Kalburgi : ಅತ್ತೆ ಮಗನ ಪ್ರೀತಿಸಿ ಮದ್ವೆ ಆಗಿದ್ದಳು, ಎರಡೇ ತಿಂಗಳಿಗೆ ಪ್ರಾಣಬಿಟ್ಟಳು.. ಕಾರಣ ಕೇಳಿದ್ರೆ ಶಾಕ್ ಆಗ್ತೀರಿ..!

ಇವತ್ತಿನ ಕಾಲದ ಬಹುತೇಕ ಹೆಣ್ಮಕ್ಕಳು ಹಳ್ಳಿಯಲ್ಲಿ ವಾಸ ಮಾಡಲು ಇಷ್ಟಪಡುತ್ತಿಲ್ಲ. ಇದೇ ಕಾರಣದಿಂದಲೇ ಅದೆಷ್ಟು ಗಂಡು ಮಕ್ಕಳಿಗೆ ಮದುವೆ ಭಾಗ್ಯ ಕೂಡ ಇಲ್ಲ. Kalburgi ಯಲ್ಲಿ ನಡೆದ ಈ ಪ್ರಕರಣ ದುರಂತವೇ ಸರಿ.
ಎರಡೇ ತಿಂಗಳಿಗೆ ಸಾವಿನ ಮನೆ ಸೇರಿದ ನವವಿವಾಹಿತೆ!
ಪ್ರೀತಿಸಿ ಮದುವೆಯಾದ ನವ ವಿವಾಹಿತೆ ಎರಡೇ ತಿಂಗಳಲ್ಲಿ ನೇಣಿಗೆ ಶರಣಾದ ಘಟನೆ ನಗರದ ಸಿದ್ದೇಶ್ವರ ಕಾಲೋನಿಯಲ್ಲಿ ನಡೆದಿದೆ. ಅನುಸುಯಾ ಅವಿನಾಶ್ ಆಕಡೆ (26) ಮೃತ ದುರ್ದೈವಿ.

ಇದನ್ನು ಓದಿ : ಲಾರಿ-ಬೈಕ್ ನಡುವೆ ಮುಖಾಮುಖಿ ಡಿಕ್ಕಿ – ಸವಾರ ಸ್ಥಳದಲ್ಲಿ ಮೃತ್ಯು
ಹಳ್ಳಿಯಲ್ಲಿದ್ದು ಮನನೊಂದು ಆತ್ಮಹತ್ಯೆ ಶಂಕೆ – Kalburgi
ಅನುಸುಯಾ ತನ್ನ ಅತ್ತೆ ಮಗ ಅವಿನಾಶ್ ಜೊತೆ ಎರಡು ತಿಂಗಳ ಹಿಂದೆ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಆಗಿದ್ದಳು. ಮದುವೆಯಾದ ನಂತರ ಅನುಸೂಯಾ ತನ್ನ ಗಂಡನೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿದ್ದಳು. ಆದರೆ ಇದರಿಂದಾಗಿ ಆಕೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎಂದು ಕುಟುಂಬದವರು ಹೇಳುತ್ತಾರೆ.
ಅನುಸೂಯಾಗೆ ಮೂವರು ಸಹೋದರಿಯರು ಇದ್ದು, ಅವರು ತಮ್ಮ ಗಂಡಂದಿರೊಂದಿಗೆ ಬೆಂಗಳೂರು ಹಾಗೂ ಮುಂಬೈ ಸೇರಿದಂತೆ ದೊಡ್ಡ ನಗರಗಳಲ್ಲಿ ನೆಲೆಸಿದ್ದರು. ಸಹೋದರಿಯರು ಮಹಾನಗರಗಳಲ್ಲಿ ಸುಖವಾಗಿ ಬದುಕುತ್ತಿರುವುದನ್ನು ನೆನೆಸಿ, ತಾನು ಮಾತ್ರ ಚಿಕ್ಕ ಪಟ್ಟಣದ ಹಳ್ಳಿಯಲ್ಲಿ ವಾಸವಾಗಿರುವುದರ ಬಗ್ಗೆ ಅನುಸೂಯಾ ಪದೇಪದೇ ಬೇಸರ ವ್ಯಕ್ತಪಡಿಸುತ್ತಿದ್ದಳು ಎನ್ನಲಾಗಿದೆ.

ಪ್ರಕರಣ ದಾಖಲು
ಇನ್ನು ಇದೇ ನೋವಿನಿಂದ ಮನನೊಂಡು ಅನುಸೂಯ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ ಎನ್ನಲಾಗಿದೆ. ಘಟನೆ ಸಂಬಂಧ ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ನೋಡಿ : ಪ್ರಜ್ವಲ್ ರೇವಣ್ಣ ವಿರುದ್ಧ ಅಪರಾಧ ಸಾಬೀತು; ತನಿಖಾ ತಂಡಕ್ಕೆ 25 ಲಕ್ಷ ರೂ. ಬಹುಮಾನ ಘೋಷಣೆ




