ತಲೆಗೆ ಹೊಡೆದು ಹತ್ಯೆಗೈದಿರುವ ಆರೋಪ ಕೇಳಿ ಬಂದಿದೆ. ಈ ಘಟನೆ ಚಿಕ್ಕಜಾಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹಿರೇ ಎಮ್ಮಿಗನೂರು ಗ್ರಾಮ ಇಂದು ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದಿತ್ತು.
ಬೆಳಗ್ಗೆ 6:30ರ ಸುಮಾರಿಗೆ ಮಮತಾ(45) ಹೆಣವಾಗಿದ್ದರು. ಮನೆಯಲ್ಲಿ ಯಾವುದೇ ಫೈಲ್ ಹುಡುಕುವ ವೇಳೆ ಏಣಿಯಿಂದ ಬಿದ್ದು ತೆಲೆಗೆ ಪೆಟ್ಟಾಗಿ, ರಕ್ತಸ್ರಾವದಿಂದ ಸಿರುಚೆಲ್ಲಿದ್ದಾರೆ ಎಂದು ಪತಿ ಕಥೆ ಕಟ್ಟಿದ್ದ.
ಇದನ್ನು ಓದಿ : ರಿಂಗ್ ರೋಡ್ನಲ್ಲಿ Accident – ಚಾಲಕ ಜಸ್ಟ್ ಮಿಸ್
ನಡೆದಿದ್ದೇನು..?
ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು, ಡಿವೈಎಸ್ಪಿ ಪಿ. ದಿನಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಚಿಕ್ಕಜಾಜೂರು ಠಾಣೆ ಪೊಲೀಸರು ಆರೋಪಿ ರವಿಕುಮಾರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮನೆಯ ಖರ್ಚು, ವೆಚ್ಚ, ಸಾಲ-ಸೋಲ ಮತ್ತು ಆಸ್ತಿ ಮಾರಾಟದ ಬಗ್ಗೆ ಪತಿ-ಪತ್ನಿ ನಡುವೆ ವಾಗ್ವಾದ ನಡೆದಿತ್ತು. ಅದೇ ಕಾರಣಕ್ಕೆ ಮನೆಯಲ್ಲಿದ್ದ ಕೋಲಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವುದಾಗಿ ಆರೋಪ ಕೇಳಿ ಬರುತ್ತಿದೆ. ಆದರೆ ಆರೋಪಿ ರವಿ ಮಾತ್ರ ಪತ್ನಿಗೆ ಅಕ್ರಮ ಸಂಬಂಧ ಇತ್ತು. ಹೀಗಾಗಿ, ಕೊಲೆ ಮಾಡಿದ್ದೇನೆಂದು ಪೊಲೀಸರೆದುರು ಒಪ್ಪಿಕೊಂಡಿರುವುದು ತಿಳಿದು ಬಂದಿದೆ.
ಅಕ್ರಮ ಸಂಬಂಧ ಹಿನ್ನೆಲೆ ಹತ್ಯೆ
ಇನ್ನು ಪೊಲೀಸರ ವಿಚಾರಣೆ ವೇಳೆ ಆರೋಪಿ ರವಿಕುಮಾರ್, ಪತ್ನಿಗೆ ಅಕ್ರಮ ಸಂಬಂಧವಿದೆ ಎಂಬ ಶಂಕೆಯಿಂದಲೇ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿರುವುದು ತಿಳಿದು ಬಂದಿದೆ.
ಮನೆಯ ಖರ್ಚು, ಆಸ್ತಿ ಮಾರಾಟದ ವಿಚಾರದಲ್ಲೂ ಪತಿ-ಪತ್ನಿ ನಡುವೆ ಆಗಾಗ ವಾಗ್ವಾದ ನಡೆಯುತ್ತಿತ್ತು ಎನ್ನಲಾಗಿದೆ.
ಪ್ರಕರಣ ದಾಖಲು
ಚಿಕ್ಕಜಾಜೂರು ಪೊಲೀಸರು ಆರೋಪಿ ರವಿಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನು ನೋಡಿ : TUMAKURU SP | ತುಮಕೂರಲ್ಲಿ ಭೀಕರ ರಸ್ತೆ ಅಪಘಾತSP ಅಶೋಕ್ ಏನಂದ್ರು ಗೊತ್ತಾ




