Virat Kohli ಈಗ ವಿಶ್ವದ ನಂ.1 ODI ಬ್ಯಾಟರ್.

2027ರ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ರನ್ ಮಿಷಿನ್ ವಿರಾಟ್ ಕೊಹ್ಲಿ ಐಸಿಸಿ ಏಕದಿನ ರ್ಯಾಕಿಂಗ್ನಲ್ಲಿ ಮತ್ತೊಂದು ಐತಿಹಾಸಿಕ ಮೈಲುಗಲ್ಲು ಸಾಧಿಸಿದ್ದಾರೆ. 37ನೇ ವಯಸ್ಸಿನಲ್ಲಿ 785 ಅಂಕಗಳೊಂದಿಗೆ ಐಸಿಸಿ ಏಕದಿನ ಬ್ಯಾಟರ್ಗಳ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಪುನಃ ಅಲಂಕರಿಸಿದ್ದಾರೆ.
ವಿಶ್ವದ ನಂ.1 ODI ಬ್ಯಾಟರ್
ಇಂದು ಬಿಡುಗಡೆಯಾದ ನೂತನ ಐಸಿಸಿ ಏಕದಿನ ರ್ಯಾಕಿಂಗ್ನಲ್ಲಿ Virat Kohli ಅಗ್ರಸ್ಥಾನಕ್ಕೇರಿದ್ದು, ಇದು ಅವರ ನಿರಂತರ ಸಾಧನೆಯ ಪ್ರತಿಫಲವಾಗಿದೆ.
2013ರಲ್ಲಿ ಮೊದಲ ಬಾರಿ ಐಸಿಸಿ ರ್ಯಾಕಿಂಗ್ನಲ್ಲಿ ನಂ.1 ಸ್ಥಾನ ಪಡೆದಿದ್ದ ಕೊಹ್ಲಿ, 2018ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಮತ್ತೆ ಅಗ್ರಸ್ಥಾನಕ್ಕೆ ಜಿಗಿದಿದ್ದರು. ನಂತರ ಹಲವು ವರ್ಷಗಳ ಕಾಲ ಟಾಪ್ 10–11ರೊಳಗೆ ಸ್ಥಾನ ಪಡೆದಿದ್ದ ಅವರು, ಐದು ವರ್ಷಗಳ ಬಳಿಕ ಮತ್ತೆ ಶ್ರೇಷ್ಠ ಸ್ಥಾನವನ್ನು ಮರಳಿ ಪಡೆದಿದ್ದಾರೆ.

ಇದನ್ನು ಓದಿ : ರಾಷ್ಟ್ರಮಟ್ಟದ ಜಿಮ್ನಾಸ್ಟಿಕ್ ಪಂದ್ಯಾವಳಿಗೆ ತುಮಕೂರಿನ 7 ಮಕ್ಕಳು ಆಯ್ಕೆ
ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜ
ಇತ್ತೀಚಿನ ಸರಣಿಗಳಲ್ಲಿನ ಪ್ರದರ್ಶನವೇ ಕೊಹ್ಲಿಯ ರ್ಯಾಕಿಂಗ್ ಏರಿಕೆಗೆ ಪ್ರಮುಖ ಕಾರಣವಾಗಿದೆ. ಕಳೆದ ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಡಕ್ಔಟ್ ಆದರೂ, ಮೂರನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಲಯ ಕಂಡುಕೊಂಡಿದ್ದರು.
ಡಿಸೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ 2 ಶತಕ ಹಾಗೂ 1 ಅರ್ಧಶತಕ ಬಾರಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 91 ಎಸೆತಗಳಲ್ಲಿ 93 ರನ್ ಗಳಿಸಿ ತಮ್ಮ ಶ್ರೇಷ್ಠ ಫಾರ್ಮ್ ಮುಂದುವರಿಸಿದ್ದಾರೆ.

ಟಾಪ್–5ರಲ್ಲಿ ಮೂವರು ಭಾರತೀಯರು
ನೂತನ ಐಸಿಸಿ ಏಕದಿನ ರ್ಯಾಕಿಂಗ್ನಲ್ಲಿ 785 ಅಂಕಗಳೊಂದಿಗೆ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ನ ಡೇರಿಲ್ ಮಿಚೆಲ್ 784 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಭಾರತ ನಾಯಕ ರೋಹಿತ್ ಶರ್ಮಾ 775 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಅಫ್ಘಾನಿಸ್ತಾನದ ಇಬ್ರಾಹಿಂ ಜದ್ರಾನ್ 764 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಶುಭಮನ್ ಗಿಲ್ 725 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ಇದನ್ನು ನೋಡಿ : ನಕಲಿ ವಂಶವೃಕ್ಷ, ವಿಭಾಗ ಪತ್ರ ಸೃಷ್ಠಿ – 30 ಎಕರೆಗಿಂತ ಹೆಚ್ಚು ಜಮೀನು ಕಬಳಿಕೆ




