Bengaluru ಸಿನಿಮಾ ಥಿಯೇಟರ್ ಒಂದರ ಲೇಡೀಸ್ ಟಾಯ್ಲೆಟ್ನಲ್ಲಿ ಕ್ಯಾಮರಾ ಇಟ್ಟಿರುವ ಆರೋಪ ಕೇಳಿ ಬಂದಿದೆ.

Bengaluru ನಗರದ ಚಿತ್ರಮಂದಿರವೊಂದರಲ್ಲಿ ಮಹಿಳೆಯರ ಸುರಕ್ಷತೆಗೆ ಗಂಭೀರ ಧಕ್ಕೆ ತರುವಂತಹ ಘಟನೆ ನಡೆದಿದೆ. ಬೆಂಗಳೂರಿನ ಮಡಿವಾಳ ಪ್ರದೇಶದ ಸಂಧ್ಯಾ ಚಿತ್ರಮಂದಿರದ ಮಹಿಳಾ ಶೌಚಾಲಯದಲ್ಲಿ ಸೀಕ್ರೆಟ್ ಕ್ಯಾಮರಾ ಅಳವಡಿಸಿದ್ದ ಕಿಡಿಗೇಡಿಯನ್ನು ಸಿಕ್ಕಿಬಿದ್ದಿದ್ದಾನೆ. ಸಿನಿಮಾ ನೋಡಲು ಬಂದ ಪ್ರೇಕ್ಷಕರು ಆತನನ್ನು ಹಿಡಿದು ಥಳಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗ್ತಿದೆ.

ಕಾಮುಕನಿಗೆ ಬಿತ್ತು ಧರ್ಮದೇಟು!
ನಿನ್ನೆ ಸಂಧ್ಯಾ ಚಿತ್ರಮಂದಿರದಲ್ಲಿ ತೆಲುಗಿನ ‘ನುವ್ವು ನಾಕು ನಚ್ಚಾವು’ ಚಿತ್ರ ಪ್ರದರ್ಶನವಾಗುತ್ತಿದ್ದು, ದೊಡ್ಡ ಸಂಖ್ಯೆಯಲ್ಲಿ ಮಹಿಳಾ ಪ್ರೇಕ್ಷಕರು ಸಿನಿಮಾ ವೀಕ್ಷಿಸಲು ಆಗಮಿಸಿದ್ದರು. ಈ ವೇಳೆ ಶೌಚಾಲಯಕ್ಕೆ ತೆರಳಿದ ಕೆಲ ಮಹಿಳೆಯರಿಗೆ ಅಲ್ಲಿಗೆ ಅಳವಡಿಸಿದ್ದ ಸೀಕ್ರೆಟ್ ಕ್ಯಾಮರಾ ಕಂಡುಬಂದಿದೆ.
ಕೂಡಲೇ ಈ ವಿಷಯವನ್ನು ಇತರರಿಗೆ ತಿಳಿಸಿದ್ದು, ಶೌಚಾಲಯದಲ್ಲಿ ಕ್ಯಾಮರಾ ಇಟ್ಟಿದ್ದ ಆರೋಪಿಯನ್ನು ಪ್ರೇಕ್ಷಕರು ಪೊಲೀಸರಿಗೆ ಹಿಡಿದುಕೊಂಡಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಪ್ರೇಕ್ಷಕರು ಆರೋಪಿಗೆ ಧರ್ಮದೇಟು ನೀಡಿದ್ದಾರೆ. ಇನ್ನು ಈ ಸಂಬಂಧದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ Viral ಆಗಿವೆ.
ಇದನ್ನು ಓದಿ : ಡಿವೈಡರ್ ಗೆ ಡಿಕ್ಕಿ ಹೊಡೆದು ಧಗಧಗನೇ ಹೊತ್ತಿ ಉರಿದ CAR

ಈ ದುಷ್ಕೃತ್ಯದ ಹಿಂದಿನ ಉದ್ದೇಶ ಏನು?
ಮಡಿವಾಳ ಪೊಲೀಸ್ ಠಾಣೆ ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಡಿವಾಳ ಸುತ್ತಮುತ್ತಲ ಭಾಗದಲ್ಲಿ ಸಂಧ್ಯಾ ಚಿತ್ರಮಂದಿರ ಬಹಳ ಜನಪ್ರಿಯವಾಗಿದೆ.
ಇದೀಗ ಈ ಘಟನೆ ಭಾರೀ ಚರ್ಚೆ ಹುಟ್ಟಾಕ್ಕಿದೆ. ಮಹಿಳೆಯರ ಸುರಕ್ಷತೆ ಬಗ್ಗೆ ಕಳವಳ ಉಂಟು ಮಾಡಿದೆ. ಇನ್ನು ಬಂಧಿತ ಅಪ್ರಾಪ್ತ ಎನ್ನಲಾಗಿದ್ದು ಆತ ಯಾರು? ಈ ದುಷ್ಕೃತ್ಯದ ಹಿಂದಿನ ಉದ್ದೇಶ ಏನು ಎಂದು ವಿಚಾರಣೆ ನಡೆಸಲಾಗ್ತಿದೆ.

ಇದನ್ನು ನೋಡಿ : TUMAKURU | ಅಕ್ರಮ ಸಂಬಂಧಕ್ಕೆ ಅಡ್ಡಿಯಾಗ್ತಾನೆ ಅಂತಾ ಮಗುವನ್ನೇ ಸಾಯಿಸಿದ್ನಾ ಪಾಪಿ?




