Kitchen Recipe : ಪುದೀನದ ಸುವಾಸನೆ ಮತ್ತು ಮಸಾಲೆಗಳ ರುಚಿ ಸೇರಿದ ಪುದೀನ ಚಿಕನ್ ಗ್ರೇವಿ ಊಟಕ್ಕೆ ಅತ್ಯುತ್ತಮ ಆಯ್ಕೆ …

Kitchen Recipe : ಕಡಿಮೆ ಸಮಯದಲ್ಲಿ, ಸುಲಭ ಪದಾರ್ಥಗಳಿಂದ ಮಾಡಬಹುದಾದ ಈ ರೆಸಿಪಿ ಕುಟುಂಬದ ಎಲ್ಲರಿಗೂ ಇಷ್ಟವಾಗುತ್ತದೆ.
ಬೇಕಾಗುವ ಪದಾರ್ಥಗಳು (Ingredients)
- ಚಿಕನ್ – ½ ಕೆಜಿ
- ಪುದೀನ ಸೊಪ್ಪು – 1 ಬಟ್ಟಲು
- ಈರುಳ್ಳಿ – 1 (ಸಣ್ಣದಾಗಿ ಕತ್ತರಿಸಿದ)
- ಅರಿಶಿನ ಪುಡಿ – ಸ್ವಲ್ಪ
- ಗರಂ ಮಸಾಲಾ ಪುಡಿ – ½ ಚಮಚ
- ಕಾಳು ಮೆಣಸಿನ ಪುಡಿ – ¼ ಚಮಚ
- ಕರಿಬೇವು – ಸ್ವಲ್ಪ
- ಚಕ್ರಮೊಗ್ಗು – 1
- ದಾಲ್ಚಿನ್ನಿ / ಚಕ್ಕೆ – ಸ್ವಲ್ಪ
- ಲವಂಗ – 5
- ಏಲಕ್ಕಿ – 2
- ಶುಂಠಿ – ಸ್ವಲ್ಪ
- ಬೆಳ್ಳುಳ್ಳಿ – ಸ್ವಲ್ಪ
- ಹಸಿ ಮೆಣಸಿನಕಾಯಿ – 5
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಅಡುಗೆ ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
- ಉಪ್ಪು – ರುಚಿಗೆ ತಕ್ಕಷ್ಟು
ಪುದೀನ ಮಸಾಲಾ ತಯಾರಿಸುವ ವಿಧಾನ
ಮೊದಲು, ಮಿಕ್ಸಿ ಜಾರ್ಗೆ ಪುದೀನ ಸೊಪ್ಪು, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ.
ನಂತರ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ. ಈ ಮಸಾಲಾ ಚಿಕನ್ಗೆ ವಿಶಿಷ್ಟ ರುಚಿ ನೀಡುತ್ತದೆ.
ಇದನ್ನು ಓದಿ : ರೈಲ್ವೆಯಲ್ಲಿ 22,000 ಖಾಲಿ ಹುದ್ದೆಗಳಿಗೆ ನೇಮಕಾತಿ; 10th ಪಾಸಾಗಿದ್ರೆ ಸಾಕು!
ಪುದೀನ ಚಿಕನ್ ಮಾಡುವ ವಿಧಾನ
ಮೊದಲು, ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ.
ನಂತರ ಚಕ್ಕೆ, ಲವಂಗ, ಏಲಕ್ಕಿ, ಚಕ್ರಮೊಗ್ಗು ಮತ್ತು ಕರಿಬೇವು ಹಾಕಿ ಸ್ವಲ್ಪ ಫ್ರೈ ಮಾಡಿ.
ಅದಾದ ಬಳಿಕ, ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೂ ಹುರಿಯಿರಿ.
ಈಗ ಚೆನ್ನಾಗಿ ತೊಳದ ಚಿಕನ್ ಪೀಸ್ಗಳು ಮತ್ತು ಸ್ವಲ್ಪ ಅರಿಶಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಮುಂದೆ, ಚಿಕನ್ ಅನ್ನು 5–6 ನಿಮಿಷ ಫ್ರೈ ಮಾಡಿದ ಬಳಿಕ, ರುಬ್ಬಿಟ್ಟ ಪುದೀನ ಮಸಾಲಾ ಸೇರಿಸಿ.
ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ, ನಂತರ ಉಪ್ಪು, ಕಾಳು ಮೆಣಸಿನ ಪುಡಿ ಮತ್ತು ಗರಂ ಮಸಾಲಾ ಪುಡಿ ಸೇರಿಸಿ.
ಇದನ್ನು ಮುಚ್ಚಳ ಮುಚ್ಚಿ 10 ನಿಮಿಷ ಮಧ್ಯಮ ಉರಿಯಲ್ಲಿ ಬೇಯಲು ಬಿಡಿ. ಮಧ್ಯೆ ಮಧ್ಯೆ ಕೈಯಾಡಿಸಿ ತಳ ಹಿಡಿಯದಂತೆ ನೋಡಿಕೊಳ್ಳಿ.
ಕೊನೆಯಲ್ಲಿ…
ಅಂತಿಮವಾಗಿ, ಮೇಲಿನಿಂದ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.
ಇದೀಗ ರುಚಿಕರವಾದ ಪುದೀನ ಚಿಕನ್ ಗ್ರೇವಿ ಸವಿಯಲು ಸಿದ್ಧ 👍
ಪುದೀನ ಚಿಕನ್ ಸರ್ವಿಂಗ್ ಟಿಪ್ಸ್
- ಬಿಸಿ ಬಿಸಿ ಅಕ್ಕಿ, ರೋಟಿ, ನಾನ್ ಅಥವಾ ಜೀರಿಗೆ ರೈಸ್ ಜೊತೆ ಸವಿಯಬಹುದು
- ವಿಶೇಷ ಊಟ ಅಥವಾ ಭಾನುವಾರದ ಲಂಚ್ಗೆ ಸೂಕ್ತ
ಇದನ್ನು ನೋಡಿ : ನಾಳೆ ನಡೆದಾಡುವ ದೇವರ ಪುಣ್ಯಸ್ಮರಣೆ – ಸಿದ್ಧಗಂಗಾ ಮಠದಲ್ಲಿ ಹೇಗಿದೆ ಗೊತ್ತಾ ಸಿದ್ಧತೆ..!?




