Sira : ತಾಯಿಗೆ ಹೊಡೆದ ಕಾರಣಕ್ಕೆ ಮಲತಂದೆಯ ಹತ್ಯೆ.!

ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಗಲಾಟೆ, ಕೊಲೆಗಳು ನಡೆಯುತ್ತಿದ್ದು, ನಮ್ಮ ಸಮಾಜ ಎತ್ತ ಸಾಗುತ್ತಿದೆ ಅನ್ನೋ ಪ್ರಶ್ನೆಗಳು ಮೂಡ್ತಿವೆ. ತಂದೆ ತಾಯಿ ಏನೋ ಅಂದ್ರು, ಖರ್ಚಿಗೆ ಹಣ ಕೊಡಲಿಲ್ಲ ಅನ್ನೋ ಕಾರಣಕ್ಕೆ ಹೆತ್ತವರನ್ನೆ ಕೊಲ್ಲೋದು, ಮೋಜು ಮಸ್ತಿಗಾಗಿ ತಂದೆ, ತಾಯಿ ಕೊಲೆಗೆ ಸುಪಾರಿ ಕೊಡೋದು ನೋಡಿದ್ದೇವೆ. ಕೇಳಿದ್ದೇವೆ.
ತಂದೆಯನ್ನೇ ಕೊಚ್ಚಿ ಕೊಲೆಗೈದ ಪಾಪಿ ಮಗ
ಅದರೆ ಇತ್ತೀಚಿಗೆ ಮಲ ತಾಯಿ, ಮಲ ತಂದೆ ಸಂಬಂಧಗಳು ಹೆಚ್ಚಾಗುತ್ತಿದ್ದು, ಮಕ್ಕಳು ಅಂತ ಮಾತು ಹೇಳಲು ಹೋದ್ರೆ ಹಲ್ಲೆ, ಕೊಲೆಯನ್ನ ಮಾಡ್ತಾರೆ. ಇಂತಹದೆ ಒಂದು ಘಟನೆ ನಡೆದಿದ್ದು, ಮಲತಂದೆ ತನ್ನ ತಾಯಿಗೆ ಹೊಡೆದ ಅನ್ನೋ ಒಂದೇ ಒಂದು ಕಾರಣಕ್ಕೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಪಾಪಿ ಮಗ.
ಸಾಕು ತಂದೆಯನ್ನೇ ಹತ್ಯೆ ಮಾಡಿದ ಪುತ್ರ
ಇತ್ತ ತಾಯಿಯ ಮೇಲೆ ಕೈ ಮಾಡಿದನೆಂಬ ಕಾರಣಕ್ಕೆ ಮಗನೇ ಮಲತಂದೆಯನ್ನ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾರನಗೆರೆ ಗ್ರಾಮದಲ್ಲಿ ನಡೆದಿದೆ. ಹೌದು, ಹರೀಶ್ ಎಂಬಾತ ಈ ಕೃತ್ಯ ಎಸಗಿದ್ದು, ಈ ಘಟನೆಯಲ್ಲಿ ಮೃತಪಟ್ಟಿರೋದು ನಿತಿನ್ ತುಳಸಿರಾಮ್ ಎಂಬಾತ, ಈತ ಮೂಲತಃ ಮಹಾರಾಷ್ಟ್ರ ಮೂಲದವರಾಗಿದ್ದು, ನಿತಿನ್ ರಾಮ್ ಮೂರು ವರ್ಷಗಳ ಹಿಂದೆ ಯಶೋಧಾ ಎಂಬಾಕೆಯನ್ನ ಮದುವೆಯಾಗಿ, ಕಳೆದ ಮೂರು ವರ್ಷಗಳಿಂದ Sira ತಾಲೂಕಿನ ಮಾರನಗೆರೆ ಗ್ರಾಮದಲ್ಲಿ ಇದ್ದಿಲು ಸುಡುವ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ರು.
ಇದನ್ನು ಓದಿ: Namma Metro ನೀಲಿ ಮಾರ್ಗದ ಕಾಮಗಾರಿ ವೇಳೆ ಕ್ರೇನ್ ಪಲ್ಟಿ

ಯಶೋದಾ ಮಗ ಹರೀಶ್ಗೆ ಒಪ್ಪಿಗೆಯಿರಲಿಲ್ಲ
ಇನ್ನು ಯಶೋದಾಗೆ ಮೊದಲ ಪತಿ 10 ವರ್ಷಗಳ ಹಿಂದೆ ಮೃತಪಟ್ಟಿದ್ದು, ಹರೀಶ್ ಹಾಗೂ ವಸಂತ್ ಎಂಬ ಮಕ್ಕಳಿದ್ದಾರೆ. ಮೊದಲ ಪತಿ ನಿಧನದ ಬಳಿಕ ಯಶೋದಾ ನಿತಿನ್ ರಾಮ್ನನ್ನ ಮದುವೆಯಾಗಿದ್ರು. ಅದ್ರೆ ಈ ಮರುಮದುವೆಯನ್ನ ಯಶೋದಾ ಮಗ ಹರೀಶ್ಗೆ ಒಪ್ಪಿಗೆಯಿರಲಿಲ್ಲ ಎನ್ನಲಾಗ್ತಿದೆ.
ಸ್ಥಳದಲ್ಲೇ ಸಾವು
ಇನ್ನು ಈ ಕಾರಣಕ್ಕೆ ನಿತಿನ್ ಮತ್ತು ಹರೀಶ್ ನಡುವೆ ಆಗಾಗ ಜಗಳ ನಡೆಯುತ್ತಿತ್ತಂತೆ, ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಯಶೋದಾ ಮತ್ತು ನಿತಿನ್ ನಡುವೆ ಜಗಳ ನಡೆದಿದ್ದು, ನಿತಿನ್ ಯಶೋದಾ ಮೇಲೆ ಕೈ ಮಾಡಿದ್ದಾನೆ ಎನ್ನಲಾಗಿದ್ದು, ಇದ್ರಿಂದ ಕೋಪಗೊಂಡ ಹರೀಶ್ ಕೊಡಲಿಯಿಂದ ನಿತಿನ್ ತಲೆಗೆ ಹೊಡೆದಿದ್ದಾನೆ. ಕೆಳಗೆ ಬಿದ್ದ ನಿತಿನ್ ಮೇಲೆ ಮತ್ತೆ ಕೊಡಲಿಯಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಂದಿದ್ದಾನೆ. ಇದ್ರಿಂದ ಗಂಭೀರವಾಗಿ ಗಾಯಗೊಂಡ ನಿತಿನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪ್ರಕರಣ ದಾಖಲು
ಸದ್ಯ ವಿಷಯ ತಿಳಿದು ತಾವರೆಕೆರೆ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಆರೋಪಿ ಯಾದ ಹರೀಶ್ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನು ನೋಡಿ : ಮೊಮ್ಮಗನ ಎದುರೇ ಅಜ್ಜಿಯನ್ನ ಕೊಡಲಿಯಿಂದ ಕೊಚ್ಚಿ ಕೊಂದಿದ್ದ ಆರೋಪಿ ಆತ್ಮಹತ್ಯೆ




