ಸೆಂಚುರಿ ಸಿಡಿಸಿದ ಕನ್ನಡಿಗ Devdutt Padikkal.

ಅಹಮದಾಬಾದ್ನ ರೈಲ್ವೇಸ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ವಿಜಯ ಹಝಾರೆ ಟೂರ್ನಿಯ ಗ್ರೂಪ್-ಎ ಪಂದ್ಯದಲ್ಲಿ ಕರ್ನಾಟಕ ತಂಡವು ಪುದುಚೇರಿ ವಿರುದ್ಧ ಭರ್ಜರಿ ಮೊತ್ತವನ್ನು ತಲುಪಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕರ್ನಾಟಕಕ್ಕೆ ನಾಯಕ ಮಯಾಂಕ್ ಅಗರ್ವಾಲ್ ಮತ್ತು ದೇವದತ್ ಪಡಿಕ್ಕಲ್ ಅತ್ಯುತ್ತಮ ಆರಂಭ ನೀಡಿದರು.
116 ಎಸೆತಗಳಲ್ಲಿ ಶತಕ
ಆರಂಭದಲ್ಲಿ ಉತ್ತಮ ಜೊತೆಯಾಟ ಆಡಿದ ಈ ಜೋಡಿ ಮೊದಲ ವಿಕೆಟ್ಗೆ 228 ರನ್ಗಳನ್ನು ಸೇರ್ಪಡೆ ಮಾಡಿತು. Devdutt Padikkal 116 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಶತಕ ಬಾರಿಸಿ ಔಟಾದರು.
ಇದನ್ನು ಓದಿ : ಹೊಸ ವರ್ಷದ ರಾತ್ರಿ 12 ಗಂಟೆಗೆ ಜನ 12 ದ್ರಾಕ್ಷಿಗಳನ್ನು ತಿನ್ನೋದೇಕೆ?
363 ರನ್ ಕಲೆಹಾಕಿದೆ
ಇದಾದ ಮೇಲೆ ಇನಿಂಗ್ಸ್ ಸಾಗಿಸಿದ ಮಯಾಂಕ್ ಅಗರ್ವಾಲ್ 124 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 15 ಫೋರ್ಗಳೊಂದಿಗೆ 132 ರನ್ಗಳನ್ನು ಬಾರಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಕರುಣ್ ನಾಯರ್ ತಮ್ಮ ಅನುಭವವನ್ನು ಪ್ರದರ್ಶಿಸಿದರು. 34 ಎಸೆತಗಳಲ್ಲಿ 4 ಸಿಕ್ಸ್ ಮತ್ತು 4 ಫೋರ್ಗಳೊಂದಿಗೆ ಅಜೇಯ 64 ರನ್ ಬಾರಿಸಿದರು. ಇನ್ನು ಸ್ಮರಣ್ ರವಿಚಂದ್ರನ್ 21 ರನ್ ಕೊಡುಗೆ ನೀಡಿದರೆ, ಅಭಿನವ್ ಮನೋಹರ್ 6 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ ಅಜೇಯ 21 ರನ್ ಬಾರಿಸಿದರು.
ಈ ಮೂಲಕ ಕರ್ನಾಟಕ ತಂಡವು 50 ಓವರ್ನಲ್ಲಿ 4 ವಿಕೆಟ್ ಕಳೆದುಕೊಂಡು 363 ರನ್ ಕಲೆಹಾಕಿದೆ, ಪುದುಚೇರಿಯ ವಿರುದ್ಧ ಭರ್ಜರಿ ಮೊತ್ತವನ್ನು ತಲುಪಿಸಿದೆ.
ಇದನ್ನು ನೋಡಿ : ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?




