ಓಡಿಶಾದಿಂದ Haveri ಗೆ ತಂದು ಗಾಂಜಾ ಮಾರಟ.

ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು Haveri ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸವಣೂರ ಅಂಬೇಡ್ಕರ್ ನಗರ ನಿವಾಸಿ 23 ವರ್ಷದ ಲೋಹಿತ ಕೃಷ್ಣಪ್ಪ ಮುನಿಯಪ್ಪನವರ್, ,23 ವರ್ಷದ ಮಹೇಶ ಅಶೋಕ ಮೈಲಮ್ಮನವರ್, ಹಾಗೂ ಸವಣೂರ ಹಾವಣಗಿ ಪ್ಲಾಟ್ ನ 21 ವರ್ಷದ ಮನೋಜ ಕರಿಯಪ್ಪ ಚಾರಿ ಬಂಧಿತ ಆರೋಪಿಗಳು.
3,17,400 ಲಕ್ಷ. ರೂ. ಮೌಲ್ಯದ 7.93 ಕೆಜಿ ಗಾಂಜಾ ವಶಕ್ಕೆ
ಬಂಧಿತ ಆರೋಪಿಗಳಿಂದ ಸುಮಾರು 3,17,400 ಲಕ್ಷ. ರೂ. ಮೌಲ್ಯದ 7.93 ಕೆಜಿ ಗಾಂಜಾ, ಸೇರಿದಂತೆ 3,370 ರೂ. ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿತರು ಓಡಿಶಾದಿಂದ ಹಾವೇರಿಗೆ ಗಾಂಜಾ ತಂದು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ : ಶ್ರೀರಾಮುಲು ವಿರುದ್ಧ ಫೋಕ್ಸೋ ಕಾಯ್ದೆ ಅಡಿ ‘FIR’ ದಾಖಲು

ಖಚಿತ ಮೇರೆಗೆ ದಾಳಿ
ಗಾಂಜಾ ತಂದು ಪಾಕೆಟ್ಗಳಲ್ಲಿ ತುಂಬಿ ಗ್ರಾಹಕರನ್ನು ಹುಡುಕಿ, ನಗರದ ಗುತ್ತಲ ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆ ಬಳಿ ರಸ್ತೆ ಬದಿ, ಗಾಂಜಾ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ನಗರ ಠಾಣೆ ಪೊಲೀಸರು ದಾಳಿ ನಡೆಸಿ ಸವಣೂರು ಮೂಲದ ಮೂವರನ್ನು ಬಂಧಿಸಿ. ತನಿಖೆ ನಡೆಸುತ್ತಿದ್ದಾರೆ.
ಆರೋಪಿಗಳ ಬಂಧನ
ಇನ್ನು ಎಸ್ಪಿ ಯಶೋಧಾ ವಂಟಗೋಡಿ ಮಾರ್ಗದರ್ಶನದಲ್ಲಿ ಎಎಸ್ಪಿ ಎಲ್.ವೈ.ಶಿರಕೋಳ ಹಾಗೂ ಡಿವೈಎಸ್ಪಿ ಎಂ.ಎಸ್.ಪಾಟೀಲ ನೇತೃತ್ವದಲ್ಲಿ ಹಾವೇರಿ ಶಹರ ಠಾಣೆ ಇನ್ಸ್ಪೆಕ್ಟರ್ ಮೋತಿಲಾಲ ಪವಾರ ಹಾಗೂ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನು ನೋಡಿ : ಮಹಿಳೆಯ ಕೈ ಕಚ್ಚಿ, ಹಲ್ಲೆ ಮಾಡಿದ ಕಿರಾತಕ -ರಸ್ತೆಯನ್ನೇ ಒತ್ತುವರಿ ಮಾಡಿಕೊಂಡ ಕರವೇ ಜಿಲ್ಲಾಧ್ಯಕ್ಷ




