T20 World Cup : ಟಿ-20 ವಿಶ್ವಕಪ್ಗೆ ಆಯ್ಕೆ ಸಮಿತಿಯು ಆಟಗಾರರ ತಂಡವನ್ನು ಪ್ರಕಟಿಸಿದೆ. ರಿಂಕು ಸಿಂಗ್, ಇಶಾನ್ ಕಿಶನ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ.

T20 World Cup : ಟಿ-20 ವಿಶ್ವಕಪ್–2026ರಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು 15 ಸದಸ್ಯರ ತಂಡವನ್ನು ಘೋಷಿಸಿದೆ.
ತಂಡದಲ್ಲಿ ರಿಂಕು ಸಿಂಗ್ ಹಾಗೂ ಇಶಾನ್ ಕಿಶನ್ಗೆ ಮರಳಿ ಅವಕಾಶ ನೀಡಲಾಗಿದ್ದು, ಕ್ರಿಕೆಟ್ ಪ್ರಿನ್ಸ್ ಎಂದು ಕರೆಸಿಕೊಳ್ಳುವ ಶುಭ್ಮನ್ ಗಿಲ್ ತಂಡದಿಂದ ಹೊರಬಿದ್ದಿದ್ದಾರೆ.
ಇದಲ್ಲದೆ ಯಶಸ್ವಿ ಜೈಸ್ವಾಲ್ಗೂ ಈ ಬಾರಿ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ವಿಶೇಷವಾಗಿ ಅಕ್ಷರ್ ಪಟೇಲ್ಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. ಬಹುದಿನಗಳ ನಂತರ ಇಶಾನ್ ಕಿಶನ್ ಮತ್ತು ರಿಂಕು ಸಿಂಗ್ ತಂಡಕ್ಕೆ ಕಂಬ್ಯಾಕ್ ಮಾಡಿರುವುದು ಗಮನಾರ್ಹವಾಗಿದೆ.
ಕ್ಯಾಪ್ಟನ್ ಕನಸಿಗೆ ಕೊಕ್ಕೆ
ಶುಭ್ಮನ್ ಗಿಲ್ ಮೂರು ಮಾದರಿಯ ಕ್ರಿಕೆಟ್ನಲ್ಲಿ ನಾಯಕತ್ವ ವಹಿಸುವ ಕನಸು ಕಂಡಿದ್ದರು. ಈಗಾಗಲೇ ಏಕದಿನ ಹಾಗೂ ಟೆಸ್ಟ್ ತಂಡವನ್ನು ಮುನ್ನಡೆಸಿರುವ ಅವರು, ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಉಪನಾಯಕನಾಗಿ ಆಯ್ಕೆಯಾಗಿದ್ದರು.
ಆದರೆ ಟಿ-20 ಮಾದರಿಯಲ್ಲಿ ಇತ್ತೀಚಿನ ಪ್ರದರ್ಶನ ತೃಪ್ತಿಕರವಾಗಿಲ್ಲ ಎಂಬ ಕಾರಣದಿಂದ ಆಯ್ಕೆ ಸಮಿತಿಯು ಅವರನ್ನು ವಿಶ್ವಕಪ್ ತಂಡದಿಂದ ಕೈಬಿಟ್ಟಿದೆ.
ಇದನ್ನೂ ಓದಿ : 500 ಟಿ20 ವಿಕೆಟ್ ಪೂರೈಸಿ ಎಲೈಟ್ ಪಟ್ಟಿ ಸೇರಿದ Andre Russell

ಭಾರತ ತಂಡದ ಆಟಗಾರರು
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) , ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ (ಉಪನಾಯಕ), ಇಶಾನ್ ಕಿಶನ್, ರಿಂಕು ಸಿಂಗ್ ,ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್ , ಜಸ್ಪ್ರೀತ್ ಬೂಮ್ರಾ, ಆರ್ಷದೀಪ್ ಸಿಂಗ್ , ಹರ್ಷಿತ್ ರಾಣಾ
ಟಿ-20 ವಿಶ್ವಕಪ್ಗೆ ಆಯ್ಕೆಯಾದ ಈ ತಂಡ ಅನುಭವ ಮತ್ತು ಯುವ ಪ್ರತಿಭೆಗಳ ಮಿಶ್ರಣವಾಗಿದ್ದು, ಬಲಿಷ್ಠ ಸ್ಪರ್ಧೆಗೆ ಸಜ್ಜಾಗಿದೆ ಎಂಬ ಅಭಿಪ್ರಾಯ ಕ್ರಿಕೆಟ್ ವಲಯದಲ್ಲಿ ವ್ಯಕ್ತವಾಗಿದೆ.

MUST WATCH: ಮನೆಗೆ ದಾರಿ ಬಿಡದೇ PDO ದಬ್ಬಾಳಿಕೆ ಆರೋಪ- ವಿಷ ಸೇವಿಸಿ ಆಸ್ಪತ್ರೆ ಸೇರಿದ ಅಜ್ಜಿ




