ನಟ ಸಲ್ಮಾನ್ ಖಾನ್ ಹಾಗೂ ಕ್ರಿಕೆಟರ್ Dhoni ಮಧ್ಯೆ ಒಳ್ಳೆಯ ಒಡನಾಟ ಇದೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟರ್ M.S ಧೋನಿಗೆ ವಾಹನಗಳ ಬಗ್ಗೆ ವಿಶೇಷ ಕ್ರೇಜ್ ಇದೆ. ಈಗ ಸಲ್ಮಾನ್ ಖಾನ್ ಫಾರ್ಮ್ಹೌಸ್ಗೆ ತೆರಳಿರೋ ಅವರು ವಾಹನವೊಂದನ್ನು ಓಡಿಸಿ ಅದನ್ನು ಡ್ರಿಫ್ಟ್ ಮಾಡಿ ಗಮನ ಸೆಳೆದಿದ್ದಾರೆ. ಸಿಂಗರ್ ಎಪಿ ದಿಲ್ಲೋನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಕಾರು ಡ್ರಿಫ್ಟ್ ಮಾಡಿದ ಧೋನಿ
ಈ ಫೋಟೋಗಳಲ್ಲಿ Dhoni ರೇನ್ಕೋಟ್ ಹಾಕಿ ಎಟಿವಿ ಡ್ರೈವ್ ಮಾಡುತ್ತಿರುವ ದೃಶ್ಯಗಳು ಸೆರೆಹಿಡಿಯಲಾಗಿದೆ. ಅವರು ಈ ಚಿಕ್ಕ ಎಟಿವಿಯನ್ನು ಮನಸ್ಸಿನ ಇಚ್ಛೆಯಂತೆ ಡ್ರಿಫ್ಟ್ ಮಾಡಿದರು. ಈ ವೇಳೆ ಎಪಿ ದಿಲ್ಲೋನ್ ಕಾರ ಹಿಂಭಾಗದಲ್ಲಿ ನಿಂತಿದ್ದರು ಮತ್ತು ಧೋನಿ ಡ್ರೈವಿಂಗ್ ಸೀಟ್ನಲ್ಲಿ ಇದ್ದರು.
ಇದನ್ನು ನೋಡಿ : Namma Metro ದಲ್ಲಿ ಪ್ರಯಾಣಿಸಲು ಮೊಬೈಲ್ QR ಪಾಸ್ ಆರಂಭ

ಫಾರ್ಮ್ ಹೌಸ್ನಲ್ಲಿ ಮಸ್ತಿ
ಎಪಿ ದಿಲ್ಲೋನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋ ಹಂಚಿಕೊಂಡು, ಹಾಸ್ಯಭರಿತವಾಗಿ “Who do you think crashed it?” ಎಂದು ಕೇಳಿದ್ದಾರೆ. ಫೋಟೋಗಳಲ್ಲಿ ಮೂವರರು ಹೆಗಲ ಮೇಲೆ ಕೈ ಹಾಕಿಕೊಂಡು ನಿಂತಿರುವ ದೃಶ್ಯಗಳಿವೆ.
ಧೋನಿ ತಮ್ಮ ಕ್ರಿಕೆಟ್ ವೃತ್ತಿಯಿಂದ ದೂರ ಇದ್ದರೂ, ವಾಹನಗಳ ಪ್ರೀತಿಯಿಂದ ಮತ್ತು ಗೆಳೆಯರೊಂದಿಗೆ ಔಟ್ಡೋರ್ ಆನಂದವನ್ನು ಅನುಭವಿಸುತ್ತಿರುವ ದೃಶ್ಯಗಳು ಅಭಿಮಾನಿಗಳಿಗೆ ಸಂತೋಷ ನೀಡಿವೆ.

ಇದನ್ನು ನೋಡಿ : ಶಿಡ್ಲಘಟ್ಟ ಆಯುಕ್ತೆಗೆ ಅವಾಚ್ಯ ಶಬ್ದ ಬಳಸಿRAJEEV GOWDA ಬೈದಿರೋ AUDIO VIRAL




