Kadaba ದಲ್ಲಿ ತಂದೆಗೆ ಚಾಕು ಇರಿದು ಬಳಿಕ ಅಪ್ರಾಪ್ತ ಮಗ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದ ಸಂಪೂರ್ಣ ವರದಿ.

ದಕ್ಷಿಣ ಕನ್ನಡ ಜಿಲ್ಲೆಯ Kadaba ತಾಲೂಕಿನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ತಂದೆ–ಮಗನ ನಡುವಿನ ಗಲಾಟೆ ಭೀಕರ ಅಂತ್ಯಕ್ಕೆ ತಲುಪಿದ್ದು, ಅಪ್ರಾಪ್ತ ಮಗ ತಂದೆಗೆ ಚಾಕುವಿನಿಂದ ಇರಿದು, ಬಳಿಕ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ.
ಕಡಬ ತಾಲೂಕಿನ ರಾಮಕುಂಜ ಗ್ರಾಮದ ವಸಂತ್ ಅಮೀನ್ ಹಾಗೂ ಅವರ ಪುತ್ರ ಮೋಕ್ಷ (15) ಇಬ್ಬರೇ ಒಂದೇ ಮನೆಯಲ್ಲಿ ವಾಸವಾಗಿದ್ದರು. ವಸಂತ್ ಅಮೀನ್ ಅವರ ಪತ್ನಿ ಆಕೆಯ ತಾಯಿ ಮನೆಯಲ್ಲಿ ನೆಲೆಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ತಂದೆ ಮತ್ತು ಮಗನ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಕೋಪದ ಆವೇಶದಲ್ಲಿ ಮಗ ಮೋಕ್ಷ ತಂದೆಯ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮವಾಗಿ ವಸಂತ್ ಅಮೀನ್ ಅವರಿಗೆ ತೀವ್ರ ರಕ್ತಸ್ರಾವವಾಗಿದೆ.
ಇದನ್ನು ಓದಿ : ತುಮಕೂರಿನಲ್ಲಿ ದಳಪತಿ ಅಬ್ಬರ – ಮುಂದಿನ ಸಿಎಂ HDK ನೇ ಅಂದ್ರು
ಬಳಿಕ ಮಗನಿಂದ ಆತ್ಮಹತ್ಯೆ
ಘಟನೆಯ ಬಳಿಕ, ಮಗ ಮೋಕ್ಷ ತಂದೆಯ ಪರವಾನಗಿ ಹೊಂದಿರುವ ಬಂದೂಕನ್ನು ಬಳಸಿಕೊಂಡು ತನ್ನ ಮುಖಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಗಾಯಗೊಂಡ ತಂದೆ ಆಸ್ಪತ್ರೆಗೆ ದಾಖಲು
ಗಂಭೀರವಾಗಿ ಗಾಯಗೊಂಡ ವಸಂತ್ ಅಮೀನ್ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರೆದಿದೆ.
ಕಡಬ ಪೊಲೀಸರು (Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಾಥಮಿಕ ಮಾಹಿತಿ ಸಂಗ್ರಹಿಸಿ, ಘಟನೆಯ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆಸುತ್ತಿದ್ದಾರೆ.
ಇದನ್ನು ನೋಡಿ : ಕಾಂಗ್ರೆಸ್ ಸರ್ಕಾರ ಇದ್ರೆ ಎಷ್ಟು, ಸತ್ತರೆ ಎಷ್ಟು- ಕೈ ನಾಯಕರ ವಿರುದ್ಧ SURESH GOWDA ಆಕ್ರೋಶ




