ಡಿಕೆ ಶಿವಕುಮಾರ್ ತಲೆಗೆ ಸ್ವತಃ ಟವೆಲ್ ಕಟ್ಟಿದ CM ಸಿದ್ದರಾಮಯ್ಯ : ಇದು ಅಧಿಕಾರ ಹಸ್ತಾಂತರದ ಮುನ್ಸೂಚನೆನಾ?

‘ಮನ್ ರೇಗಾ’ ಯೋಜನೆಯ ಹೆಸರು ಬದಲಾವಣೆ ವಿರುದ್ಧ ಕಾಂಗ್ರೆಸ್ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಸಚಿವರು ಆಗಮಿಸಿದ್ದಾರೆ. ಇನ್ನು ಪ್ರತಿಭಟನಾ ವೇದಿಕೆಗೆ ಕಾಂಗ್ರೆಸ್ ನಾಯಕರು ಆಗಮಿಸಿದ್ದಾರೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘೋಷಣೆ ಕೂಗಿದಕ್ಕೆ ಗರಂ
ಇನ್ನು ಸಿಎಂ ಸಿದ್ದರಾಮಯ್ಯ ಭಾಷಣಕ್ಕೆ ಬರುತ್ತಿದ್ದಂತೆ “ಡಿಕೆ ಡಿಕೆ” ಎಂದು ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಕಾರ್ಯಕರ್ತರು ಡಿಕೆ ಎಂದು ಘೋಷಣೆ ಕೂಗಿದಕ್ಕೆ ಗರಂ ಆದರು. ಕಾರ್ಯಕರ್ತರನ್ನು ಕುಳಿತುಕೊಳ್ಳಿ ಎಂದು ಗದರಿದರು ಸುಮ್ಮನೆ ಕುಳಿತುಕೊಳ್ಳುವಂತೆ ಇದೆ ವೇಳೆ ಚಂದ್ರಶೇಖರ್ ಅವರು ಸಹ ತಾಕಿದು ಮಾಡಿದರು.
ಇದನ್ನು ಓದಿ : ದಳಪತಿ Vijay ಕೊನೆ ಸಿನಿಮಾಗೆ ಮತ್ತೆ ಶಾಕ್!

DK ತಲೆಗೆ ಸ್ವತಃ ಟವೆಲ್ ಕಟ್ಟಿದ CM
ಡಿಕೆ ಶಿವಕುಮಾರ್ ಭಾಷಣಕ್ಕೆ ತೆರಳುವ ವೇಳೆ ಅವರ ತಲೆಗೆ ಸುತ್ತಿಕೊಂಡಿದ್ದ ಟವಲ್ ಸರಿಯಾಗಿ ಕಟ್ಟಿರಲಿಲ್ಲ. ಈ ವೇಳೆ ಸುರ್ಜಿವಾಲ ಡಿಕೆ ತಲೆಗೆ ತಾನೇ ಟವೆಲ್ ಕಟ್ಟಿದ ಪ್ರಸಂಗ ನಡೆಯಿತು. ಸಿಎಂ ತಲೆಗೆ ಸುತ್ತುವುದಕ್ಕೆ ಹೋದಾಗ ಬೇಡ ಬೇಡ ಎಂದು ಸಿಎಂ ಸಿದ್ದರಾಮಯ್ಯ ತಾವೇ ಟವೆಲ್ ಸುತ್ತಿಕೊಂಡಿದ್ದಾರೆ. ಸುರ್ಜೆವಲ ಕಟ್ಟಿದ ಟವೆಲ್ ಲೂಸ್ ಆಗಿತ್ತು, ಆದರೆ ಸಿದ್ದರಾಮಯ್ಯ ತಾವೇ ಡಿಕೆ ಶಿವಕುಮಾರ್ ಅವರಿಗೆ ತಲೆಗೆ ಟವೆಲ್ ಕಟ್ಟಿದ್ದಾರೆ.
ಹಸ್ತಾಂತರದ ಮುನ್ಸೂಚನೆನಾ?
ಈ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ಇದು ಅಧಿಕಾರದ ಹಸ್ತಾಂತರದ ಮುನ್ಸೂಚನೆನಾ? ಎಂದು ರಾಜ್ಯದ ಜನತೆ ಚರ್ಚಿಸುತ್ತಿದ್ದಾರೆ.

ಇದನ್ನು ನೋಡಿ : ವಿವಾಹಿತರ ಅಕ್ರಮ ಸಂಬಂಧ ಸಾವಿನಲ್ಲಿ ಅಂತ್ಯ




