ರೌಡಿಶೀಟರ್ ಮಂಜನ ಮೇಲೆ ಮಾರಕಾಸ್ತ್ರಗಳಿಂದ Attack ಮಾಡಿದ ಗ್ಯಾಂಗ್.

ಹಾಸನದಲ್ಲಿ ಇತ್ತೀಚಿನ ದಿನಗಳಲ್ಲಿ ಕೊಲೆ, ಸುಲಿಗೆ, ಹಲ್ಲೆಯಂತ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇತ್ತ ಪುಡಿರೌಡಿಗಳು ಹುಟ್ಟಿಕೊಂಡು ಜಿಲ್ಲೆಯ ಶಾಂತಿಯನ್ನು ಕದಡುತ್ತಿದ್ದಾರೆ. ಕ್ರೈಂ ರೇಟ್ ತಡೆಗಟ್ಟಲು ಪೊಲೀಸರು ಎಷ್ಟೇ ಕ್ರಮಕೈಗೊಂಡರು ಇಂದಿಗೂ ಈ Crime Rate ಕಡಿಮೆಯಾಗುತ್ತಿಲ್ಲ.
ಇತ್ತ ಹಾಸನದ ರೌಡಿಶೀಟರ್ ಜೆಸಿಬಿ ಮಂಜನ ಮೇಲೆ ಗ್ಯಾಂಗ್ ಒಂದು ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿದ್ದಾರೆ. ಈ ಸುದ್ದಿ ಇದೀಗ ಹಾಸನದಲ್ಲಿ ಫುಲ್ ಸದ್ದು ಮಾಡುತ್ತಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.

ಹಾಸನದ ರಿಂಗ್ ರಸ್ತೆಯಲ್ಲು ಘಟನೆ
ಹಾಸನದ ನಗರದ ರಿಂಗ್ ರಸ್ತೆಯಲ್ಲಿ ಘಟನೆ ನಡೆದಿದ್ದು, ರೌಡಿಶೀಟರ್ ಜೆಸಿಬಿ ಮಂಜನ ಮೇಲೆ ಗ್ಯಾಂಗ್ ಒಂದು Attack ಮಾಡಿದೆ. ಮನೆಯಲ್ಲಿದ್ದ ಜೆಸಿಬಿ ಮಂಜನನ್ನು ಮಾತನಾಡಬೇಕೆಂದು ಫೋನ್ ಮಾಡಿ ರಾಜಿ ಎನ್ನುವ ವ್ಯಕ್ತಿ ಕರೆಸಿ ಕೊಂಡಿದ್ದನಂತೆ.
ಈ ವೇಳೆ ಬಾರ್ ಪಕ್ಕದಲ್ಲಿರುವ ಫುಟ್ಪಾತ್ ನಲ್ಲಿ ಪೋನಿನಲ್ಲಿ ಮಾತನಾಡಿಕೊಂಡು ನಿಂತಿದ್ದ ಜೆಸಿಬಿ ಮಂಜನ ಮೇಲೆ ಕುತ್ತಿಗೆಗೆ ಭರ್ಜಿಯಿಂದ ತಿವಿದು ಕೊಲೆಗೆ ಯತ್ನಿಸಿದ್ದಾರೆ. ಕೂದಲೆಳೆ ಅಂತರದಲ್ಲಿ ರೌಡಿಶೀಡರ್ ಜೆಸಿಬಿ ಮಂಜ ಪಾರಾಗಿದ್ದಾನೆ.
ಇದನ್ನು ಓದಿ : ಬಿಗ್ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್

20ಕ್ಕೂ ಹೆಚ್ಚು ಪುಡಿರೌಡಿಗಳಿದ್ದ ಗ್ಯಾಂಗ್ ಅಟ್ಯಾಕ್
ಇನ್ನು ಜೆಸಿಬಿ ಮಂಜನ ಮೇಲೆ ಇಪ್ಪತ್ತಕ್ಕೂ ಹೆಚ್ಚು ಪುಡಿರೌಡಿಗಳಿದ್ದ ಗ್ಯಾಂಗ್ ಅಟ್ಯಾಕ್ ಮಾಡಿದೆ. ಆದ್ರೆ ಪ್ರಾಣಾಪಾಯದಿಂದ ಜೆಸಿಬಿ ಮಂಜ ಪಾರಾಗಿದ್ದು, ಕುತ್ತಿಗೆಯ ಭಾಗಕ್ಕೆ ಚಾಕುವಿನಿಂದ ತುವಿದಿದ್ದಾರೆ. ಇನ್ನು ಜೆಸಿಬಿ ಮಂಜನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ಹಾಸನ ಬಡಾವಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನು ನೋಡಿ : ಸಚಿವ ಕೃಷ್ಣಬೈರೇಗೌಡ ಕೆರೆಯನ್ನು ನುಂಗಿದ್ರಾ – ನನ್ನ ಹಕ್ಕು ಬಿಟ್ಟುಕೊಡ್ತೀನಿ ಅಂತಾ ಅಂದಿದ್ಯಾಕೆ?




