New Year ಮಧ್ಯರಾತ್ರಿ 12 ದ್ರಾಕ್ಷಿಗಳನ್ನು ತಿನ್ನುವ ಸಂಪ್ರದಾಯ!

2025ರ ಅಂತಿಮ ಕಾಲಘಟ್ಟದಲ್ಲಿ ನಾವಿಂದು ಇದ್ದು ಹೊಸ ವರ್ಷಕ್ಕೆ ಅತೀ ಸಮೀಪದಲ್ಲಿದ್ದೇವೆ. ಕ್ಯಾಲೆಂಡರ್ ಬದಲಾದಂತೆ ನಮ್ಮ ಜೀವನದಲ್ಲಿ ಹೊಸ ವರ್ಷ ಹರುಷದ ಹಾದಿ ತರಲಿ ಎಂಬ ಕಾರಣಕ್ಕೆ ಹೊಸ ವರ್ಷದಂದು ದೇವಸ್ಥಾನಗಳಿಗೆ ಹೋಗು ವುದು, ಪೂಜೆ ಪುನಸ್ಕಾರ ಎಲ್ಲ ಮಾಡುವುದು ಇದೆ.
ಪಾರ್ಟಿ ಮಾಡಿ ಎಂಜಾಯ್
ಡಿಸೆಂಬರ್ 31ರ ರಾತ್ರಿ ಹೊಸ ವರ್ಷದ ಸೆಲಿಬ್ರೇಶನ್ ಎಲ್ಲೆಡೆ ನಡೆಯುತ್ತಿದ್ದು, ಪಾರ್ಟಿಗಳು ಮತ್ತು ಸಂಭ್ರಮದ ಕಾರ್ಯಕ್ರಮಗಳು ನಡೆಯುತ್ತವೆ. ಕೆಲವರು ಈ ದಿನವನ್ನು ಸರಳವಾಗಿ ಆಚರಿಸುತ್ತಾರೆ. ಆದರೆ ಕೆಲವರು ಮಧ್ಯರಾತ್ರಿ 12ಕ್ಕೆ ಪಬ್, ಡಿಸ್ಕೋ ಕ್ಲಬ್ಗಳಲ್ಲಿ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಾರೆ.
12ಕ್ಕೆ 12 ದ್ರಾಕ್ಷಿಗಳನ್ನು ತಿನ್ನುವ ಸಂಪ್ರದಾಯ
ಭಾರತೀಯ ಕಾಲಮಾನದಲ್ಲಿ ಯುಗಾದಿ ಹೊಸ ವರ್ಷವಾಗಿದ್ದರೂ, ನಗರ ಪ್ರದೇಶಗಳಲ್ಲಿ ಜನವರಿ 1ವನ್ನು ಹೊಸ ವರ್ಷ ಎಂದು ಆಚರಿಸುವ ಸಂಪ್ರದಾಯವಿದೆ.
ಇತ್ತೀಚೆಗಷ್ಟೇ, ಸ್ಪೇನ್ ಮತ್ತು ಲ್ಯಾಟಿನ್ ಅಮೆರಿಕನ್ ದೇಶಗಳಲ್ಲಿ ಮಧ್ಯರಾತ್ರಿ 12ಕ್ಕೆ 12 ದ್ರಾಕ್ಷಿಗಳನ್ನು ತಿನ್ನುವ ಸಂಪ್ರದಾಯವು Viral ಆಗಿದೆ.
ಇದನ್ನು ಓದಿ : ವರ್ಷದ ಕೊನೆ ದಿನ ಚಿನ್ನದ ದರದಲ್ಲಿ ಇಳಿಕೆ
12 ದ್ರಾಕ್ಷಿ ಆಚರಣೆಯ ವಿವರ
ಈ ದ್ರಾಕ್ಷಿ ತಿನ್ನುವ ಸಂಪ್ರದಾಯವು ಸ್ಪೇನ್ ಮತ್ತು ಲ್ಯಾಟಿನ್ ಅಮೆರಿಕದ ಕೆಲವು ಭಾಗಗಳಲ್ಲಿ ಮೊದಲು ಪ್ರಾರಂಭವಾಯಿತು ಎಂದು ತಿಳಿದು ಬಂದಿದೆ.
New Year ಪ್ರತಿ ತಿಂಗಳನ್ನು ಸಂಕೇತಿಸುವ ರೀತಿ ಒಟ್ಟು 12 ದ್ರಾಕ್ಷಿಯನ್ನು ಒಂದಾದ ಮೇಲೊಂದರಂತೆ ಸೇವಿಸುವ ಮೂಲಕ ತಮ್ಮ ಇಷ್ಟಾರ್ಥ ಇಡೇರಿಕೆಗೆ ಪ್ರಾರ್ಥನೆ ಮಾಡುತ್ತಾರೆ.
ಈ ಪ್ರಾರ್ಥನೆ ನೆರವೇರಲಿದೆ ಎಂದು ಜನರು ನಂಬಿದ್ದಾರೆ. ಈ ಆಚರಣೆಯನ್ನು ಜನರು ಮಾಡುವಾಗ ಪಾರ್ಟಿಗಳು ಹಾಗೂ ಪಟಾಕಿಗಳನ್ನು ಸಿಡಿಸುವುದಿಲ್ಲ. ಪ್ರತಿ ದ್ರಾಕ್ಷಿಯನ್ನು ಎಚ್ಚರಿಕೆಯಿಂದ ಅಗಿಯುವುದು, ಸ್ಥಿರವಾಗಿ ಉಸಿರಾಡುವುದು ಮತ್ತು ಪ್ರತಿ ದ್ರಾಕ್ಷಿಯ ಮೇಲೆ ಗಮನ ಕೇಂದ್ರೀಕರಿಸುವುದರಿಂದಾಗಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ಆಚರಣೆಯಿಂದ ಮನಸ್ಸು ಕೂಡ ಶಾಂತವಾಗಿ ಇರಲಿದೆ.
ಆರೋಗ್ಯ ಪ್ರಯೋಜನಗಳು
- ದ್ರಾಕ್ಷಿಯಲ್ಲಿರುವ ಆಂಟಿಆಕ್ಸಿಡೆಂಟ್ಗಳು ಚರ್ಮವನ್ನು ಹೊಳೆಯುವಂತೆ ಮಾಡುತ್ತವೆ.
- ವಿಟಮಿನ್ಗಳು ಕೂದಲು ಬೆಳವಣಿಗೆಗೆ ನೆರವಾಗುತ್ತವೆ.
- ನೀರು, ನಾರು ಮತ್ತು ನೈಸರ್ಗಿಕ ಸಕ್ಕರೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
- ರೋಗನಿರೋಧಕ ಶಕ್ತಿ ಮತ್ತು ಮನಸ್ಥಿತಿ ಉತ್ತಮವಾಗುತ್ತವೆ.
- ಲುಟೀನ್ ಮತ್ತು ಝೀಕ್ಸಾಂಥಿನ್ ಕಣ್ಣಿನ ಆರೋಗ್ಯಕ್ಕೆ ಉತ್ತಮ.
- ಹೃದಯ ಮತ್ತು ರಕ್ತನಾಳಗಳ ಆರೋಗ್ಯವನ್ನು ಬೆಂಬಲಿಸುತ್ತದೆ.
- ನೆನಪಿನ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಬಹುದು
ಈ ಸಂಪ್ರದಾಯವನ್ನು ಕೇವಲ ಸ್ಪೇನ್ ಮತ್ತು ಅಮೆರಿಕದಲ್ಲಿ ಮಾತ್ರ ಆಚರಿಸಬೇಕೆಂದು ಯಾವುದೇ ನಿಯಮವಿಲ್ಲ. ಮನಸ್ಸಿದ್ದರೆ ಯಾರೂ ಈ ಆಚರಣೆ ಮಾಡಿ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಬಹುದು. ಮಧ್ಯರಾತ್ರಿ 12 ರ ವೇಳೆಗೆ 12 ದ್ರಾಕ್ಷಿಗಳನ್ನು ನಿಧಾನವಾಗಿ ತಿನ್ನುವುದರಿಂದ ಹೊಸ ವರ್ಷವನ್ನು ವಿಶಿಷ್ಟವಾಗಿ ಆಚರಿಸಬಹುದು.
ಇದನ್ನು ನೋಡಿ : ವರ್ಷಾಚರಣೆ ನೆಪದಲ್ಲಿ ಡ್ರಿಂಕ್ ಆ್ಯಂಡ್ ಡ್ರೈವ್ ಮಾಡುವವರಿಗೆ ಎಚ್ಚರಿಕೆ: ಒಂದೇ ವಾರದಲ್ಲಿ 4,147 ಪ್ರಕರಣ ದಾಖಲು




