ಧಾರವಾಡದಲ್ಲಿ SSLC ವಿದ್ಯಾರ್ಥಿಯನ್ನು Murder ಮಾಡಿದ್ದಾರೆ.

ಅವರೆಲ್ಲಾ ಶಾಲಾ ಬಾಲಕರು. ಎಸ್ಎಸ್ಎಲ್ಸಿ ಓದುತ್ತಿದ್ದ ಅವರೆಲ್ಲಾ ಇದೀಗ ಓರ್ವ ಬಾಲಕನ ಭವಿಷ್ಯವನ್ನೇ ಮಣ್ಣುಪಾಲು ಮಾಡಿದ್ದಾರೆ. ಅದರೊಟ್ಟಿಗೆ ತಮ್ಮ ಭವಿಷ್ಯದ ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ.
ಆತಂಕದ ವಾತಾವರಣ ಸೃಷ್ಟಿ
ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಶಾಲಾ ಬಾಲಕರೇ ಎಸ್ಎಸ್ಎಲ್ಸಿ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬುಧವಾರ ಸಂಜೆ ನಡೆದಿದೆ. ಈ ಭೀಕರ ಘಟನೆಯಿಂದ ಕುಂದಗೋಳ ಪಟ್ಟಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಇದನ್ನು ಓದಿ : ಒಡಹುಟ್ಟಿದ ತಂಗಿ ವಿರುದ್ಧನೇ ದೂರು ಕೊಟ್ಟ ನಟಿ Karunya Ram

SSLC ವಿದ್ಯಾರ್ಥಿಯ Murder
ಕೊಲೆಯಾದ ಬಾಲಕನನ್ನು ಕುಂದಗೋಳ ಪಟ್ಟಣದ ನಿವಾಸಿ ನಿಂಗರಾಜ್ ಅವಾರಿ (16) ಎಂದು ಗುರುತಿಸಲಾಗಿದೆ. ಆತ ಕುಂದಗೋಳದ ಅನುದಾನಿತ ಶಾಲೆಯೊಂದರಲ್ಲಿ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದನು.
ಕ್ಷುಲ್ಲಕ ಕಾರಣಕ್ಕೆ ಕೊಲೆ
ಬಾಲಕನ Murder ಗೆ ಕಾರಣವಾಗಿದ್ದು ಶಾಲೆಯಲ್ಲಿ ನಡೆದ ಕ್ಷುಲಕ ವಿಚಾರ ಎನ್ನಲಾಗಿದೆ. ನಿಂಗರಾಜ್ ಮತ್ತು ಆತನ ಕೆಲ ಸ್ನೇಹಿತರಿಗೆ ಎರಡು ದಿನದ ಹಿಂದೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿತ್ತು. ಇದನ್ನೇ ದೊಡ್ಡದಾಗಿ ಮಾಡಿದ ಆತನ ಸಹಪಾ ಠಿಯೋರ್ವ ಎಸ್ಎಸ್ಎಲ್ಸಿ ಡ್ರಾಪ್ ಔಟ್ ಆಗಿದ್ದ ಇನ್ನಿಬ್ಬರು ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ಕೃತ್ಯ ಎಸಗಿದ್ದಾನೆ. ಇನ್ನು ಗಂಭೀರವಾಗಿ ಗಾಯಗೊಂಡ ನಿಂಗರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ತನಿಖೆ ಆರಂಭ
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಕುಂದಗೋಳ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನು ನೋಡಿ : CHIKKABALLAPURA | ರಾಜೀವ್ ಗೌಡ ವಿರುದ್ದ ಶಿಡ್ಲಘಟ್ಟ ನಗರಸಭೆಯ ಸಿಬ್ಬಂದಿಗಳ ಆಕ್ರೋಶ




