Kiccha Sudeep ಹಾಗೂ ಚಂದ್ರಚೂಡ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ.

ನಟ ಕಿಚ್ಚ ಸುದೀಪ್ ಹಾಗೂ ಚಂದ್ರಚೂಡ ವಿರುದ್ಧ ಕಾಫಿ ತೋಟದ ಮಾಲೀಕರೊಬ್ಬರು ವಂಚನೆ ಆರೋಪ ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಇಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ದಾಖಲು
ಕಾಫಿ ತೋಟದ ಮಾಲೀಕ ದೀಪಕ್ ಮಯೂರ್ ಅವರು ಜನವರಿ 16ರಂದು ಬೆಂಗಳೂರು ಕಮಿಷನರ್ ಕಚೇರಿಗೆ ತೆರಳಿ, ನಟ ಕಿಚ್ಚ ಸುದೀಪ್ ಹಾಗೂ ಚಂದ್ರಚೂಡ ವಿರುದ್ಧ ಅಧಿಕೃತವಾಗಿ ದೂರು ನೀಡಿದ್ದಾರೆ. ಧಾರಾವಾಹಿಯ ಚಿತ್ರೀಕರಣಕ್ಕಾಗಿ ತಮ್ಮ ಕಾಫಿ ತೋಟವನ್ನು ಬಳಸಿಕೊಂಡಿದ್ದು, ಇದರಿಂದ ತೋಟ ಹಾಗೂ ಮರಗಳಿಗೆ ಹಾನಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ವಂಚನೆ ನಡೆದಿದೆ ಎಂದು ಕಾಫಿ ತೋಟದ ಮಾಲೀಕ ದೀಪಕ್ ಆರೋಪಿಸಿದ್ದಾರೆ.
ಇದನ್ನು ಓದಿ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ Eshwar Khandre ಆಯ್ಕೆ

ನಟ Kiccha Sudeep ಭರವಸೆ
ವಾರಸ್ಥಾರ ಧಾರಾವಾಹಿ ಚಿತ್ರೀಕರಣಕ್ಕಾಗಿ ಎರಡು ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಚಿತ್ರೀಕರಣದ ವೇಳೆ ತೋಟಕ್ಕೆ ನಷ್ಟವಾಗಿದ್ದು, ಇದಕ್ಕಾಗಿ 95 ಲಕ್ಷ ರೂ. ಪರಿಹಾರ ಕೋರಿ ದೀಪಕ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಪ್ರಕರಣ ವಾಪಸ್ ಪಡೆಯುವಂತೆ ಹೇಳಿ, 60 ಲಕ್ಷ ರೂ. ನೀಡುವುದಾಗಿ ನಟ Kuccha Sudeep ಭರವಸೆ ನೀಡಿದ್ದರು ಎನ್ನಲಾಗಿದೆ.
ಪೊಲೀಸ್ ಆಯುಕ್ತರಿಗೆ ದೂರು
ಆದರೆ ಭರವಸೆ ನೀಡಿದ ಮೊತ್ತವನ್ನು ಇನ್ನೂ ನೀಡದೇ ವಂಚನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ದೀಪಕ್ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.

ಇದನ್ನು ನೋಡಿ : ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಹೊಡೆದಾಡಿಕೊಂಡ ಕೈದಿಗಳು: ಕಲ್ಲಿನಿಂದ ಜಜ್ಜಿ ಗಾಯ




