Sira : ಮಹಿಳೆಯರಲ್ಲಿ ಕಾನೂನು ಅರಿವು ಮೂಡಿಸಿದ ಪೊಲೀಸರು.

ಅಪರಾಧ ತಡೆ ಮಾಸಾಚರಣೆ ಹಾಗೂ ನಶೆ ಮುಕ್ತ ತುಮಕೂರು ಅಭಿಯಾನದ ಅಂಗವಾಗಿ Sira ನಗರ ಪೊಲೀಸ್ ಠಾಣೆ ವತಿಯಿಂದ ಶಿರಾದಲ್ಲಿ ಮಹಿಳೆಯರಿಗೆ ವಿಶೇಷ ಅರಿವು ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು.
ಕಾನೂನು ಅರಿವು ಮೂಡಿಸಿದ ಪೊಲೀಸರು
ನಗರ ಠಾಣಾ ವ್ಯಾಪ್ತಿಯ ಮಾನಂಗಿ ಗ್ರಾಮದಲ್ಲಿರುವ ಗೋ ದೇಶೀ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರಿಗೆ ಉದ್ದೇಶಿಸಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇನ್ನು ಈ ಕಾರ್ಯಕ್ರಮದಲ್ಲಿ ನಗರ ಪಿಎಸ್ಐ ರೇಣುಕಾ ಯಾದವ್ ಅವರು ಮಹಿಳೆಯರ ವಿರುದ್ಧ ನಡೆಯುವ ಶೋಷಣೆ, ದೌರ್ಜನ್ಯ, ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳ ಹಾಗೂ ಆನ್ಲೈನ್ ವಂಚನೆಗಳ ಕುರಿತು ಮಹಿಳೆಯರಲ್ಲಿ ಅರಿವು ಮೂಡಿಸಿದ್ರು.
ಇದನ್ನು ಓದಿ : BBK 12 : ಸುದೀಪ್ ಎದುರೇ ರಜತ್ಗೆ ಸವಾಲ್ ಹಾಕಿದ ಗಿಲ್ಲಿ

ನಶೆಮುಕ್ತ ಜೀವನ
ಇನ್ನು ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ವಿವರಿಸಿ, ನಶೆಮುಕ್ತ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರ ಪಾತ್ರ ಮಹತ್ವದ್ದೆಂದು ತಿಳಿಸಿದ್ರು.
ಪೊಲೀಸರ ಬಗ್ಗೆ ಭಯಪಡುವ ಅಗತ್ಯವಿಲ್ಲ
ಇನ್ನು ಪೊಲೀಸರ ಬಗ್ಗೆ ಭಯಪಡುವ ಅಗತ್ಯವಿಲ್ಲ, ಬದಲಾಗಿ ಜನಸ್ನೇಹಿ ಸಹಾಯಕರು ಎಂಬ ಭಾವನೆ ಮೂಡಿಸುವ ನಿಟ್ಟಿನಲ್ಲಿ ಪೊಲೀಸ್–ಜನ ಸ್ನೇಹ ಸಂಬಂಧದ ಮಹತ್ವವನ್ನು ವಿವರಿಸಲಾಯ್ತು. ಅಲ್ದೇ ಇದರ ಜೊತೆಗೆ ಶಾಲಾ ಮಕ್ಕಳಿಗೂ ಅಪರಾಧ ತಡೆ ಹಾಗೂ ನಶೆಮುಕ್ತ ಜೀವನದ ಕುರಿತು ಅರಿವು ಮೂಡಿಸಲಾಯ್ತು.

ಇದನ್ನು ನೋಡಿ : ಗೃಹ ಸಚಿವರ ತವರಲ್ಲೇ ತಾರಕಕ್ಕೇರಿದ ಅಬಕಾರಿ ಅಕ್ರಮ




