Arsikere ಯ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಲ್ಲಿ ಅಧಿಕಾರಿಯೊಬ್ಬರು ಲಂಚ ಪಡೆಯುತ್ತಿದ್ದ ವೇಳೆ ಲೋಕಾ ಬಲೆಗೆ ಬಿದ್ದಿದ್ದಾರೆ.

ಹಾಸನ ಜಿಲ್ಲೆ Arsikere ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಲ್ಲಿ ಅಧಿಕಾರಿಯೊಬ್ಬರು ಲಂಚ ಪಡೆಯುತ್ತಿದ್ದ ವೇಳೆ ಲೋಕಾ ಬಲೆಗೆ ಬಿದ್ದಿದ್ದಾರೆ. ಕೆಇಬಿಯಲ್ಲಿ AEE ಆಗಿ ಕಾರ್ಯನಿರ್ವಹಿಸ್ತಾ ಇರೋ ಮಂಜುನಾಥ್ ಎಂಬುವವರು ಕಂಟ್ರಾಕ್ಟರ್ ಮಧು ಎಂಬುವವರಿಂದ 25 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳ ದಾಳಿಗೆ ಅಧಿಕಾರಿ ಬೆಚ್ಚಿಬಿದ್ದಿದ್ದಾರೆ.
ಇದನ್ನು ಓದಿ : ಇಷ್ಟಾರ್ಥ ಸಿದ್ಧಿಗಾಗಿ ಅಂದ್ಲೆ ಜಗದೀಶ್ವರಿ ದೇವಿ ಮೊರೆ ಹೋದ DCM
ಲೋಕಾಯುಕ್ತ ಅಧಿಕಾರಿಗಳು ದಾಳಿ
ಇನ್ನು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ, ಅಧಿಕಾರಿ ಮಂಜುನಾಥ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಮಂಜುನಾಥ್ ಅವರನ್ನು ಲೋಕಾಯುಕ್ತ ಅಧಿಕಾರಿಗಳೇ ಅವರ ವಾಹನದಲ್ಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಬಳಿಕ ಮತ್ತೆ ಕೆಇಬಿ ಕಚೇರಿಗೆ ಕರೆತಂದು ವಿಚಾರಣೆ ಮುಂದುವರೆಸಿದ್ರು.
ಕಂಪ್ಯೂಟರ್ ಪರಿಶೀಲನೆ
ಎಇಇ ಮಂಜುನಾಥ್ ಕಚೇರಿಯಲ್ಲಿ ಕಡತಗಳನ್ನು ಹಾಗೂ ಕಂಪ್ಯೂಟರ್ನನ್ನು ಪರಿಶೀಲನೆ ನಡೆಸಿದ್ದು, ಲಂಚ ಪಡೆದ ಅಧಿಕಾರಿ ವಿರುದ್ಧ ಮುಂದಿನ ಕ್ರಮಕ್ಕೆ ಲೋಕಾಯುಕ್ತ ಅಧಿಕಾರಿಗಳು ಮುಂದಾಗಿದ್ದಾರೆ.
ಇದನ್ನು ನೋಡಿ : ಎತ್ತಿನಹೊಳೆ ನೀರಿಗಾಗಿ ತುಮಕೂರಿನಲ್ಲಿ ಆಕ್ರೋಶದ ಕಿಚ್ಚು- ಯಾವಾಗ ಹರಿಯುತ್ತೆ ಗೊತ್ತಾ..?




