Tumakuru : ರಿಂಗ್ ರಸ್ತೆಯಲ್ಲಿ ಹೆಚ್ಚಾಗುತ್ತಿವೆ Accident ಪ್ರಕರಣಗಳು.

ತುಮಕೂರಿನ ರಿಂಗ್ ರಸ್ತೆಯಲ್ಲಿ ದಿನೇ ದಿನೇ ಅಫಘಾತ ಗಳು ಹೆಚ್ಚಾಗುತ್ತಿದ್ದು , ರಸ್ತೆಯಲ್ಲಿ ಸರಿಯಾದ ನಾಮಫಲಕಗಳು, ಹಾಗೂ ಸೂಚನಾ ಫಲಕಗಳು ಇಲ್ಲದೆ ಇರುವುದೇ ಅಫಘಾತಗಳಿಗೆ ಕಾರಣ ಆಗ್ತಾ ಇದ್ಯಾ ಎನ್ನುವಂತಾಗಿದೆ.
ರಿಂಗ್ ರಸ್ತೆಯಲ್ಲಿ ಕಾರು ಅಫಘಾತ
ಹೌದು..ನೆನ್ನೆ ಸಂಜೆ ಸುಮಾರು 7ಗಂಟೆಯ ಸಮಯದಲ್ಲಿ ಸ್ಟಾರ್ ಕನ್ವೆನ್ಷನ್ ಹಾಲ್ ಮುಂಭಾಗದ ರಿಂಗ್ ರಸ್ತೆಯಲ್ಲಿ ಕಾರು ಅಫಘಾತ ಸಂಭವಿಸಿದ್ದು, ಡಿವೈಡರ್ ಇರುವುದು ಕಾಣಿಸದೆ, ಚಾಲಕ ಕಾರನ್ನು ಡಿವೈಡರ್ ಗೆ ಗುದ್ದಿದ್ದಾನೆ ಪರಿಣಾಮ ಕಾರು ಜಖಂ ಆಗಿದೆ.
ಇದನ್ನು ಓದಿ : ಲಾಲ್ಬಾಗ್ Flower Show ಗೆ ತೆರೆ – ದಾಖಲೆ 8.10 ಕೋಟಿ ಜನ ಭೇಟಿ

ಡಿವೈಡರ್ ಕಾಣಿಸದೆ ಗುದ್ದಿಕೊಂಡಿದ್ದೇವೆ
ಇನ್ನು ಕಾರಿನ ಚಾಲಕ ಮಾತನಾಡಿ ನಾವು ಬರಬೇಕಾದರೆ ಇಲ್ಲಿ ಡಿವೈಡರ್ ಇರುವುದು ಕಾಣಿಸಲೇ ಇಲ್ಲ, ಇಲ್ಲಿ ಡಿವೈಡರ್ ಇದೆ ಅಂತ ಗೊತ್ತಾಗಲು ಯಾವುದೇ ಸೂಚನಾ ಫಲಕಗಳನ್ನ ಇಲ್ಲಿ ಹಾಕಲಾಗಿಲ್ಲ. ಇದ್ರಿಂದ ನಾವು ಡಿವೈಡರ್ ಕಾಣಿಸದೆ ಗುದ್ದಿಕೊಂಡಿದ್ದೇವೆ. ಸಂಬಂಧ ಪಟ್ಟ ಅಧಿಕಾರಿಗಳು ದಯವಿಟ್ಟು ಇಲ್ಲಿಗೆ ರಿಪ್ಲೆಕ್ಟರ್ ಅಥವಾ ಸೂಚನಾ ಫಲಕವನ್ನ ಅಳವಡಿಸಿ ಅಪಘಾತ ತಪ್ಪಿಸಬೇಕಿದೆ ಎಂದರು.
Accident ಗಳು ಆಗದಂತೆ ತಡೆಯಬೇಕಿದೆ
ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ರಿಂಗ್ ರಸ್ತೆಯ ಡಿವೈಡರ್ ಗಳಿಗೆ ರಿಪ್ಲೆಕ್ಟರ್ ಅಥವಾ ಸೂಚನಾ ಫಲಕವನ್ನ ಅಳವಡಿಸಿ Accident ಗಳು ಆಗದಂತೆ ತಡೆಯಬೇಕಿದೆ.

ಇದನ್ನು ನೋಡಿ : ಮಹಿಳೆಯರಿಗೆ ರಾಜ್ಯದಲ್ಲಿ ಸುರಕ್ಷತೆಯಿಲ್ಲ ವಿ.ಪ.ನಲ್ಲಿ ರಾಜೀವ್ ಗೌಡ ಕೇಸ್




