ಕಲ್ಪತರು ನಾಡು Tumakuru ಮತ್ತೊಂದು ಹೆಮ್ಮೆಯ ಕ್ಷಣಕ್ಕೆ ಕಾರಣವಾಗಲಿದೆ,

ಕಲ್ಪತರು ನಾಡು Tumakuru ಮತ್ತೊಂದು ಹೆಮ್ಮೆಯ ಕ್ಷಣಕ್ಕೆ ಕಾರಣವಾಗಲಿದೆ. ರಾಷ್ಟ್ರಮಟ್ಟದ 69ನೇ ಜಿಮ್ನಾಸ್ಟಿಕ್ ಸ್ಪರ್ಧೆಗೆ ತುಮಕೂರಿನ ಏಳು ಮಕ್ಕಳು ಆಯ್ಕೆಯಾಗಿದ್ದು, ಕರ್ನಾಟಕವನ್ನು ಪ್ರತಿನಿಧಿಸಲು ಸಿದ್ಧರಾಗಿದ್ದಾರೆ. 14 ವರ್ಷದ ವಯೋಮಿತಿಯೊಳಗಿನ ಈ ರಾಷ್ಟ್ರಮಟ್ಟದ ಜಿಮ್ನಾಸ್ಟಿಕ್ ಪಂದ್ಯಾವಳಿ ಇದೇ ತಿಂಗಳು ಜನವರಿ 19 ಮತ್ತು 20ರಂದು ಕೊಲ್ಕತ್ತಾದಲ್ಲಿ ನಡೆಯಲಿದೆ.

ರಾಷ್ಟ್ರಮಟ್ಟದಲ್ಲಿ ಪ್ರತಿಭೆ ಪ್ರದರ್ಶನ
ತುಮಕೂರಿನಿಂದ ಆರು ಬಾಲಕರು ಮತ್ತು ಒಬ್ಬ ಬಾಲಕಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ದೊಡ್ಡ ಗೌರವ ತಂದಿದೆ. ಕಳೆದ ಮೂರು–ನಾಲ್ಕು ವರ್ಷಗಳಿಂದ ನಿರಂತರವಾಗಿ ಉತ್ತಮ ತರಬೇತಿ ನೀಡುತ್ತಿರುವ ಕುವೆಂಪು ಜಿಮ್ನಾಸ್ಟಿಕ್ ತರಬೇತಿ ಕೇಂದ್ರದ ಮಕ್ಕಳು ಈ ಬಾರಿ ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.

ತುಮಕೂರಿನ 7 ಮಕ್ಕಳು ಆಯ್ಕೆ
ಇನ್ನು ಬಾಲಕಿಯರ ವಿಭಾಗದಲ್ಲಿ ಗುಣಪ್ರಿಯ ಆಯ್ಕೆಯಾಗಿದ್ದರೆ, ಬಾಲಕರ ವಿಭಾಗದಲ್ಲಿ ಸಾಯಿದಕ್ಷ ಮೋಹನ್, ಲಿಖಿತ್ ಗೌಡ, ಆದಿತ್ಯ ರಾಜ್, ಸಾಗರ್, ಯಶವಂತ್ ಮತ್ತು ಮಿಥುನ್ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಒಟ್ಟು ಏಳು ಮಕ್ಕಳು ಕರ್ನಾಟಕದ ಪರವಾಗಿ ಸ್ಪರ್ಧಿಸಲಿದ್ದಾರೆ.
ಇದನ್ನು ಓದಿ : ಕೊಡಲಿಯಿಂದ ಕೊಚ್ಚಿ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಮಗ

ಅಭಿನಂದನೆಗಳ ಸುರಿಮಳೆ
ಜಿಮ್ನಾಸ್ಟಿಕ್ ಅಸೋಸಿಯೇಷನ್ ಕೂಡ ಆಯ್ಕೆಯಾದ ಎಲ್ಲಾ ಮಕ್ಕಳಿಗೆ ಶುಭಾಶಯಗಳನ್ನು ತಿಳಿಸಿದ್ದು, ತುಮಕೂರಿನಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಈ ಪ್ರತಿಭಾವಂತ ಮಕ್ಕಳಿಗೆ ಜಿಲ್ಲೆಯಾದ್ಯಂತ ಅಭಿನಂದನೆಗಳ ಸುರಿಮಳೆಯಾಗಿದೆ. ಒಟ್ಟಾರೆ, ತುಮಕೂರಿನ ಏಳು ಮಕ್ಕಳು ರಾಷ್ಟ್ರಮಟ್ಟದ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಕರ್ನಾಟಕದ ಗೌರವವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಇದನ್ನು ನೋಡಿ : ಜಿಲ್ಲೆಯಲ್ಲಿ ದಲಿತರನ್ನು ಕಡೆಗಣಿಸುತ್ತಿದ್ದಾರೆ ಜ.26ಕ್ಕೆ ಕಪ್ಪುಪಟ್ಟಿ ಪ್ರದರ್ಶನ ಮಾಡ್ತೀವಿ




