DCM ಡಿ.ಕೆ.ಶಿವಕುಮಾರ್ ಅವರು ಅಂಕೋಲ ತಾಲೂಕಿನ ಅಂದ್ಲೆ ಶ್ರೀ ಜಗದೀಶ್ವರಿ ದೇವಿ ದೇವಸ್ಥಾನಕ್ಕೆ ನಾಳೆ ಭೇಟಿ ಕೊಡಲಿದ್ದಾರೆ.

ಇಷ್ಟಾರ್ಥ ಸಿದ್ಧಿಗಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಅಂದ್ಲೆ ಶ್ರೀ ಜಗದೀಶ್ವರಿ ದೇವಿ ದೇವಸ್ಥಾನಕ್ಕೆ ನಾಳೆ ಬೆಳಗ್ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಹಾಗೂ ಹರಕೆ ಸಲ್ಲಿಸಲಿದ್ದಾರೆ.
ಬೆಂಬಲಿಗರಿಗೆ ನಿರ್ಬಂಧ
ಬೆಳಗ್ಗೆ ಬೆಳಗಾವಿಯಿಂದ ಹೆಲಿಕಾಪ್ಟರ್ ಮೂಲಕ ಗೋಕರ್ಣಕ್ಕೆ ಆಗಮಿಸುವ DCM ಡಿ.ಕೆ.ಶಿವಕುಮಾರ್, ಅಲ್ಲಿಂದ ಅಂದ್ಲೆಯ ಜಗದೀಶ್ವರಿ ದೇವಾಲಯಕ್ಕೆ ತೆರಳಿ ಅರ್ಚಕ ಗಣಪತಿ ಅವರ ನೇತೃತ್ವದಲ್ಲಿ ಏಕಾಂತ ಪೂಜಾಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಪೂಜೆಯ ವೇಳೆ ಪ್ರಸಾದ ರೂಪದಲ್ಲಿ ಫಲ ಕೇಳಲಿದ್ದಾರೆ. ಈ ಸಂದರ್ಭ ದೇವಾಲಯದಲ್ಲಿ ಬೆಂಬಲಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಇದನ್ನು ಓದಿ : ಪವಿತ್ರ ಗೌಡ ಸೆಲ್ಗೆ ಬಂತು ಟಿವಿ..!
3 ಗಂಟೆಗಳ ಕಾಲ ಪೂಜಾಕಾರ್ಯ
ಹರಕೆ ಸಿದ್ಧಿ ಹಾಗೂ ಪ್ರಶ್ನಾ ಫಲಕ್ಕೆ ಪ್ರಸಿದ್ಧಿ ಪಡೆದಿರುವ ಅಂದ್ಲೆ ಜಗದೀಶ್ವರಿ ದೇವಾಲಯಕ್ಕೆ ಡಿ.ಕೆ.ಶಿವಕುಮಾರ್ ಈ ಹಿಂದೆ 2019ರಲ್ಲಿ ಭೇಟಿ ನೀಡಿದ್ದು, ತಮ್ಮ ಮನೋಇಚ್ಛೆ ಪೂರೈಕೆಗೆ ಮೂರು ಗಂಟೆಗಳ ಕಾಲ ಏಕಾಂತ ಪೂಜಾಕಾರ್ಯ ನೆರವೇರಿಸಿದ್ದರು.
ಜಕೀಯ ವಲಯದಲ್ಲಿ ಕುತೂಹಲ
ಇದೀಗ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಗೊಂದಲದ ನಡುವೆಯೇ ಡಿ.ಕೆ.ಶಿವಕುಮಾರ್ ಮತ್ತೆ ಈ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನು ನೋಡಿ : ಏನೋ ಮಾತನಾಡಬೇಕು ಅಂತ ಕರೆಸಿ ರೌಡಿಶೀಟರ್ JCB MANJA ಮೇಲೆ ಅಟ್ಯಾಕ್




