ಗುರುರಾಯರ ದರ್ಶನ ಪಡೆದ Rishab Shetty.

ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಇಂದು (ಡಿ.24) ಕುಟುಂಬ ಸಮೇತರಾಗಿ ರಾಯಚೂರಿನ ಮಂತ್ರಾಲಯಕ್ಕೆ ಭೇಟಿ ನೀಡಿ ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆದರು. ಪತ್ನಿ ಪ್ರಗತಿ ಹಾಗೂ ತಮ್ಮ ಇಬ್ಬರು ಮಕ್ಕಳೊಂದಿಗೆ ಆಗಮಿಸಿದ ರಿಷಬ್ ಶೆಟ್ಟಿ ಕುಟುಂಬ ಸಮೇತ ರಾಯರ ಆಶೀರ್ವಾದ ಪಡೆದಿದೆ.
ಇದನ್ನು ಓದಿ : ಸಾಕ್ಷಿಗಳ ಸಮೇತ ಪೊಲೀಸರಿಗೆ ದೂರು ಕೊಟ್ಟ ದರ್ಶನ್ ಪತ್ನಿ..!
ಮಂತ್ರಾಕ್ಷತೆ ನೀಡಿ ಆಶೀರ್ವಾದ
ಮಂತ್ರಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿಗಳಿಂದ ರಿಷಬ್ ಶೆಟ್ಟಿ ಆಶೀರ್ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ Rishab Shetty ದಂಪತಿಗೆ ಶ್ರೀಗಳು ಫಲ-ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ರಾಯರ ವೃಂದಾವನಕ್ಕೆ ವಿಶೇಷ ಪೂಜೆ
ಆನಂತರ ಮಂಚಾಲಮ್ಮ ದೇವಿ ದರ್ಶನ ಪಡೆದು ರಾಯರ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಂಗಳವಾರ (ಡಿ.23) ತಿರುಪತಿ ತಿರುಮಲ ಸನ್ನಿಧಾನಕ್ಕೆ ಭೇಟಿ ನೀಡಿದ್ದರು.
ಇದನ್ನು ನೋಡಿ : ಪಾವಗಡ EO ಉತ್ತಮ್ ವಿರುದ್ಧ ರೊಚ್ಚಿಗೆದ್ದ ನೌಕರರ ಸಂಘದ ಸದಸ್ಯರು..!?




