Thiruvananthapuram : ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ – ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು.

Thiruvananthapuram : ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯಂದು ಜ್ಯೋತಿ ರೂಪದಲ್ಲಿ ಭಕ್ತರಿಗೆ ಅಯ್ಯಪ್ಪನ ದರ್ಶನವಾಯಿತು. ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಉದ್ಭವಿಸುವ ಮಕರ ಜ್ಯೋತಿಯನ್ನ (ಮಕರವಿಳಕ್ಕು) ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು.
ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು
ಅಯ್ಯಪ್ಪನ ದರ್ಶನ ಪಡೆಯಲು ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಸಾಗರ ಶಬರಿಮಲೆಗೆ ಹರಿದುಬಂದಿತ್ತು. ಸಂಜೆ ಸುಮಾರು 6:43ರಿಂದ 6:46ರೊಳಗೆ, ಅಯ್ಯಪ್ಪ ದೇಗುಲದ ಎದುರಿನ ಪೊನ್ನಂಬಲಮೇಡುವಿನಲ್ಲಿ ಮಕರ ಜ್ಯೋತಿ ಪ್ರತ್ಯಕ್ಷಗೊಂಡಿತು. ಈ ವೇಳೆ ಅಯ್ಯಪ್ಪನ ಭಕ್ತಿಗೀತೆ ಗುಣಗಾನ ಮಾಡುತ್ತಾ ಭಕ್ತರು ಜ್ಯೋತಿ ಕಣ್ತುಂಬಿಕೊಂಡರು.

ಇದನ್ನು ಓದಿ : ಐಸಿಸಿ ಒಡಿಐ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೆ ಮರಳಿದ Virat Kohli!
ಅಯ್ಯಪ್ಪ ಸ್ವಾಮಿಗೆ ವಿಶೇಷ ಅಲಂಕಾರ
ಮಕರ ಸಂಕ್ರಾಂತಿ ಪ್ರಯುಕ್ತ ಶಬರಿಮಲೆ ಅಯ್ಯಪ್ಪನ ದೇಗುಲದಲ್ಲಿ ವಿಶೇಷ ಪೂಜೆ–ಪುನಸ್ಕಾರಗಳು ವಿಜೃಂಭಣೆಯಿಂದ ನಡೆಯಿತು. ಸಂಪ್ರದಾಯದಂತೆ ಪಂದಳ ರಾಜಮನೆತನದಿಂದ ತರಲಾದ ಆಭರಣಗಳಿಂದ ಅಯ್ಯಪ್ಪ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಾಮಂಗಳಾರತಿ ಸಮಯದಲ್ಲಿ ಜ್ಯೋತಿರೂಪದಲ್ಲಿ ಅಯ್ಯಪ್ಪನ ದರ್ಶನ ಲಭಿಸಿದ್ದು ಭಕ್ತರಲ್ಲಿ ಅಪಾರ ಭಕ್ತಿ ಮತ್ತು ಆನಂದವನ್ನು ಮೂಡಿಸಿತು.
ಒಟ್ಟಾರೆ, ಮಕರ ಸಂಕ್ರಾಂತಿಯ ಪವಿತ್ರ ದಿನದಂದು ಶಬರಿಮಲೆಯಲ್ಲಿ ಕಾಣಿಸಿಕೊಂಡ ಮಕರ ಜ್ಯೋತಿ, ಭಕ್ತರ ಮನಸ್ಸಿನಲ್ಲಿ ದೈವಿಕ ಅನುಭವವನ್ನು ಮೂಡಿಸಿ ಮತ್ತೊಮ್ಮೆ ಶಬರಿಮಲೆ ಯಾತ್ರೆಯ ಮಹತ್ವವನ್ನು ಸಾರಿತು.

ಇದನ್ನು ನೋಡಿ : ರಾಜ್ಯದಲ್ಲಿ ಸಂಕ್ರಾಂತಿ ಕ್ರಾಂತಿ ವಿಚಾರ – ಘಟಾನುಘಟಿ ನಾಯಕರಿಗೆ ಟಾಂಗ್ ಕೊಡ್ತಿದೆ ಡಿಕೆ ಪೋಸ್ಟ್




