ತೇಜಸ್ವಿ ವಿಸ್ಮಯ Flower Show ತೆರೆ, 8.10 ಕೋಟಿ ಜನ ಭೇಟಿ, ದಾಖಲೆ 2.46 ಕೋಟಿ ರೂ. ಸಂಗ್ರಹ.

ಗಣರಾಜ್ಯೋತ್ಸವ ಅಂಗವಾಗಿ ಲಾಲ್ಬಾಗ್ ಬಾಟನಿಕಲ್ ಗಾರ್ಡನ್ನಲ್ಲಿ ಆಯೋಜಿಸಲಾಗಿದ್ದ 219ನೇ ಫ್ಲವರ್ ಶೋಗೆ ಇಂದು ತೆರೆ ಬಿದ್ದಿದೆ. ‘ತೇಜಸ್ವಿ ವಿಸ್ಮಯ’ ಎಂಬ ಶೀರ್ಷಿಕೆಯಡಿ 11 ದಿನಗಳ ಕಾಲ ನಡೆದ ಈ ಭವ್ಯ ಹೂವಿನ ಪ್ರದರ್ಶನವು ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಸಾಹಿತ್ಯ, ಪ್ರಕೃತಿ ಪ್ರೇಮ ಹಾಗೂ ವಿಸ್ಮಯ ಲೋಕವನ್ನು ಹೂವಿನ ಕಲೆಯ ಮೂಲಕ ಜನರ ಮುಂದೆ ಅನಾವರಣಗೊಳಿಸಿತು.
ತೇಜಸ್ವಿ ವಿಸ್ಮಯ Flower Show ಗೆ ತೆರೆ
ಶೋದ ಕೊನೆಯ ದಿನವಾದ ಸೋಮವಾರ ಹೆಚ್ಚಿನ ಜನ Flower Show ಗೆ ಭೇಟಿ ನೀಡಿ ಗಾಜಿನ ಮನೆಯಲ್ಲಿ ಸೃಷ್ಟಿಯಾದ ಮೂಡಿಗೆರೆಯ ಪ್ರಕೃತಿ ಜೊತೆಗೆ ತೇಜಸ್ವಿಯ ವಿಸ್ಮಯ ಲೋಕ ಕಣ್ತುಂಬಿಕೊಂಡರು. ಕೊನೆಯ ದಿನವಾದ ಜನವರಿ 26ರಂದು ದಾಖಲೆ ಸಂಖ್ಯೆಯ ಜನರು ಭೇಟಿ ನೀಡಿ ಹೂವಿನ ಲೋಕದಲ್ಲಿ ಮುಳುಗಿದರು.
ಶೋವನ್ನು ತೇಜಸ್ವಿಯವರಿಗೆ ಸಮರ್ಪಿಸಲಾಗಿತ್ತು. ಗಾಜಿನ ಮನೆಯಲ್ಲಿ ಮಂತ್ರ ಮಾಂಗಲ್ಯ, ಪ್ರಕೃತಿಯ ಸೊಬಗು, ಗ್ರಾಮೀಣ ಜೀವನ, ಕಾಡು-ಪ್ರಾಣಿಗಳು, ನದಿ-ಬೆಟ್ಟಗಳು ಹೂಗಳಿಂದ ಅದ್ಭುತವಾಗಿ ರಚನೆಗೊಂಡಿದ್ದವು.
ಇದನ್ನು ಓದಿ : ಶಿವಮೊಗ್ಗದಲ್ಲಿ 11 ಜನರಿಗೆ ಹುಚ್ಚು ನಾಯಿ ಕಡಿತ

11 ದಿನಗಳಲ್ಲಿ 8,10,973 ಜನರು ಶೋಗೆ ಭೇಟಿ
ಈ ಫ್ಲವರ್ ಶೋದಲ್ಲಿ 95ಕ್ಕೂ ಹೆಚ್ಚು ತಳಿಗಳ ಸುಮಾರು 32 ಲಕ್ಷ ಹೂವುಗಳನ್ನು ಬಳಸಲಾಗಿದ್ದು, ಇದರಲ್ಲಿ 27 ಲಕ್ಷ ಹೂವುಗಳು ಲಾಲ್ಬಾಗ್ನಲ್ಲೇ ಬೆಳೆದವು ಎಂಬುದು ವಿಶೇಷ.
ಒಟ್ಟು 11 ದಿನಗಳಲ್ಲಿ 8,10,973 ಜನರು ಶೋಗೆ ಭೇಟಿ ನೀಡಿದ್ದು, ಟಿಕೆಟ್ ಮಾರಾಟದಿಂದ ಮಾತ್ರ 2,46,27,088 ರೂ. ಸಂಗ್ರಹವಾಗಿದೆ. ಇತರೆ ಆದಾಯ ಸೇರಿ ಒಟ್ಟು 2,74,77,088 ರೂ. ಆದಾಯ ದೊರೆತಿದೆ.
65 ಲಕ್ಷ ರೂ.ಕ್ಕೂ ಹೆಚ್ಚು ಆದಾಯ
ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಆಯೋಜಿಸಲಾದ ಈ ಶೋಗೆ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ.
ಕೊನೆಯ ದಿನವೇ ಅತಿ ಹೆಚ್ಚು 1,89,155 ಜನರು ಭೇಟಿ ನೀಡಿ 65 ಲಕ್ಷ ರೂ.ಕ್ಕೂ ಹೆಚ್ಚು ಆದಾಯ ತಂದುಕೊಟ್ಟಿದ್ದಾರೆ.

ಇದನ್ನು ನೋಡಿ : TUMAKURU | RING ROAD ನಲ್ಲಿ ಆಕ್ಸಿಡೆಂಟ್ – ಚಾಲಕ ಮಿಸ್ ಆಗಿದ್ದೇ ರೋಚಕ




