ರಜತ್ ಆಚೆ ಕಳಿಸಿಯೇ ನಾನು ಆಚೆ ಹೋಗೋದು – Gilli.

ಬಿಗ್ ಬಾಸ್ (Bigg Boss) ಮನೆಯಲ್ಲಿ ಟಾಸ್ಕ್ ವಾರ್ ಜೋರಾಗಿದೆ. ಮನೆಯಲ್ಲಿ ಇದುವರೆಗೂ ಫ್ರೆಂಡ್ಗಳಂತೆ ಕಾಣಿಸಿಕೊಂಡಿದ್ದ ರಜತ್ ಮತ್ತು ಗಿಲ್ಲಿ ಇದೀಗ ಕಿಚ್ಚ ಸುದೀಪ್ ಎದುರೇ ಕಿತ್ತಾಡಿಕೊಂಡಿದ್ದಾರೆ.
ಯಾರ ಪಾಪದ ಕೊಡ ತುಂಬಿದೆ
ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್ ‘ಯಾರ ಪಾಪದ ಕೊಡ ತುಂಬಿದೆ’ ಎಂಬ ಟಾಸ್ಕ್ ನೀಡಿದರು. ಸ್ಪರ್ಧಿಗಳನ್ನು ಸಾಲಾಗಿ ನಿಲ್ಲಿಸಿ, ಅವರ ಮುಂದೆ ಗಾಜಿನ ಬೌಲ್ಗಳನ್ನು ಇಡಲಾಗಿತ್ತು. ಒಬ್ಬೊಬ್ಬರಾಗಿ ಬಂದು ನೀರು ತೆಗೆದುಕೊಂಡು, ತಾವು ಆಯ್ಕೆ ಮಾಡುವ ಸ್ಪರ್ಧಿಯ ಬೌಲ್ಗೆ ನೀರು ಹಾಕಿ ಕಾರಣ ಹೇಳಬೇಕು ಎಂಬುದು ಟಾಸ್ಕ್ನ ನಿಯಮ.
“Gilli ಗೆ ಟಾಸ್ಕ್ ಆಡೋದು ಬರಲ್ಲ”
ಈ ಟಾಸ್ಕ್ ವೇಳೆ Gilļi ರಜತ್ ಅವರನ್ನು ಆಯ್ಕೆ ಮಾಡಿಕೊಂಡರು. ಇದರಿಂದ ಕೋಪಗೊಂಡ ರಜತ್, “ಗಿಲ್ಲಿಗೆ ಟಾಸ್ಕ್ ಆಡೋದು ಬರಲ್ಲ” ಎಂದು ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಗಿಲ್ಲಿ ಕೂಡ ಸುಮ್ಮನಿರಲಿಲ್ಲ. ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು.
ಇದನ್ನು ಓದಿ : ದಾವಣಗೆರೆ ಗಡಿ ಗ್ರಾಮದಲ್ಲಿ ವಿಚಿತ್ರ ಶಬ್ಧ – ಬೆಚ್ಚಿಬಿದ್ದ ಗ್ರಾಮಸ್ಥರು

“ರಜತ್ನ ಆಚೆ ಕಳಿಸಿಯೇ ನಾನು ಆಚೆ ಹೋಗೋದು”
“ಎಲ್ಲರನ್ನೂ ಆಚೆ ಕಳಿಸಿಯೇ ನಾನು ಹೋಗೋದು” ಎಂದು ರಜತ್ ಗಿಲ್ಲಿಗೆ ಸವಾಲ್ ಹಾಕಿದ್ದು, “ರಜತ್ನ ಆಚೆ ಕಳಿಸಿಯೇ ನಾನು ಆಚೆ ಹೋಗೋದು” ಎಂದು Gilli ಪ್ರತಿ ಸವಾಲ್ ಹಾಕಿದ್ದಾರೆ.
ಈ ವಾಗ್ವಾದದ ನಡುವೆ ಅಶ್ವಿನಿ ಗೌಡ ಚಪ್ಪಾಳೆ ತಟ್ಟುತ್ತಾರೆ. ಯಾರ ಮಾತಿಗೆ ಅವರು ಚಪ್ಪಾಳೆ ತಟ್ಟುತ್ತಾರೆ ಅನ್ನೋದು ಕುತೂಹಲ.
ಇದನ್ನು ನೋಡಿ : DEVIL COLLECTION ?| ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸ್ತಿದೆ DEVIL – 2ನೇ ದಿನದ ಕಲೆಕ್ಷನ್ ಎಷ್ಟು ಗೊತ್ತಾ..?





