ತುಮಕೂರು ಗ್ರಾಮಾಂತರದಲ್ಲಿ ದಳಪತಿ ಅಬ್ಬರ – Kumaraswamy ನೋಡಲು ಕಿಕ್ಕಿರಿದು ಸೇರಿದ ಜನರು.

ಶಾಸಕರಾದ ಗೌರಿಶಂಕರ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಬಳಿಕ, ಮೊದಲ ಬಾರಿ ಕ್ಷೇತ್ರಕ್ಕೆ ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಮೊದಲ ಬಾರಿಗೆ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ರು. ಕೇಂದ್ರ ಸಚಿವರನ್ನು ಮೈತ್ರಿ ನಾಯಕರು ಅದ್ಧೂರಿಯಾಗಿ ಸ್ವಾಗತಿಸಿದ್ರು.
ಪಟಾಕಿ ಸಿಡಿಸಿ ಅದ್ಧೂರಿ ಸ್ವಾಗತ
ಹೆಬ್ಬೂರು ಸರ್ಕಲ್ಗೆ ಆಗಮಿಸಿದ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿಯನ್ನು ಶಾಸಕರಾದ ಸುರೇಶ್ ಗೌಡ, ಎಂ.ಟಿ ಕೃಷ್ಣಪ್ಪ, ಹೆಚ್. ನಿಂಗಪ್ಪ, ಗುಬ್ಬಿಯ ಜೆಡಿಎಸ್ ನಾಯಕರಾದ ಬಿ.ಎಸ್ ನಾಗರಾಜು ಸೇರಿ ನೂರಾರು ಮಂದಿ ಕಾರ್ಯಕರ್ತರು ಹಾರ ಹಾಕಿ ಸ್ವಾಗತಿಸಿ, ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತಿಸಿದ್ರು. ಕುಮಾರಸ್ವಾಮಿಯನ್ನು ಬರ ಮಾಡಿಕೊಂಡ ಕ್ಷೇತ್ರದ ಜನರು ಮುಂದಿನ ಸಿಎಂ ಕುಮಾರಸ್ವಾಮಿ ಎಂದು ಜೈಕಾರ ಕೂಗಿದ್ರು.

ತುಮಕೂರಿನಲ್ಲಿ ದಳಪತಿ ಅಬ್ಬರ
ಹೌದು, ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರ ಬರ್ತಾ ಇದ್ದು, ಕುಮಾರಸ್ವಾಮಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಿಂಚಿನ ಸಂಚಾರ ಮಾಡ್ತಾ ಇದ್ದಾರೆ. ನಿನ್ನೆ ಮಂಡ್ಯ ಜಿಲ್ಲೆ ಬಳಿಕ ತುಮಕೂರಿಗೆ ಎಂಟ್ರಿ ಕೊಟ್ಟಿದ್ದು, ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರು ಹೋಬಳಿಯ ಸಿರಿವಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಾಗಿಮುದ್ದೇನಹಳ್ಳಿ ಗ್ರಾಮದಲ್ಲಿ ಆದಿಶಕ್ತಿ ಶ್ರೀಮಾರಮ್ಮ ದೇವಾಲಯ ಲೋಕಾರ್ಪಣೆ ಮಾಡಲು ಕ್ಷೇತ್ರಕ್ಕೆ ಕುಮಾರಣ್ಣ ಆಗಮಿಸಿದ್ರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ
ಚಿಕ್ಕ ಗ್ರಾಮವಾದ ರಾಗಿಮುದ್ದೇನಹಳ್ಳಿಯಲ್ಲಿ ಕುಮಾರಣ್ಣನನ್ನು ನೋಡಲು ಜನರು ಸಾಗರೋಪಾದಿಯಲ್ಲಿ ಸೇರಿದ್ದರು. ಆದಿಶಕ್ತಿ ಮಾರಮ್ಮ ದೇವಿಗೆ ವಿಶೇಷ ಪೂಜೆ ನೆರವೇರಿಸಿದ ಹೆಚ್ಡಿಕೆ, ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ಸರ್ಕಾರ ಗ್ಯಾರಂಟಿ ಯೋಜನೆಯಿಂದಾಗಿ 1.25 ಲಕ್ಷ ಕೋಟಿ ಸಾಲ ಮಾಡಿದೆ.
ಮಹಿಳೆಯರೇ ಅವರು ಕೊಡೊ 2 ಸಾವಿರಕ್ಕೆ ಮರಳಾಗಬೇಡಿ, ಗ್ಯಾರಂಟಿಗಳು ನಿಮ್ಮ ಬದುಕಿಗೆ ಶಾಶ್ವತ ಪರಿಹಾರ ಅಲ್ಲ ಎಂದ್ರು.. ನನ್ನ ಆರೋಗ್ಯ ಇನ್ನು ಸರಿಯಾಗಿಲ್ಲ, 5 ಬಾರಿ ಸಾವಿನ ಹತ್ತಿರಕ್ಕೆ ಹೋಗಿ ಬಂದಿದ್ದೇನೆ. ದೇವರ ಆಶೀರ್ವಾದದಿಂದ ನಾನು ಇನ್ನು ಬದುಕಿದ್ದೇನೆ ಎಂದ್ರು. ನನಗೆ ಒಂದು ಅವಕಾಶ ಕೊಡಿ, 5 ವರ್ಷಗಳ ಉತ್ತಮ ಸರ್ಕಾರ ಕೊಡುತ್ತೇವೆ. ಇದು ಜೆಡಿಎಸ್ ಬಿಜೆಪಿ ಸರ್ಕಾರ ಅಲ್ಲ, 6 ವರೆ ಕೋಟಿ ಕನ್ನಡಿಗರ ಸರ್ಕಾರ ತರುತ್ತೇವೆ ಅದಕ್ಕಾಗಿ ಒಮ್ಮೆ ಅವಕಾಶ ಕೊಡಿ, ನಿಮ್ಮ ನಂಬಿಕೆಗೆ ನಾನು ಎಂದಿಗೂ ದ್ರೋಹ ಬಗೆಯಲ್ಲ ಎಂದು ಜನರಿಗೆ ವಾಗ್ದಾನ ಮಾಡಿದ್ರು.
ಇದನ್ನು ಓದಿ : ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ Police ಅರೆಸ್ಟ್

HDK ಯನ್ನು ಹಾಡಿ ಹೊಗಳಿದ ಸುರೇಶ್ ಗೌಡ್ರು
ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸುರೇಶ್ ಗೌಡ ಅವರು, ನಾನು ಶಾಸಕರಾಗಿ ಕುಮಾರಸ್ವಾಮಿಯನ್ನು ತುಂಬ ಹತ್ತಿರದಲ್ಲಿ ನೋಡಿದ್ದೇನೆ. ರಾಜಕಾರಣದ ಇತಿಹಾಸದಲ್ಲಿ ವಿರೋಧ ಪಕ್ಷಗಳಿಗೆ ತೊಡೆ ತಟ್ಟಿ, ಎದೆಯಲ್ಲಿ ನಡುಕ ಹುಟ್ಟಿಸ್ತಾರೆ ಅಂದ್ರೆ ಅದು ಕುಮಾರಣ್ಣ ಮಾತ್ರ ಅಂತಾ ಹೆಚ್ಡಿಕೆಯನ್ನು ಹಾಡಿ ಹೊಗಳಿದ್ರು.
ನಾವು ಕುಮಾರಣ್ಣ ಜೊತೆ ಇರ್ತೀವಿ
ಇನ್ನು ಕುಮಾರಸ್ವಾಮಿಯವರ ನಾಯಕತ್ವವನ್ನು ಒಪ್ಪಿಕೊಂಡಿರೋ ಶಾಸಕ ಸುರೇಶ್ ಗೌಡ, ಸಾಯೋವರೆಗೂ ಕೂಡ ನಾವು ಕುಮಾರಣ್ಣ ಜೊತೆ ಇರ್ತೀವಿ. Kumaraswamy ಎಲ್ಲಿ ಆದ್ರು ಇರಲಿ, ಅವರು ಮಾಡೋ ಕೆಲಸಕ್ಕೆ ಸ್ಪೂರ್ತಿ ಆಗಿ ಇರ್ತೀನಿ ಅಂತಾ ಹೇಳುತ್ತಿದ್ದಂತೆ ಜನರು ಶಿಳ್ಳೆ, ಚಪ್ಪಾಳೆ ಹಾಕಿದ್ರು. ಕುಮಾರಣ್ಣಗೆ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜಕಾರಣದಲ್ಲಿ ಒಳ್ಳೆ ಸ್ಥಾನ ಮಾನ ಸಿಗಲಿ ಎಂದು ಹಾರೈಸಿದ್ರು.

ಮುಖ್ಯಮಂತ್ರಿ ಕುಮಾರಣ್ಣ
ಜೆಡಿಎಸ್,ಬಿಜೆಪಿ ಸೇರಿದ್ರೆ ಹಳೆ ಮೈಸೂರು ಭಾಗದಲ್ಲಿ ಒಂದೇ ಒಂದು ಸೀಟು ಕಾಂಗ್ರೆಸ್ಗೆ ಬರಲ್ಲ. ಕುಮಾರಸ್ವಾಮಿ ಅವರನ್ನು ನಾವು ಬಹಳ ಜವಾಬ್ದಾರಿಯಿಂದ ನಡೆಸಿಕೊಳ್ಳುತ್ತೇವೆ. 2028ಕ್ಕೆ ಮೈತ್ರಿ ಸರ್ಕಾರ ಬಂದೇ ಬರುತ್ತೆ, ಆ ವೇಳೆ ಕುಮಾರಸ್ವಾಮಿ ಅವರೇ ನಾಯಕ ರಾಗುತ್ತಾರೆ ಅಂತಾ ಸುರೇಶ್ ಗೌಡ ಅವರು ಹೇಳುತ್ತಿದ್ದಂತೆ ಅಲ್ಲಿದ್ದ ಜನರು ಮುಂದಿನ ಮುಖ್ಯಮಂತ್ರಿ ಕುಮಾರಣ್ಣ ಅಂತಾ ಕೂಗಿದ್ರು.
ಎದುರಾಳಿಗಳಿಗೆ ಟಕ್ಕರ್
ಒಟ್ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರ ಬರ್ತಿರೋ ಹೊತ್ತಲ್ಲಿ ಕುಮಾರಸ್ವಾಮಿ ಪ್ರವಾಸ ಕೈಗೊಂಡಿದ್ದು, ಗೌರಿಶಂಕರ್ ಜೆಡಿಎಸ್ ತೊರೆದ ಬಳಿಕ ಮೊದಲ ಬಾರಿಗೆ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ ಮಾಡುವ ಮೂಲಕ ಎದುರಾಳಿಗಳಿಗೆ ಟಕ್ಕರ್ ಕೊಟ್ಟಿದ್ದಾರೆ.

ಇದನ್ನು ನೋಡಿ : ತುಮಕೂರು DCರನ್ನ ಹೊಗಳಿದ SURESH GOWDA




