RRB Recruitment 2026 : ರೈಲ್ವೆಯಲ್ಲಿ 22,000 ಖಾಲಿ ಹುದ್ದೆಗಳಿಗೆ ನೇಮಕಾತಿ.

RRB Recruitment 2026 : ರೈಲ್ವೆ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ ಲಭಿಸಿದೆ. ರೈಲ್ವೆ ನೇಮಕಾತಿ ಮಂಡಳಿ (RRB) ಗ್ರೂಪ್ D ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಒಟ್ಟು 22,000 ಖಾಲಿ ಹುದ್ದೆಗಳು ಭರ್ತಿಯಾಗಲಿವೆ.
SSLC ಪಾಸಾಗಿದ್ರೆ ಸಾಕು!
ಈ ನೇಮಕಾತಿಗೆ 10ನೇ ತರಗತಿ ಉತ್ತೀರ್ಣ ಹಾಗೂ ITI ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಜನವರಿ 31 ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 2 ಆಗಿದೆ. ಮೊದಲಿಗೆ ಅರ್ಜಿ ಪ್ರಕ್ರಿಯೆಯನ್ನು ಜನವರಿ 20 ರಿಂದ ಫೆಬ್ರವರಿ 20ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ನೇಮಕಾತಿ ಮಂಡಳಿಯು ಪರಿಷ್ಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ದಿನಾಂಕಗಳಲ್ಲಿ ಬದಲಾವಣೆ ಮಾಡಲಾಗಿದೆ.
ಅರ್ಹತೆ ಮತ್ತು ವಯೋಮಿತಿ
RRB ಗ್ರೂಪ್ D ನೇಮಕಾತಿಯು ಹಲವು ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳನ್ನು ಒಳಗೊಂಡಿದೆ.
- ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣ ಹಾಗೂ ITI ಡಿಪ್ಲೊಮಾ
- ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 33 ವರ್ಷ
- ವಯಸ್ಸಿನ ಲೆಕ್ಕ: ಜನವರಿ 1, 2026 ಆಧಾರಿತ
- ಮೀಸಲು ವರ್ಗಗಳಿಗೆ: ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ
ಇದನ್ನು ಓದಿ : Pavithra Gowdaಗೆ ಬಿಗ್ ಶಾಕ್ ಕೊಟ್ಟ ಕರ್ನಾಟಕ ಹೈಕೋರ್ಟ್..!
ಸಂಬಳ ಎಷ್ಟು?
ಆಯ್ಕೆಯಾದ ಅಭ್ಯರ್ಥಿಗಳಿಗೆ ಗ್ರೂಪ್ D ಹುದ್ದೆಗಳಿಗೆ ಮಾಸಿಕ ರೂ.18,000 ವೇತನ ಲಭ್ಯವಾಗಲಿದೆ. ಜೊತೆಗೆ, ರೈಲ್ವೆ ನಿಯಮಾವಳಿಗಳ ಪ್ರಕಾರ ಇತರ ಭತ್ಯೆಗಳನ್ನೂ ನೀಡಲಾಗುತ್ತದೆ. ಇದರಿಂದ ಒಟ್ಟಾರೆ ವೇತನ ಮತ್ತು ಸೌಲಭ್ಯಗಳು ಆಕರ್ಷಕವಾಗಿವೆ. ಇದೇ ಕಾರಣಕ್ಕೆ ಪ್ರತಿ ವರ್ಷ ಲಕ್ಷಾಂತರ ಯುವಕರು ರೈಲ್ವೆ ಗ್ರೂಪ್ D ನೇಮಕಾತಿಗಾಗಿ ನಿರೀಕ್ಷಿಸುತ್ತಾರೆ.
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್ಲೈನ್ ಮೂಲಕ ನಡೆಯಲಿದೆ. ಅಭ್ಯರ್ಥಿಗಳು
rrbchennai.gov.in ಅಥವಾ indianrailways.gov.in ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಸಂಕ್ಷಿಪ್ತ ಅಧಿಸೂಚನೆಯನ್ನು ಡಿಸೆಂಬರ್ 23, 2025 ರಂದು ಬಿಡುಗಡೆ ಮಾಡಲಾಗಿದ್ದು,
- ಆನ್ಲೈನ್ ಅರ್ಜಿ ಆರಂಭ: ಜನವರಿ 31
- ಕೊನೆಯ ದಿನಾಂಕ: ಮಾರ್ಚ್ 2
ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಇದನ್ನು ನೋಡಿ : ರಾಷ್ಟ್ರೀಯ ಹೆದ್ದಾರಿ – 44 ರಲ್ಲಿ ಆಕ್ಸಿಡೆಂ 11 ಪ್ರಯಾಣಿಕರಿಗೆ ಗಾಯ, ಓರ್ವ ಸಾ*




