Pavithra Gowda ಇರುವ ಸೆಲ್ನಲ್ಲಿ ಟಿವಿ ಅಳವಡಿಸಲು ಕೋರ್ಟ್ ಆದೇಶಿಸಿದೆ.

ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಪ್ರವಾಸವಲ್ಲಿರುವ ಎ1 ಪವಿತ್ರಾಗೌಡರ ಸೆಲ್ನಲ್ಲಿ ಟಿವಿ ಅಳವಡಿಸಲು ಕೋರ್ಟ್ ಆದೇಶ ನೀಡಿದೆ. ದರ್ಶನ್ ಬಳಿಕ, ಈಗ ಪವಿತ್ರಾಗೌಡ ಅವರ ಸೆಲ್ಗೂ ಟಿವಿ ಬಂದಿದೆ.
ಅಂತೂ, ಇಂತೂ ಪವಿತ್ರ ಗೌಡ ಸೆಲ್ಗೂ ಬಂತು ಟಿವಿ..!
ಪವಿತ್ರಾಗೌಡ ಜೈಲಿನಲ್ಲಿ ಟಿವಿ, ದಿನಪತ್ರಿಕೆ, ಗ್ರಂಥಾಲಯ ಪುಸ್ತಕಗಳು, ರೇಡಿಯೋ ಮತ್ತು ಧ್ಯಾನಕ್ಕೆ ಅವಕಾಶ ನೀಡಲು ಮನವಿ ಸಲ್ಲಿಸಿದ್ದರು. ಇದನ್ನು ಗಮನದಲ್ಲಿಿಟ್ಟುಕೊಂಡು, ಕೋರ್ಟ್ ಅಧಿಕಾರಿಗಳಿಗೆ ಟಿವಿ, ದಿನಪತ್ರಿಕೆ ಮತ್ತು ಗ್ರಂಥಾಲಯ ಪುಸ್ತಕಗಳನ್ನು ಒದಗಿಸಲು ಸೂಚನೆ ನೀಡಿದೆ.
ಇದನ್ನು ಓದಿ : ರೌಡಿಶೀಟರ್ ಜೆಸಿಬಿ ಮಂಜನ ಮೇಲೆ ಗ್ಯಾಂಗ್ ಅಟ್ಯಾಕ್
ಇನ್ನು ನಿನ್ನೆಯಿಂದ 64ನೇ CCH ಕೋರ್ಟ್ನಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ಇಂದು ರೇಣುಕಾಸ್ವಾಮಿ ತಂದೆ ತಾಯಿಯನ್ನ Pavithra Gowda ಪರ ವಕೀಲ ಬಾಲನ್ ಕ್ರಾಸ್ ಎಕ್ಸಾಮಿನೇಷನ್ ಮಾಡಲಿದ್ದಾರೆ.
ಕೋರ್ಟ್ಗೆ ಹಾಜರಾಗಲಿದ್ದಾರೆ
ನಂತರ ಹಿರಿಯ ವಕೀಲ ಸಿ.ವಿ. ನಾಗೇಶ್ ರೇಣುಕಾಸ್ವಾಮಿ ತಾಯಿಯ ವಿಚಾರಣೆ ನಡೆಸಲಿದ್ದಾರೆ. ಇದೇ ವೇಳೆ, ಜೈಲು ಮೂಲಕ ವಿಸಿ ಕನೆಕ್ಷನ್ ಮೂಲಕ ದರ್ಶನ್, ಪವಿತ್ರಾಗೌಡ ಮತ್ತು ಗ್ಯಾಂಗ್ ಕೋರ್ಟ್ಗೆ ಹಾಜರಾಗಲಿದ್ದಾರೆ.
ಇದನ್ನು ನೋಡಿ : ಬೆಂಗಳೂರಿನಲ್ಲಿ ಸಿನಿಮಾ ನಿರ್ಮಾಪಕ, ಸಿದ್ದಾಪುರದಲ್ಲಿ ಕಳ್ಳ.. ನಟಿ ಅಪಹರಣ ಕೇಸ್ಗೆ ತಿರುವು..!




