Salaar 2 : ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿಮಾನಿಗಳಿಗೆ ಖುಷಿಯ ಸುದ್ದಿ ಸಿಕ್ಕಿದೆ.

Salaar 2 : ಬಹು ನಿರೀಕ್ಷಿತ ‘ಸಲಾರ್ ಪಾರ್ಟ್ 2’ ಚಿತ್ರದ ಬಗ್ಗೆ ಹೊಸ ಅಪ್ಡೇಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಜನವರಿ 25ಕ್ಕೆ ಗ್ಲಿಂಪ್ಸ್ ಮತ್ತು ಬಿಡುಗಡೆ ಘೋಷಣೆ?
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ‘ಸಲಾರ್ ಪಾರ್ಟ್ 2’ ಚಿತ್ರದ ಗ್ಲಿಂಪ್ಸ್ ಹಾಗೂ ಬಿಡುಗಡೆ ದಿನಾಂಕ ಘೋಷಣೆ ಜನವರಿ 25ರಂದು ಹೊರಬರುವ ಸಾಧ್ಯತೆಯಿದೆ.
ಗಣರಾಜ್ಯೋತ್ಸವದ ಮುನ್ನಾ ದಿನವೇ ಚಿತ್ರತಂಡ ಭರ್ಜರಿ ಅಪ್ಡೇಟ್ ನೀಡಲಿದೆ ಎನ್ನಲಾಗಿದೆ.
ಕನ್ನಡಿಗ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್ ಪಾರ್ಟ್ 1: ಸೀಸ್ಫೈರ್’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಕೋಟಿ ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ದೇವ ಮತ್ತು ವರದರಾಜ ಮನ್ನಾರ್ ನಡುವಿನ ಸ್ನೇಹ ಕಥೆ ಪ್ರೇಕ್ಷಕರನ್ನು ಸೆಳೆದಿತ್ತು. ಈ ಯಶಸ್ಸಿನಿಂದಲೇ ಸೀಕ್ವೆಲ್ ಬಗ್ಗೆ ಭಾರೀ ನಿರೀಕ್ಷೆ ಮೂಡಿದೆ.

‘ಸಲಾರ್ 2’ ಕಥೆಯಲ್ಲಿ ಏನಿದೆ?
ಎರಡನೇ ಭಾಗದಲ್ಲಿ ದೇವ ಹೇಗೆ ವರದನಿಗೆ ಶತ್ರುವಾಗುತ್ತಾನೆ? ‘ಶೌರ್ಯಾಂಗ’ ಕುಲದ ಇತಿಹಾಸವೇನು?
ಎಂಬುದರ ಅನಾವರಣವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದಲೇ ‘ಸಲಾರ್ 2’ ಮೇಲೆ ಸಿನಿಪ್ರೇಕ್ಷಕರ ಕಾತುರ ಹೆಚ್ಚಾಗಿದೆ.
ಸದ್ಯಕ್ಕೆ ಹೊಂಬಾಳೆ ಫಿಲ್ಮ್ಸ್ ಅಥವಾ ನಿರ್ದೇಶಕ ಪ್ರಶಾಂತ್ ನೀಲ್ ಅವರಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ಆದರೆ, ಈ ಹಿಂದೆ ಹೊಂಬಾಳೆ ಫಿಲ್ಮ್ಸ್ನ ನಿರ್ಮಾಪಕ ವಿಜಯ್ ಕಿರಗಂದೂರು, “ಸಲಾರ್ 2 ಚಿತ್ರದ ಸ್ಕ್ರಿಪ್ಟ್ ಸಿದ್ಧವಾಗಿದೆ. ಯಾವಾಗ ಬೇಕಾದರೂ ಚಿತ್ರ ಪ್ರಾರಂಭಿಸುತ್ತೇವೆ”
ಎಂದು ಸ್ಪಷ್ಟಪಡಿಸಿದ್ದರು.
‘ಸಲಾರ್ 2’ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಮಾಡಲಿದ್ದು, ಶೀಘ್ರದಲ್ಲೇ ಶೂಟಿಂಗ್ ಆರಂಭವಾಗಲಿದೆ ಎಂಬ ನಿರೀಕ್ಷೆ ಇದೆ. ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

‘ದಿ ರಾಜಾ ಸಾಬ್’ ಕಲೆಕ್ಷನ್ ಕುಂಟು
ಇತ್ತ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಜನವರಿ 9ರಂದು ಬಿಡುಗಡೆಯಾಗಿದೆ. ಮಾರುತಿ ನಿರ್ದೇಶನದ ಈ ಚಿತ್ರದಲ್ಲಿ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್, ಸಂಜಯ್ ದತ್, ಬೋಮನ್ ಇರಾನಿ ಸೇರಿದಂತೆ ಹಲವರು ನಟಿಸಿದ್ದಾರೆ. ಮೊದಲ ದಿನ 112 ಕೋಟಿ ರೂ. ಗಳಿಸಿದ್ದರೂ, ನಂತರದ ದಿನಗಳಲ್ಲಿ ಚಿತ್ರದ ಕಲೆಕ್ಷನ್ ನಿರೀಕ್ಷಿತ ಮಟ್ಟ ತಲುಪಿಲ್ಲ.




