Tiptur ನಲ್ಲಿ ಹೆಚ್ಚಾಗ್ತಿದೆ ಬೈಕ್ ವ್ಹೀಲಿಂಗ್ ಪುಂಡರ ಕಾಟ.

ಇತ್ತೀಚಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಬೈಕ್ ವ್ಹೀಲಿಂಗ್ ಪುಂಡರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಸಾರ್ವಜನಿಕರು ಸಂಚರಿಸುವ ಸಮಯದಲ್ಲಿಯೇ ಪುಂಡರು ಬೈಕ್ ವ್ಹೀಲಿಂಗ್ ಮಾಡುತ್ತಿದ್ದು, ವಾಹನ ಸವಾರರು ಪುಂಡರ ಹಾವಳಿಗೆ ಬೆಚ್ಚಿ ಬೀಳುತ್ತಿದ್ದಾರೆ.
ತಿಪಟೂರಲ್ಲಿ ಹೆಚ್ಚಾಗ್ತಿದೆ ಬೈಕ್ ವ್ಹೀಲಿಂಗ್ ಪುಂಡರ ಕಾಟ
ಇತ್ತ ಬೆಳಗಿನ ಸಮಯದಲ್ಲಿ ಪೊಲೀಸರ ಕಾಟ ಅಂತ ತಿಳಿದ ಪುಂಡರು ರಾತ್ರಿ ವೇಳೆಯಲ್ಲಿ ವ್ಹೀಲಿಂಗ್ ಗೆ ಇಳಿದಿದ್ದಾರೆ. ವ್ಹೀಲಿಂಗ್ ಹಾವಳಿಗೆ ಪೊಲೀಸರು ಅದೆಷ್ಟೇ ಕಡಿವಾಣ ಹಾಕಿದ್ರು.
ಇಂದಿಗೂ ಕಡಿಮೆಯಾಗುತ್ತಿ. ಇತ್ತ ಶೈಕ್ಷಣಿಕ ನಗರಿ ತಿಪಟೂರಿನಲ್ಲಿಯೂ ವ್ಹೀಲಿಂಗ್ ಪುಂಡರ ಹಾವಳಿ ಹೆಚ್ಚಾಗಿದ್ದು, ಪೊಲೀಸರ ಬಿಗಿ ಭದ್ರತೆಯ ನಡುವೆಯೂ ವ್ಹೀಲಿಂಗ್ ಮಾಡಿ ಜನರಿ ತೊಂದರೆ ಕೊಡ್ತಿದ್ದಾರೆ.
ಇದನ್ನು ಓದಿ : ಶಾಲಾ ಮಕ್ಕಳಿಂದಲೇ SSLC ವಿದ್ಯಾರ್ಥಿಯ ಬರ್ಬರ ಕೊಲೆ!

ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಹೆಚ್ಚಾದ ವ್ಹೀಲಿಂಗ್ ಹಾವಳಿ
ಇನ್ನು ಪುಂಡರು ಬೆಳಗಿನ ಸಮಯವನ್ನು ಬಿಟ್ಟು, ರಾತ್ರಿ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದಾರೆ.
Tiptur ನ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಬೈಕ್ ವ್ಹೀಲಿಂಗ್ ಪುಂಡರು ಅಟ್ಟಹಾಸ ಮೆರೆಯುತ್ತಿದ್ದು, ಇಂತಹ ಬೈಕ್ ವ್ಹೀಲ್ ಪುಂಡರಿಗೆ ಕಡಿವಾಣ ಹಾಕಬೇಕಿದೆ. ಇಲ್ಲವಾದಲ್ಲಿ ಅಪಘಾತಗಳು ಸಂಭವಿಸಿ, ಸಾವು ನೋವು ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ.
ಪುಂಡರ ಯೆಡೆಮುರಿ ಕಟ್ಟುವಂತೆ ಸಾರ್ವಜನಿಕರ ಮನವಿ
ದಿನೇ ದಿನೇ ತಿಪಟೂರು ಅಭಿವೃದ್ಧಿಯತ್ತ ದಾಪುಗಾಲನ್ನು ಹಿಡುತ್ತಿದೆ. ಇಂತಹ ಸಮಯದಲ್ಲಿ ಈ ಪುಂಡರ ಹಾವಳಿ ತಾಲೂಕಿಗೆ ಕೆಟ್ಟ ಹೆಸರನ್ನು ತರುತ್ತಿದೆ. ಇ
ತ್ತ ನಗರದ ಗಾಂಧಿನಗರ ರಂಗಾಪುರ ರಸ್ತೆ ದಸರಿಘಟ್ಟ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ 206 ರ ಬೈಪಾಸ್ ರಸ್ತೆಗಳಲ್ಲಿ ರಾತ್ರಿ, ಹಗಲು ಎನ್ನದೆ ತಮಗೆ ಇಷ್ಟ ಬಂದಂತೆ ಬೈಕು ವ್ಹೀಲಿಂಗ್ ಮಾಡುತ್ತಿದ್ದಾರೆ. ಸಾರ್ವಜನಿಕರು ಇಂತಹ ರಸ್ತೆಗಳಲ್ಲಿ ಓಡಾಡುವುದಕ್ಕೆ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ .

ಈ ಕೂಡಲೇ ಸಂಬಂಧಪಟ್ಟ ಪೊಲೀಸ್ ಇಲಾಖೆಯು ಇಂತಹ ಪೋಲಿ ಪುಂಡರನ್ನು ಹಿಡಿದು, ಶಿಕ್ಷಿಸುವಂಥ ಕೆಲಸ ಮಾಡಬೇಕಾಗಿದೆ, ಇಲ್ಲವಾದಲ್ಲಿ ಸಾವು ನೋವುಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.
ಇದನ್ನು ನೋಡಿ : ತುಮಕೂರಿನ 7 ಮಕ್ಕಳು ರಾಷ್ಟ್ರಮಟ್ಟದ 69ನೇ ಜೆಮ್ನಾಸ್ಟಿಕ್ ಸ್ಪರ್ಧೆಗೆ ಆಯ್ಕೆ




