Bangalore : ಮೆಟ್ರೋ ಕಾಮಗಾರಿ ವೇಳೆ ಅವಘಡ – ಆಯತಪ್ಪಿ ಬಿದ್ದ ಬೃಹತ್ ಕ್ರೇನ್.

ಇಂದು ಮುಂಜಾನೆ Bangalore ನಲ್ಲಿ ಅಗರ ಮೆಟ್ರೋ ಕಾಮಗಾರಿ ವೇಳೆ ಅವಘಡ ಸಂಭವಿಸಿದೆ. ಮೆಟ್ರೋ ನೀಲಿ ಮಾರ್ಗದ ಔಟರ್ ರಿಂಗ್ ರೋಡ್ ಸಂಪರ್ಕ ಕಲ್ಪಿಸುವ ಕಾಮಗಾರಿ ವೇಳೆ, ಬೃಹತ್ ಕ್ರೇನ್ ಕೆಳಗೆ ಬಿದ್ದಿದೆ.
Bangalore – ಮೆಟ್ರೋ ಕಾಮಗಾರಿ ವೇಳೆ ಅವಘಡ
ಕ್ರೇನ್ನ ಒಂದು ಭಾಗಕ್ಕೆ ತೂಕ ಹಾಕಿ ತಲೆ ಮೇಲಾಗಿರುವ ಕ್ರೇನ್ ಕೆಳಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನೂ ಎರಡು ಬೃಹತ್ ಕ್ರೇನ್ ಬಳಸಿಕೊಂಡು ಬಿದ್ದಿರುವ ಕ್ರೇನ್ ಎತ್ತುವ ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನು ನೋಡಿ : ಸರ್ಕಾರಿ ಆಸ್ಪತ್ರೆ ವೈದ್ಯನ ಮನೆಯಲ್ಲೇ ಇತ್ತು ಗಾಂಜಾ ಸ್ಟಾಕ್!
ತಾಂತ್ರಿಕ ಸಮಸ್ಯೆಯಿಂದ ಅವಘಡ ಸಂಭವ
ಮುಂಜಾನೆ 3:45ರ ಸುಮಾರಿಗೆ ಘಟನೆ ನಡೆದಿದೆ. 100 ಟನ್ ತೂಕದ ಸ್ಟೀಲ್ ಗಾರ್ಡರ್ ಎತ್ತುವ ವೇಳೆ ಕ್ರೇನ್ನ ಜಾಕ್ ಕಟ್ ಆಗಿದ್ದು, ಅದರ ಪರಿಣಾಮವಾಗಿ ಕ್ರೇನ್ ತಲೆ ಮೇಲೆ ಬಿದ್ದಿದೆ. ತಾಂತ್ರಿಕ ಸಮಸ್ಯೆಯಿಂದ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲಎಂದು ಬಿಎಂಆರ್ಸಿಎಲ್ ಡೆಪ್ಯೂಟಿ ಚೀಫ್ ಇಂಜಿನಿಯರ್ ಸದಾಶಿವ ಮಾಹಿತಿ ನೀಡಿದ್ದಾರೆ.
ತಪ್ಪಿದ ಭಾರೀ ದುರಂತ
100 ಟನ್ ತೂಕದ ಸ್ಟೀಲ್ ಗಾರ್ಡರ್ ಎತ್ತುವಾಗ ಅವಘಡವಾಗಿದೆ. ಕ್ರೇನ್ನ ಜಾಕ್ ಕಟ್ ಆದ ಪರಿಣಾಮ ಹೀಗಾಗಿದೆ. 500 ಟನ್ ತೂಕವನ್ನ ಎತ್ತುವ ಸಾಮರ್ಥ್ಯವಿರುವ ಕ್ರೇನ್ ಇದು. ಕ್ರೇನ್ಗೆ ಹಾಕಿದ್ದ ನಾಲ್ಕು ಜಾಕ್ (ಸ್ಟಾಂಡ್)ನಲ್ಲಿ ಒಂದು ಕಟ್ ಆಗಿರೋ ಕಾರಣದದಿಂದ ಕ್ರೇನ್ ತಲೆಮೇಲಾಗಿದೆ.
ಇದನ್ನು ಓದಿ : ಸಲ್ಲು ಜೊತೆ ಕಾರು ಡ್ರಿಫ್ಟ್ ಮಾಡಿದ Dhoni




