Shivamogga : 11 ಜನರಿಗೆ ಹುಚ್ಚು ನಾಯಿ ಕಡಿತ – ಆಸ್ಪತೆಗೆ ದಾಖಲು.

Shivamogga ಜಿಲ್ಲೆಯಲ್ಲಿ ಹುಚ್ಚು ನಾಯಿಗಳ ಕಾಟ ದಿನೇದಿನೇ ಹೆಚ್ಚಾಗುತ್ತಿದ್ದು, ಹೊಳೆಹೊನ್ನೂರಲ್ಲಿ ಒಂದೇ ದಿನ 11 ಮಂದಿಗೆ ಹುಚ್ಚು ನಾಯಿ ಕಡಿದಿದೆ. ಎಲ್ಲರಿಗೂ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೀದಿ ನಾಯಿಗಳನ್ನು ನಿಯಂತ್ರಿದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ದಿನೇ ದಿನೇ ಹೆಚ್ಚಾಗ್ತಿದೆ ನಾಯಿಗಳ ಹಾವಳಿ
ಪಟ್ಟಣದ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಗರದ ಬಹುತೇಕ ವಾರ್ಡ್ಗಳಲ್ಲಿ ನೂರಾರು ಬೀದಿ ನಾಯಿಗಳು ಸಂಚರಿಸುತ್ತಿರುವುದರಿಂದ ಸಾರ್ವಜನಿಕರಿಗೆ ಭಾರೀ ತೊಂದರೆಯಾಗುತ್ತಿದೆ.
ಇದನ್ನು ಓದಿ : ಜ.31ಕ್ಕೆ CCL ಸೆಮಿಫೈನಲ್ – ಸೆಮಿಫೈನಲ್ನಲ್ಲಿ ಕಿಚ್ಚ vs ಚೆನ್ನೈ
ಅಧಿಕಾರಿಗಳ ವಿರುದ್ಧ ಅಸಮಾಧಾನ
ಒಂದೇ ದಿನ 11 ಮಂದಿಗೆ ಬೀದಿ ನಾಯಿಗಳು ಕಡಿದಿರುವುದರಿಂದ ಸಾರ್ವಜನಿಕರಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಬೀದಿ ನಾಯಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾದ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಯಿಗಳಿಂದ ಮುಕ್ತಿ ಕೊಡಿಸಬೇಕು
ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಈ ಬೀದಿ ನಾಯಿಗಳನ್ನು ಸೆರೆ ಹಿಡಿಸಿ, ಅವುಗಳಿಗೆ ದೂರದಲ್ಲಿ ಶೆಡ್ ಮಾಡಿ ಇರಿಸಬೇಕು. ಸಾರ್ವಜನಿಕರ ಜೀವಕ್ಕೆ ಮಾರಕವಾಗಿರುವ ಬೀದಿ ನಾಯಿಗಳಿಂದ ಮುಕ್ತಿ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನು ನೋಡಿ : ಕೊನೆಗೂ ಧಮ್ಕಿ ರಾಜ ರಾಜೀವ್ ಅಂದರ್ ಬಂಧನದ ಬಗ್ಗೆ ಎಸ್ಪಿ ಸ್ಫೋಟಕ ಮಾಹಿತಿ




