Haveri : ಲಾರಿ (Lorry) ಮತ್ತು ಬೈಕ್ (Bike) ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಹಾವೇರಿ (Haveri) ಜಿಲ್ಲೆ ಹಾನಗಲ್ (Hanagal) ತಾಲೂಕಿನ ನಾಲ್ಕರ್ ಕ್ರಾಸ್ ಬಳಿ ನಡೆದಿದೆ.

Haveri : ಹಾನಗಲ್ನಿಂದ ಹೊಂಕಣ ಕಡೆ ಪ್ರಯಾಣದ ವೇಳೆ ದುರ್ಘಟನೆ
ಮೃತ ಬೈಕ್ ಸವಾರ ಹಾನಗಲ್ ಕಡೆಯಿಂದ ಹೊಂಕಣ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿಯ ತೀವ್ರತೆಯಿಂದಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರನನ್ನು ಹೊಂಕಣ ಗ್ರಾಮದ ನಟರಾಜ್ ದಳವಾಯಿ (43) ಎಂದು ಗುರುತಿಸಲಾಗಿದೆ. ಕುಟುಂಬದಲ್ಲಿ ದುಃಖದ ಛಾಯೆ ಆವರಿಸಿದೆ.
ಇದನ್ನು ಓದಿ : ರೈಲ್ವೆಯಲ್ಲಿ 22,000 ಖಾಲಿ ಹುದ್ದೆಗಳಿಗೆ ನೇಮಕಾತಿ; 10th ಪಾಸಾಗಿದ್ರೆ ಸಾಕು!
ಲಾರಿ ವಶಕ್ಕೆ – ಪೊಲೀಸ್ ತನಿಖೆ
ಘಟನೆಯ ಬಳಿಕ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಅಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಇದನ್ನು ನೋಡಿ : ನಾಳೆ ನಡೆದಾಡುವ ದೇವರ ಪುಣ್ಯಸ್ಮರಣೆ – ಸಿದ್ಧಗಂಗಾ ಮಠದಲ್ಲಿ ಹೇಗಿದೆ ಗೊತ್ತಾ ಸಿದ್ಧತೆ..!?




