
ಈ ಬಾರಿಯ CCL 12 ಕ್ರಿಕೆಟ್ ಟೂರ್ನಿ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡ್ತಿದೆ. ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ದೋಜರ್ಸ್ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಆಡಿದ ಮೂರು ಫೈನಲ್ ಪಂದ್ಯಗಳನ್ನ ಗೆದ್ದು ಕರ್ನಾಟಕ ಬುಲ್ದೋಜರ್ಸ್ ಸೆಮಿಫೈನಲ್ ಪ್ರವೇಶಿಸಿದ್ದು, 12 ವರ್ಷಗಳ ನಂತರ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ.
ಇದನ್ನು ಓದಿ : ಡಿಸಿಎಂ ಡಿಕೆ ಶಿವಕುಮಾರ್ ತಲೆಗೆ ಸ್ವತಃ ಟವೆಲ್ ಕಟ್ಟಿದ CM

ಕಿಚ್ಚನ ಪಡೆಗೆ ಚೆನ್ನೈ ಕಿಂಗ್ಸ್ ಎದುರಾಳಿ
ಜನವರಿ 31ರಂದು ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಕಿಚ್ಚನ ಪಡೆಗೆ ಚೆನ್ನೈ ಕಿಂಗ್ಸ್ ಎದುರಾಳಿ ಆಗಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.

ಮಧ್ಯಾಹ್ನ 2ಗಂಟೆಗೆ ಆರಂಭ
ಉಭಯ ತಂಡಗಳ ಪಂದ್ಯ ಮಧ್ಯಾಹ್ನ 2ಗಂಟೆಗೆ ಆರಂಭವಾದ್ರೆ, ಅದೇ ದಿನ ಸಂಜೆ 6ಗಂಟೆಗೆ 2ನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ಎರಡು ಪಂದ್ಯಗಳಲ್ಲಿ ಗೆದ್ದ ತಂಡಗಳು ಫೆಬ್ರವರಿ 1ರಂದು ಸೆಣೆಸಾಡಲಿವೆ.

ಇದನ್ನು ನೋಡಿ : ಪೊಲೀಸರಿಂದ RAJEEV GOWDA ಬಂಧನ – ನ್ಯಾ.ದಲ್ಲಿ ಬೆಂಕಿ ವೀರನ ವಿಚಾರಣೆ




